For Quick Alerts
  ALLOW NOTIFICATIONS  
  For Daily Alerts

  ಐ ಲವ್‌ಯು ಚಿತ್ರದ ಬಳಿಕ ಮತ್ತೆ ಬೋಲ್ಡ್ ಅವತಾರದಲ್ಲಿ ನಟಿ ರಚಿತಾ ರಾಮ್!

  |

  ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ರಚಿತಾ ರಾಮ್ ಹೆಸರೇ ಸಾಕು ಆ ಸಿನಿಮಾನೇ ಅರ್ಧ ಗೆದ್ದ ಹಾಗೆ. ರಚಿತಾ ರಾಮ್ ಯಾವ ಸ್ಟಾರ್ ನಟನಿಗೂ ಕಡಿಮೆ ಇಲ್ಲ. ರಚಿತಾ ರಾಮ್‌ಗೆ ತಮ್ಮದೇ ಆದಂತಹ ಬೇಡಿಕೆ ಚಿತ್ರರಂಗದಲ್ಲಿ ಇದೆ. ಕೆಲ ಸಮಯ ಸ್ಟಾರ್ ನಟರ ಸಿನಿಮಾಗಳಿಗೆ ರಚಿತಾ ರಾಮ್ ಸೀಮಿತ ಆಗಿದ್ದರು. ಆದರೆ ಇತ್ತೀಚೆಗೆ ರಚಿತಾ ರಾಮ್ ವಿಭಿನ್ನ ಪಾತ್ರ ಪ್ರಯೋಗದಲ್ಲಿ ನಿರತರಾಗಿದ್ದಾರೆ. ರಚಿತಾ ರಾಮ್ ಈ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಾರಾ ಎನ್ನುವಂತಹ ಅಚ್ಚರಿ ಮೂಡಿಸುವಂತಹ ಪಾತ್ರಗಳಿಗೂ ಅವರು ಸಹಿಹಾಕಿದ್ದಾರೆ.

  ರಚಿತಾ ರಾಮ್‌ ಮತ್ತೆ ಬೋಲ್ಡ್‌ ಲುಕ್‌ನಲ್ಲಿ ಬಿಗ್‌ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಲವ್ ಯು ಅಚ್ಚು ಸಿನಿಮಾದಲ್ಲಿ ರಚಿತಾ ರಾಮ್ ಗೃಹಿಣಿಯ ಪಾತ್ರ ಮಾಡುತ್ತಿದ್ದಾರೆ. ಆದರೂ ರಚಿತಾ ರಾಮ್ ಈ ಸಿನಿಮಾದಲ್ಲಿ ಕೊಂಚ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಳ್ಳುವ ಸೂಚನೆ ಸಿಕ್ಕಿದೆ. ಸದ್ಯ ಈ ಚಿತ್ರದ ಮುದ್ದು ನೀನು ಹಾಡು ರಿಲೀಸ್‌ಗೆ ರೆಡಿಯಾಗಿದೆ. ಇದೇ ನವೆಂಬರ್ 9 ರಂದು ಹಾಡು ರಿಲೀಸ್ ಆಗಲಿದೆ. ಹಾಗಾಗಿ ಚಿತ್ರ ತಂಡ ಹಾಡಿನ ಪೋಸ್ಟರ್‌ ಬಿಡುಗಡೆ ಮಾಡಿದೆ.

  ಈ ಪೋಸ್ಟರ್‌ನಲ್ಲಿ ರಚಿತಾರಾಮ್ ಮತ್ತು ಅಜಯ್ ರಾವ್ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿ ಇಬ್ಬರೂ ಕೊಂಚ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ರಚಿತಾ ರಾಮ್ ಲುಕ್ ಬಗ್ಗೆ ಚರ್ಚೆಗೆ ಕಾರಣ ಆಗಿರುವುದು, ಈ ಹಿಂದೆ ಅಭಿನಯಿಸಿದ ಐ ಲವ್ ಯು ಸಿನಿಮಾ. ನಟ ಉಪೇಂದ್ರ ಜೊತೆಯಲ್ಲಿ ರಚಿತಾ ರಾಮ್ ಐ ಲವ್ ಯು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಹಾಡೊಂದರಲ್ಲಿ ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಹಿಂದೆಂದೂ ಕೂಡ ರಚಿತಾ ರಾಮ್ ಅಷ್ಟು ಬೋಲ್ಡ್‌ ಆಗಿ ದೊಡ್ಡ ಪರದೆ ಮೇಲೆ ಕಾಣಿಸಿ ಕೊಂಡಿರಲಿಲ್ಲ. ಹಾಗಾಗಿ ಮೊದಲ ಬಾರಿಗೆ ರಚಿತಾ ಅವರನ್ನು ಬೋಲ್ಡ್‌ ಆಗಿ ನೋಡಿದವರಲ್ಲಿ ಕೆಲವು ಇಲ್ಲ ಸಲ್ಲದ ಪ್ರಶ್ನೆ ಮಾಡಿದ್ದರು. ಆದರೆ ಎಷ್ಟೋ ಜನ ರಚಿತಾ ಅಭಿನಯದ ಬಗ್ಗೆ ಯಾವ ಆಕ್ಷೇಪವ್ನನೂ ಮಾಡಿರಲಿಲ್ಲ. ಇದೇ ವಿಚಾರವಾಗಿ ರಚಿತಾ ರಾಮ್ ಕಣ್ಣೀರು ಕೂಡ ಹಾಕಿದ್ದರು. ಪೋಷಕರ ಬಳಿ ರಚಿತಾರಾಮ್ ಕ್ಷಮೆ ಯಾಚಿಸಿದ್ದರು. ಸಿನಿಮಾದಲ್ಲಿ ಒಬ್ಬ ನಟಿಯಾಗಿ ನಿನ್ನನ್ನು ಒಪ್ಪಿಕೊಳ್ಳುತ್ತೇವೆ ಆದರೆ ಮಗಳಾಗಿ ನೋಡಲು ಸಾಧ್ಯ ಆಗುತ್ತಿಲ್ಲ ಎಂದು ರಚಿತಾರಾಮ್ ತಂದೆ ಹೇಳಿದ್ದರಂತೆ. ಈ ವಿಚಾರವನ್ನು ಹೇಳಿಕೊಂಡು ರಚಿತಾರಾಮ್ ಈ ಹಿಂದೆ ಕಣ್ಣೀರು ಹಾಕಿದ್ದರು. ಜೊತೆಗೆ ಇನ್ನು ಮುಂದೆ ಪೋಷಕರ ಮಾತನ್ನು ಮೀರುವುದಿಲ್ಲ. ಅವರ ಮಾತಿನಂತೆ ನಡೆದು ಕೊಳ್ಳುತ್ತೇನೆ, ಅವರಿಗೆ ನೋವು ಕೊಡುವಂತಹ ಕೆಲಸ ಮಾಡುವುದಿಲ್ಲ ಎಂದು ರಚಿತರಾಮ್ ಹೇಳಿಕೊಂಡಿದ್ದರು.

  Rachita Ram In Bold Avatar For Love You Rachchu Movie Song

  ಆದರೆ ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಇರೋ ಒಂದೇ ಒಂದು ಕನೆಕ್ಷನ್‌ ಅಂದ್ರೆ ಅದು ರಚಿತಾ ರಾಮ್‌ ಲುಕ್. ರಚಿತಾ ರಾಮ್ ಮತ್ತೆ ಐ ಲವ್ ಯು ಸಿನಿಮಾದ ಹಾಡಿನ ಮಾದರಿ ಅಲ್ಲಿಯೇ ಲವ್ ಯು ರಚ್ಚು ಚಿತ್ರದಲ್ಲಿಯೂ ಬೋಲ್ಡ್ ಆಗಿ ಕಾಣಿಸಿ ಕೊಳ್ಳಲಿದ್ದಾರಾ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ ಈ ಪೋಸ್ಟರ್. ಆದರೆ ಸದ್ಯಕ್ಕೆ ಬರಿ ಪೋಸ್ಟರ್ ಮಾತ್ರ ರಿಲೀಸ್ ಆಗಿದೆ. ಇನ್ನು ಪೂರ್ಣ ಹಾಡು ರಿಲೀಸ್ ಆದ ಬಳಿಕ ಹಾಡಿನ ಅಸಲಿಯತ್ತು ಏನು ಎನ್ನುವುದು ತಿಳಿಯಲಿದೆ.

  ರಚಿತಾ ರಾಮ್ ಒಂದಾದ ಮೇಲೆ ಒಂದರಂತೆ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಅವರ ನಟನೆಯ ಸುಮಾರು 7 ರಿಂದ 8 ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ. ಒಟ್ಟೊಟ್ಟಿಗೆ ಮೂರು ಚಿತ್ರಗಳ ಚಿತ್ರೀಕರಣದಲ್ಲಿ ರಚಿತಾ ಭಾಗಿಯಾಗುತ್ತಿದ್ದಾರೆ. ಹೆಚ್ಚೆಚ್ಚು ಒಳ್ಳೆಯ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಕಾರಣಕ್ಕೆ ರಚಿತಾ ರಾಮ್ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ಮತ್ತು ಅಜಯರಾವ್ ಹೊಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಿಗೆ ಹೊಸ ಅನುಭವ. ಅದೇ ರೀತಿ ಚಿತ್ರದಲ್ಲಿ ಗೃಹಿಣಿಯ ಪಾತ್ರದಲ್ಲಿ ಮೊದಲ ಬಾರಿಗೆ ರಚಿತಾರಾಮ್ ಕೂಡ ನಟಿಸುತ್ತಿರುವುದು ಹೊಸತು. ದಾಂಪತ್ಯದಲ್ಲಿನ ಭಾವನಾತ್ಮಕ ಸಂಬಂಧದ ಬಗ್ಗೆ ಚಿತ್ರದಲ್ಲಿ ಕಟ್ಟಿ ಕೊಡಲಾಗಿದೆ. ಸದ್ಯ ಚಿತ್ರದ ಎರಡನೇ ಹಾಡು ರಿಲೀಸ್‌ ಆಗುತ್ತಿದೆ. ಸದ್ಯದಲ್ಲೇ ಚಿತ್ರ ತಂಡ ರಿಲೀಸ್‌ ಡೇಟ್ ಅನೌನ್ಸ್ ಮಾಡಲಿದೆ. ಒಟ್ಟಾರೆಯಾಗಿ ಚಿತ್ರಕ್ಕೆ ರಚಿತಾ ರಾಮ್‌ ಹೆಸರು ಇಟ್ಟಿರುವುದು ಕೂಡ ಕುತೂಹಲ ಹೆಚ್ಚಾಗಿದೆ.

  English summary
  After I Love Movie Rachita Ram In Bold Avatar For Love You Rachchu Movie Song,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X