"ಪಾರ್ವತಮ್ಮ ಆಯ್ಕೆಯಲ್ಲಿ ರಮ್ಯಾ ಒಬ್ಬರೇ ಕೊಹಿನೂರ್ ವಜ್ರ"; ರಚಿತಾ ಪೋಸ್ಟ್‌ಗೆ ನೆಟ್ಟಿಗರ ಗುದ್ದು!

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್ ಹಾಗೂ ಅವರ ಸಹಚರರಿಗೆ ದೊಡ್ಡ ಸಂಕಷ್ಟವನ್ನು ತಂದೊಡ್ಡಿದೆ. ರಾಜ್ಯದಾದ್ಯಂತ ರೇಣುಕಾಸ್ವಾಮಿ ಕೊಲೆಯನ್ನು ಖಂಡಿಸಲಾಗುತ್ತಿದೆ. ಈ ಮಧ್ಯೆ ಸ್ಯಾಂಡಲ್‌ವುಡ್‌ನ ತಾರೆಯರು ತಪ್ಪಿತಸ್ಥರಿಗೆ ಶಿಕ್ಷೆಯಾಗಿ ಅಂತ ಪೋಸ್ಟ್ ಮಾಡಿ ಸೈಲೆಂಟ್ ಆಗಿ ನುಣುಚಿಕೊಳ್ಳುತ್ತಿದ್ದಾರೆ.

ಇತ್ತ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಇನ್‌ಸ್ಟಾಗ್ರಾಂ ಪೋಸ್ಟ್ ಮಾಡಿದ್ದು, ಇದರಲ್ಲಿ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ಆರಂಭದಲ್ಲಿ ರೇಣುಕಾಸ್ವಾಮಿ ಹತ್ಯೆಯನ್ನು ಖಂಡಿಸಿದ್ದರೂ, ಬಳಿಕ ದರ್ಶನ್ ತಮ್ಮ ಗುರು ಸಮಾನರು. ಅವರ ಜೀವನದಲ್ಲಾದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ. ಇಂತಹ ಪ್ರಕರಣದಲ್ಲಿ ಭಾಗಿಯಾಗಿರೋದನ್ನು ನಂಬುವುದಕ್ಕೆ ಅಸಾಧ್ಯವೆಂದು ಹೇಳಿಕೊಂಡಿದ್ದಾರೆ.

Rachita Ram Instagram post about Darshan arrest here is netizens reaction

ರಚಿತಾ ರಾಮ್ ಇನ್‌ಸ್ಟಾಗ್ರಾಂ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಇದೇ ಪೋಸ್ಟ್‌ನಲ್ಲಿ ನಟಿ ರಚಿತಾ ರಾಮ್ ಮಾಧ್ಯಮದವರಿಗೆ ಪಾರದರ್ಶಕ ಹಾಗೂ ನಿಷ್ಪಕ್ಷಪಾತದ ಪಾಠವನ್ನು ಮಾಡಿದ್ದಾರೆ. ಈ ಮೂಲಕ ಮಾಧ್ಯಮದಲ್ಲಿ ತೋರಿಸುತ್ತಿರುವುದು ತಪ್ಪು ಅನ್ನುವ ಭಾವ ಬರುವಂತೆ ಈ ಪೋಸ್ಟ್‌ನಲ್ಲಿ ಮಾಡಿದ್ದಾರೆ.

ಅದೇನೆ ಇದ್ದರೂ ರಚಿತಾ ರಾಮ್ ಪೋಸ್ಟ್ ದರ್ಶನ್ ಅಭಿಮಾನಿಗಳಿಗೆ ಬಿಟ್ಟರೆ, ಉಳಿದ ನೆಟ್ಟಿಗರಿಗೆ ಹಿಡಿಸಿಲ್ಲ. ಈ ಕಾರಣಕ್ಕೆ ರಚಿತಾ ರಾಮ್ ಮೇಲೆ ಕೋಪಗೊಂಡು ಕೆಲವು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಹಾಗೇ ಮೋಹಕತಾರೆ ರಮ್ಯಾ ಜೊತೆ ರಚಿತಾ ರಾಮ್ ಜೊತೆ ಹೋಲಿಸಿ ಮಾಡಿ, ಅವರು ಹಾಕಿದ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ.

ರಚಿತಾ ರಾಮ್ ಪೋಸ್ಟ್‌ಗೆ ಬಂದ ಕೆಲವು ಕಾಮೆಂಟ್‌ಗಳು ಹೀಗಿವೆ. ನೆಟ್ಟಿಗರೊಬ್ಬರು "ಕಾನೂನು ಎಲ್ಲರಿಗೂ ಒಂದೇ, ತಪ್ಪಿದರೆ ಖಂಡಿತಾ ಶಿಕ್ಷೆ ಆಗಲಿ" ಎಂದಿದ್ದಾರೆ. ಹಾಗೇ, ಮತ್ತೊಬ್ಬರು "ನೀನ್ ಹೇಳ್ತಾ ಇರೋದು ನೋಡಿದ್ರೆ ದರ್ಶನ್ ತಪ್ಪು ಮಾಡಿಲ್ಲ. ಪೊಲೀಸ್‌ನವರಿಗೆ ಕೆಲ್ಸ ಇರ್ಲಿಲ್ಲ. ಸುಮ್ನೇ ಕರ್ಕೊಂಡು ಹೋಗಿದ್ದಾರೆ ಅನ್ನೋ ತರ ಇದೆ." ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು "ನೀನು ರಿಯಾಕ್ಷನ್ ಮಾಡು ಅಂಥ ಯಾರಮ್ಮ ಕೇಳಿದ್ದು ತಾಯಿ" ಎಂದು ಕಾಮೆಂಟ್ ಮಾಡಿದ್ದಾರೆ.

Rachita Ram Instagram post about Darshan arrest here is netizens reaction

ಎಲ್ಲಕ್ಕಿಂತ ಇಂಟ್ರೆಸ್ಟಿಂಗ್ ಕಾಮೆಂಟ್ ಅಂದರೆ ಇದು. ದರ್ಶನ್ ಬಂಧನ ಆದಲ್ಲಿಂದ ರಮ್ಯಾ ಒಂದಲ್ಲ ಒಂದು ಪೋಸ್ಟ್ ಮಾಡುತ್ತಲೇ ಇದ್ದಾರೆ. ಸ್ಯಾಂಡಲ್‌ವುಡ್ ಮಟ್ಟಿಗೆ ಮೋಹಕ ತಾರೆ ರಮ್ಯಾ ಮಾತ್ರ ದರ್ಶನ್ ವಿರುದ್ಧ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಅದು ಬಿಟ್ಟರೆ, ಬೇರೆ ಯಾವುದೇ ನಟಿಯರು ಇಷ್ಟೊಂದು ಧೈರ್ಯ ತೋರಿಲ್ಲ. ಹೀಗಾಗಿ ನೆಟ್ಟಿಗರೊಬ್ಬರು ರಮ್ಯಾ ಜೊತೆ ರಚಿತಾ ರಾಮ್ ಅನ್ನು ಹೋಲಿಕೆ ಮಾಡಿ ಕಾಮೆಂಟ್ ಮಾಡಿದ್ದಾರೆ.

"ಹೊಸಪೇಟೆ ಪ್ರಕರಣದಲ್ಲಿ ಮತ್ತು ಈಗ ದರ್ಶನ್ ಪರವಾಗಿ ನಿಂತಿದ್ರಿ. ನಿಮ್ಮನ್ನು ದರ್ಶನ್ ಚಿತ್ರರಂಗಕ್ಕೆ ಪರಿಚಯಿಸಿದ್ರು ಎನ್ನುವ ಒಂದು ಕೃತಜ್ಞತೆಗೆ. ಆದ್ರೆ ಹೊಸಪೇಟೆ ಪ್ರಕರಣದಲ್ಲಿ ಅಪ್ಪು ಅಭಿಮಾನಿಗಳ ತಪ್ಪು ಇಲ್ಲದಿದ್ದರೂ, ಪಾರ್ವತಮ್ಮನವರು ಪರಿಚಯಿಸಿದ ಹೀರೋಯಿನ್‌ಗಳು ದರ್ಶನ್ ಪರವಾಗಿ ನಿಂತ್ರು. ಈಗ ದರ್ಶನ್ ಪರವಾಗಿ ಇದ್ದಾರೆ ಎಂಬುದಕ್ಕೆ ಅವರ ಮೌನವೇ ಸಾಕ್ಷಿ. ನಿಮ್ಮ ಕಾಲ ಧೂಳಿಗೂ ಸಮ ಇಲ್ಲ ಅವರು. ರಮ್ಯಾ ಒಬ್ರೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ರು. ಅದಕ್ಕೆ ಇವತ್ತಿಗೂ, ಇನ್ನು ಮುಂದೆಯೂ ರಮ್ಯಾ ಒಬ್ಬರೇ ಸ್ಯಾಂಡಲ್ವುಡ್ ಕ್ವೀನ್. ಇದ್ದದ್ದನ್ನು ಇದ್ದ ಹಾಗೆ ಹೇಳುವ ರಮ್ಯಾ ನಮಗೆ ಮೊದಲಿನಿಂದಲೂ ಫೇವರಿಟ್. ಈಗಂತೂ ಇನ್ನು ಇಷ್ಟ ಆದ್ರು. ಪಾರ್ವತಮ್ಮನವರ ಆಯ್ಕೆಯಲ್ಲಿ ರಮ್ಯಾ ಒಬ್ಬರೇ ಕೊಹಿನೂರ್ ವಜ್ರ" ಎಂದು ನೆಟ್ಟಿಗರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

More from Filmibeat

English summary
Netizens reaction on Rachita Ram Instagram post
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X