»   » 'ಜಗ್ಗು ದಾದಾ' ದರ್ಶನ್ ಜೊತೆ ರಚಿತಾ ರಾಮ್ ಗೆ ಏನು ಕೆಲಸ?

'ಜಗ್ಗು ದಾದಾ' ದರ್ಶನ್ ಜೊತೆ ರಚಿತಾ ರಾಮ್ ಗೆ ಏನು ಕೆಲಸ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬುಲ್ ಬುಲ್' ಚಿತ್ರದ ಮೂಲಕ ಕನ್ನಡ ಬೆಳ್ಳಿ ಪರದೆ ಮೇಲೆ ಮಿಂಚಿದ ಚೆಲುವೆ ರಚಿತಾ ರಾಮ್.

ದರ್ಶನ್ ಜೊತೆ 'ಅಂಬರೀಶ' ಸಿನಿಮಾದಲ್ಲೂ ಕಾಣಿಸಿಕೊಂಡ ರಚಿತಾ ರಾಮ್, ಇದೀಗ 'ಜಗ್ಗು ದಾದಾ' ಚಿತ್ರದಲ್ಲೂ 'ದಾಸ'ನ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ.

Rachita Ram goes traditional for Darshan's 'Jaggu Dada'

ಹಾಗಾದ್ರೆ, 'ಜಗ್ಗು ದಾದಾ' ಚಿತ್ರದಲ್ಲಿ ರಚಿತಾ ರಾಮ್ ಗೆ ಸಿಕ್ಕಿರುವ ಪಾತ್ರವೇನು? ಅಂತ ಕೇಳಿದ್ರೆ, ''ತುಂಬಾ ಚಿಕ್ಕ ಪಾತ್ರ'' ಎಂಬ ಉತ್ತರ ಗುಳಿ ಕೆನ್ನೆಯ ಬೆಡಗಿಯಿಂದ ಬರುತ್ತೆ. [ಮತ್ತೆ ದರ್ಶನ್ ಜೊತೆ 'ಬುಲ್ ಬುಲ್' ಬೆಡಗಿ ರೋಮ್ಯಾನ್ಸ್]

Rachita Ram goes traditional for Darshan's 'Jaggu Dada'

ಹೌದು, 'ಜಗ್ಗು ದಾದಾ' ಚಿತ್ರದಲ್ಲಿ ರಚಿತಾ ರಾಮ್ ರದ್ದು ಜಸ್ಟ್ ಕೇಮಿಯೋ ರೋಲ್. ಹೀಗೆ ಬಂದು ಹಾಗೆ ಹೋಗುವ ಪಾತ್ರದಲ್ಲಿ ಅಪ್ಪಟ ಸಂಪ್ರದಾಯಸ್ತ ಕುಟುಂಬದ ಹೆಣ್ಣುಮಗಳಾಗಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ.[ದರ್ಶನ್ ಗೆ ಜೋಡಿಯಾದ ಮಿರ್ಚಿ 'ಮೆಣಸಿನಕಾಯಿ' ದೀಕ್ಷಾ]

Rachita Ram goes traditional for Darshan's 'Jaggu Dada'

'ಜಗ್ಗು ದಾದಾ' ಸಿನಿಮಾ ಶೂಟಿಂಗ್ ಗಾಗಿ ರಚಿತಾ ರಾಮ್ ನೀಡಿರುವ ಕಾಲ್ ಶೀಟ್ ಕೇವಲ ಎರಡು ದಿನಗಳು. ಆಗಲೇ ಒಂದು ದಿನದ ಚಿತ್ರೀಕರಣ ನಡೆದಿದ್ದು, ಮತ್ತೊಂದು ದಿನ ಬಾಕಿ ಇದೆ.

Rachita Ram goes traditional for Darshan's 'Jaggu Dada'

ಇಂಥದ್ದೇ ಅತಿಥಿ ಪಾತ್ರದಲ್ಲಿ ನಟಿ ಪ್ರಣೀತಾ ಕೂಡ ಇದ್ದಾರೆ. ಅಂದ್ಹಾಗೆ, 'ಜಗ್ಗು ದಾದಾ' ಚಿತ್ರದಲ್ಲಿ ದರ್ಶನ್ ಗೆ ನಾಯಕಿ ಆಗಿರುವುದು ನಟಿ ದೀಕ್ಷಾ ಸೇಠ್. ರಾಘವೇಂದ್ರ ಹೆಗಡೆ ಚಿತ್ರದ ಸೂತ್ರಧಾರ.

Rachita Ram goes traditional for Darshan's 'Jaggu Dada'

ಇನ್ನೂ ಶೂಟಿಂಗ್ ಹಂತದಲ್ಲಿ ಇರುವ 'ಜಗ್ಗು ದಾದಾ' ನಿಮ್ಮ ಮುಂದೆ ಬರುವುದಕ್ಕೆ ತುಂಬಾ ಟೈಮ್ ಬೇಕು.

English summary
Kannada Actress Rachita Ram will be seen playing a traditional girl in Darshan starrer Kannada Movie 'Jaggu Dada'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada