»   » 'ಅಪ್ಪು' ಚಿತ್ರದಿಂದ ಹೋದವರನ್ನ ಬಿಟ್ಟು, ಬಂದವರಿಗೆ ಟೀಕೆ.! ಇದು ಸರಿನಾ.?

'ಅಪ್ಪು' ಚಿತ್ರದಿಂದ ಹೋದವರನ್ನ ಬಿಟ್ಟು, ಬಂದವರಿಗೆ ಟೀಕೆ.! ಇದು ಸರಿನಾ.?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಹೊಸ ಚಿತ್ರದ ಪೋಸ್ಟರ್, ಟೈಟಲ್, ಟೀಸರ್ ಹೀಗೆ ಎಲ್ಲವೂ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಹೀರೋಯಿನ್ ಆಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಆಯ್ಕೆಯಾಗಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ.

ಈ ಮಧ್ಯೆ 'ನಟ ಸಾರ್ವಭೌಮ' ಚಿತ್ರದ ನಾಯಕಿ ವಿಚಾರದಲ್ಲಿ ಅಭಿಮಾನಿಗಳಿಗೆ ಬೇಸರವಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಪುನೀತ್ ಸಿನಿಮಾಗೆ ರಚಿತಾ ರಾಮ್ ಅವರನ್ನ ಆಯ್ಕೆ ಮಾಡಿರುವುದಕ್ಕೆ ಫ್ಯಾನ್ಸ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಅದೇ ರೀತಿ ರಚಿತಾ ರಾಮ್ ಪವರ್ ಸ್ಟಾರ್ ಸಿನಿಮಾಗೆ ನಾಯಕಿಯಾಗಿರುವುದರ ಬಗ್ಗೆ ಸಂತಸಗೊಂಡಿರುವ ಅಭಿಮಾನಿಗಳು ಇದ್ದಾರೆ. ರಚಿತಾಗೂ ಮೊದಲು ಪರಭಾಷೆ ನಟಿ ಪ್ರಿಯಾಂಕಾ ಪುನೀತ್ ಗೆ ಜೋಡಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಬಂತು. ಆದ್ರೆ, ಕೊನೆ ಘಳಿಗೆಯಲ್ಲಿ ಕನ್ನಡದ ನಟಿಯೇ ಅಂತಿಮವಾದರೂ. ಇದರಲ್ಲಿ ವಿರೋಧಿಸುವುದೇನಿದೆ.? ಮುಂದೆ ಓದಿ....

ಕನ್ನಡ ನಟಿ ನಾಯಕಿ ಆಯ್ಕೆಯಾಗಿದ್ದಕ್ಕೆ ಖುಷಿ ಇದೆ.!

ಸಾಮಾನ್ಯವಾಗಿ ಕನ್ನಡದ ಸ್ಟಾರ್ ನಟರ ಜೊತೆ ಅಭಿನಯಿಸಲು ಪರಭಾಷೆ ನಾಯಕಿಯರಿಗೆ ಮಣೆ ಹಾಕುತ್ತಾರೆ ಎಂಬ ಆರೋಪ ಇದೆ. ಇಂತಹ ಆರೋಪಗಳ ಮಧ್ಯೆ ಪುನೀತ್ 'ನಟ ಸಾರ್ವಭೌಮ' ಚಿತ್ರದಲ್ಲಿ ಕನ್ನಡ ನಟಿ ರಚಿತಾ ರಾಮ್ ಗೆ ಅವಕಾಶ ನೀಡಲಾಗಿದೆ. ಇದು ಖುಷಿಯ ವಿಚಾರ.

ಮತ್ತೆ ಮೋಡಿ ಮಾಡಲಿ ರಚ್ಚು-ಅಪ್ಪು ಜೋಡಿ

ಈ ಹಿಂದೆ 'ಚಕ್ರವ್ಯೂಹ' ಚಿತ್ರದದಲ್ಲಿ ರಚಿತಾ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಒಟ್ಟಾಗಿ ಅಭಿನಯಿಸಿದ್ದರು. ಸಿನಿಮಾ ಯಶಸ್ಸು ಕಂಡಿತ್ತು. ಇಬ್ಬರ ಜೋಡಿ ಕೂಡ ಹಿಟ್ ಆಗಿತ್ತು. ಈಗ ಎರಡನೇ ಬಾರಿ ರಚಿತಾ ಹಾಗೂ ಅಪ್ಪು ಸಿನಿಮಾ ಮಾಡ್ತಿದ್ದಾರೆ. ಈ ಸಲವೂ ಸಿನಿಮಾ ಬ್ಲ್ಯಾಕ್ ಬಸ್ಟರ್ ಹಿಟ್ ಆಗಲಿ ಎನ್ನುತ್ತಿದ್ದಾರೆ ಅಭಿಮಾನಿಗಳು.

ಸ್ಟಾರ್ ನಟರ ಅದೃಷ್ಟದ ನಾಯಕಿ

ಚೊಚ್ಚಲ ಸಿನಿಮಾದಿಂದ ಇಲ್ಲಿಯವರೆಗೂ ಬಹುತೇಕ ಸ್ಟಾರ್ ನಟರ ಸಿನಿಮಾಗಳಲ್ಲಿಯೇ ನಾಯಕಿಯಾಗಿ ಅಭಿನಯಿಸಿರುವ ರಚಿತಾ ರಾಮ್ ಅದೃಷ್ಟದ ನಾಯಕಿ. ದರ್ಶನ್, ಸುದೀಪ್, ಶ್ರೀಮುರಳಿ, ಧ್ರುವ ಸರ್ಜಾ, ರಮೇಶ್ ಅರವಿಂದ್ ಅಂತಹ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ರಚ್ಚು ಸದ್ಯ ಕನ್ನಡದ ಟಾಪ್ ನಾಯಕಿಯರಲ್ಲಿ ಒಬ್ಬರು.

ಪ್ರಿಯಾಂಕಾ ಹೊರಹೋಗಿದ್ದೇಕೆ.?

ರಚಿತಾ ರಾಮ್ ಗೂ ಮುಂಚೆ ಮಹಾರಾಷ್ಟ್ರದ ಅನಂತಪುರದ ಹುಡುಗಿ ಪ್ರಿಯಾಂಕಾ ಜ್ವಾಲಕರ್ ಈ ಚಿತ್ರಕ್ಕೆ ನಾಯಕಿಯಾಗಿದ್ದರು. ಆದ್ರೆ, ಡೇಟ್ ಸಮಸ್ಯೆಯಿಂದ ಈ ನಟಿಯನ್ನ ಚಿತ್ರದಿಂದ ಕೈಬಿಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಪ್ರಿಯಾಂಕ ತೆಲುಗಿನಲ್ಲಿ ಈಗಾಗಲೇ ಒಂದು ಸಿನಿಮಾ ಮಾಡಿದ್ದಾರೆ. 'ಅರ್ಜುನ್ ರೆಡ್ಡಿ' ಖ್ಯಾತಿಯ ವಿಜಯ ದೇವರಕೊಂಡ ನಟನೆಯ 'ಟ್ಯಾಕ್ಸಿವಾಲಾ' ಸಿನಿಮಾದಲ್ಲಿ ಪ್ರಿಯಾಂಕಾ ಜ್ವಾಲಕರ್ ಕಾಣಿಸಿಕೊಂಡಿದ್ದಾರೆ. ನಂತರ ಅಪ್ಪು ಸಿನಿಮಾಗೆ ಆಯ್ಕೆಯಾಗಿದ್ದರು. ಪುನೀತ್ ಅಂತಹ ಸ್ಟಾರ್ ನಟ ಸಿನಿಮಾ ಬಿಟ್ಟು ಹೋದ ಪ್ರಿಯಾಂಕಾ ಬಗ್ಗೆ ಯಾರೊಬ್ಬರು ಮಾತಾಡಿಲ್ಲ.

ಚಿತ್ರತಂಡ ಖುಷಿಯಾಗಿದೆ

ಪುನೀತ್ ಗೆ ರಚಿತಾ ರಾಮ್ ನಾಯಕಿಯಾಗಿರುವುದಕ್ಕೆ ಸ್ವತಃ ಚಿತ್ರತಂಡವೇ ಖುಷಿಯಾಗಿದೆ. ಈಗಾಗಲೇ ರಚ್ಚು 'ನಟ ಸಾರ್ವಭೌಮ' ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಮೊದಲ ಸಿನಿಮಾದಲ್ಲಿ ಕೆಮಿಸ್ಟ್ರಿಗೆ ಹಿಟ್ ಆಗಿದ್ದಕ್ಕೆ ಎರಡನೇ ಸಿನಿಮಾದಲ್ಲಿ ಮತ್ತೆ ರಚಿತಾ ಅವರನ್ನ ನಾಯಕಯನ್ನಾಗಿಸಿರುವುದು ಎಂಬುದನ್ನ ನಾವು ಗಮನಿಸಬೇಕಿದೆ.

ಆಲ್ ದಿ ಬೆಸ್ಟ್ ರಚ್ಚು-ಅಪ್ಪು

ಅಭಿಮಾನಿಗಳು ಅದ್ಯಾಕೇ ವಿರೋಧಿಸುತ್ತಿದ್ದರೋ ಗೊತ್ತಿಲ್ಲ. ಆದ್ರೆ, 'ನಟ ಸಾರ್ವಭೌಮ' ಎಂಬ ಟೈಟಲ್ ನಲ್ಲಿ ಒಂದು ಸಿನಿಮಾ ಬರುತ್ತಿದೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಾಯಕ ಹಾಗೂ ರಚಿತಾ ರಾಮ್ ನಾಯಕಿ. ಈ ಚಿತ್ರ ಚೆನ್ನಾಗಿ ಮೂಡಿ ಬರಲಿ. ಪ್ರೇಕ್ಷಕರಿಗೆ ಒಳ್ಳೆ ಮನರಂಜನೆ ಸಿಗಲಿ ಎನ್ನುವುದು ಮಾತ್ರ ಅಭಿಮಾನಿಗಳ ಆಶಯ. ಎನಿ ವೇ ಆಲ್ ದಿ ಬೆಸ್ಟ್ 'ನಟ ಸಾರ್ವಭೌಮ' ಪುನೀತ್ ಹಾಗೂ ಡಿಂಪಲ್ ಕ್ವಿನ್ ರಚಿತಾ ರಾಮ್.

English summary
Actor Puneeth Rajkumar recently began shooting for his next film nata sarvabhouma being directed by Pavan Wadeyar. earlier, Priyanka, being roped in as the female lead. Finally Chakravyuha co-star Rachita Ram has team up with Puneeth Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X