ಚಿತ್ರರಂಗದಲ್ಲಿ ಯಶಸ್ವಿ ಐದು ವರ್ಷ ಪೂರೈಸಿದ ಡಿಂಪಲ್ ಕ್ವೀನ್
Recommended Video

ಕಿರುತೆರೆಯಲ್ಲಿ ಅರಸಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ನಟಿ ರಚಿತಾ ರಾಮ್. ಇವರ ಅಭಿನಯ ನೋಡಿ ನಿರ್ದೇಶಕ ದಿನಕರ್ ತೂಗುದೀಪ ತಮ್ಮ ನಿರ್ಮಾಣದ 'ಬುಲ್ ಬುಲ್' ಚಿತ್ರಕ್ಕೆ ನಾಯಕಿಯಾಗಿ ಕರೆತಂದರು.
ಅಭಿನಯಿಸದ ಮೊದಲ ಸಿನಿಮಾದಲ್ಲೇ ತಮ್ಮ ಡಿಂಪಲ್ ನಗುವಿನಿಂದ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದ ನಟಿ ರಚಿತಾ ರಾಮ್. ಅಲ್ಲಿಂದ ಇಲ್ಲಿಯವರೆಗೂ ಹಿಂತಿರುಗಿ ನೋಡದ ರಚಿತಾ, ಪ್ರತಿ ಸಿನಿಮಾ ಮೂಲಕ ಯಶಸ್ಸಿನ ಮೆಟ್ಟಿಲು ಏರುತ್ತಿದ್ದಾರೆ.
ಸದ್ಯ ಕನ್ನಡ ಸಿನಿಮಾರಂಗದಲ್ಲಿ ಬ್ಯುಸಿ ಆಗಿರುವ ರಚಿತಾ ರಾಮ್ ಕೈ ತುಂಬಾ ಸಿನಿಮಾಗಳಿವೆ. ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ಅಭಿನಯ ಮಾಡಿದ್ದು ಈ ವರ್ಷದಲ್ಲಿ ಡಿಂಪಲ್ ಕ್ವೀನ್ ವಿಭಿನ್ನ ಎನ್ನಿಸುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಐದು ವರ್ಷದಲ್ಲಿ ಡಿಂಪಲ್ ಕ್ವೀನ್ ನಡೆದು ಬಂದ ಹಾದಿಯ ಬಗ್ಗೆ ಕ್ವಿಕ್ ರೌಂಡ್ ಅಪ್ ಇಲ್ಲಿದೆ. ಮುಂದೆ ಓದಿ

ಕನ್ನಡದ ನಂಬರ್ 1 ನಟಿ ರಚಿತಾ ರಾಮ್
ರಚಿತಾ ರಾಮ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಂಬರ್ 1 ಪಟ್ಟವನ್ನು ಪಡೆದುಕೊಂಡಿರುವ ನಟಿ. ಕನ್ನಡ ಸಿನಿಮಾರಂಗದಲ್ಲಿರುವ ಟಾಪ್ ಸ್ಟಾರ್ ಗಳ ಜೊತೆ ಡಿಂಪಲ್ ಕ್ವೀನ್ ಅಭಿನಯ ಮಾಡಿದ್ದು. ತಮ್ಮ ನಟನೆಯಿಂದಲೇ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.

ವರ್ಷ ಪೂರ್ತಿ ಬ್ಯುಸಿ ಆದ ನಟಿ
ರಚಿತಾ ರಾಮ್ ಕೈನಲ್ಲಿ ಸಾಕಷ್ಟು ಸಿನಿಮಾಗಳಿವೆ. ಸದ್ಯ 'ಅಯೋಗ್ಯ', 'ಸೀತಾ ರಾಮ ಕಲ್ಯಾಣ', 'ಐ ಲವ್ ಯು' ಚಿತ್ರಗಳಲ್ಲಿ ಅಭಿನಯ ಮಾಡುತ್ತಿದ್ದು ಇದೇ ತಿಂಗಳಲ್ಲಿ ಮತ್ತೆರೆಡು ಚಿತ್ರಗಳು ಅನೌನ್ಸ್ ಆಗಲಿದೆ.

ಹೀರೋಯಿನ್ ಓರಿಯೆಂಟೆಡ್ ಚಿತ್ರದಲ್ಲಿ ನಟನೆ
ರಚಿತಾ ರಾಮ್ ಐದು ವರ್ಷದ ನಂತರ ಮಹಿಳಾ ಪ್ರಧಾನ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದು ಇದೇ ತಿಂಗಳಲ್ಲಿ ಚಿತ್ರದ ಫಸ್ಟ್ ಲುಕ್ ಜೊತೆಗೆ ಸಿನಿಮಾ ಬಗ್ಗೆ ಮಾಹಿತಿಯನ್ನೂ ನೀಡುತ್ತಾರಂತೆ.

ಗಾಸಿಪ್ ಇಲ್ಲದ ನಟಿ
ಸ್ಯಾಂಡಲ್ ವುಡ್ ನಲ್ಲಿ ಯಶಸ್ವಿಯಾಗಿ ಐದು ವರ್ಷಗಳನ್ನು ಪೂರೈಸಿರುವ ನಟಿ ರಚಿತಾ ರಾಮ್, ಇಲ್ಲಿಯವರೆಗೂ ಯಾವುದೇ ರೀತಿಯ ಗಾಸಿಪ್ ಮಾಡಿಕೊಂಡಿಲ್ಲ. ಚಿತ್ರತಂಡದ ಜೊತೆಯಲ್ಲಿ ಕಿರಿಕ್ ಮಾಡಿಕೊಳ್ಳದೆ ತಾನಾಯ್ತು ತನ್ನ ಕೆಲಸವಾಯ್ತು ಎನ್ನುವ ನಟಿ.

ಕೆಲವೇ ವರ್ಷದಲ್ಲಿ ನಿರ್ಮಾಣ
ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿರುವ ನಟಿ ರಚಿತಾ ರಾಮ್ ಅದರ ಮೂಲಕವೇ 'ರಿಷಭ ಪ್ರಿಯಾ' ಎನ್ನುವ ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ತಮ್ಮ ನಿರ್ಮಾಣದಲ್ಲಿ ಚಿತ್ರವನ್ನು ಪ್ರೊಡ್ಯೂಸ್ ಮಾಡಲಿದ್ದಾರೆ.


Click it and Unblock the Notifications











