For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟನ ಜೊತೆಗೆ ನಟಿಸುತ್ತಾರೆ ಬುಲ್ ಬುಲ್ ಬೆಡಗಿ

  By Pavithra
  |

  ರಚಿತಾ ರಾಮ್.. ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಂಬರ್ ಒನ್ ಪಟ್ಟ ಪಡೆದುಕೊಂಡಿರುವ ಸ್ಟಾರ್ ನಟಿ. ಸದ್ದಿಲ್ಲದೆ ಸೈಲೆಂಟಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರಚಿತಾ ರಾಮ್ ಕೈ ನಲ್ಲಿ ಇನ್ನು ಸಾಕಷ್ಟು ಸಿನಿಮಾಗಳಿವೆ.

  ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿರುವ ರಚಿತಾ ರಾಮ್ ಅಭಿಮಾನಿಗಳಿಗೊಂದು ವಿಶೇಷ ಸುದ್ದಿ ಇದು. ರಚಿತಾ ಬಾಲಿವುಡ್ ಸ್ಟಾರ್ ನಟನ ಜೊತೆಯಲ್ಲಿ ಅಭಿನಯ ಮಾಡುತ್ತಿದ್ದಾರೆ. ಬಾಲಿವುಡ್ ಗೆ ಆಫರ್ ಇದ್ಯಾ?, ಟಾಲಿವುಡ್ ಗೆ ಹೋಗ್ತಿರಾ? ಅಂತ ಕೇಳುತ್ತಿದ್ದ ಪ್ರಶ್ನೆಗಳಿಗೆ ಡಿಂಪಲ್ ಕ್ವೀನ್ ಚಂದನವನದಲ್ಲೇ ನಿಂತು ಉತ್ತರ ಕೊಟ್ಟಿದ್ದಾರೆ.

  ಕನ್ನಡ ಚಿತ್ರರಂಗಕ್ಕೆ ಬಂದೇ ಬಿಟ್ರಲ್ಲ ಬಾಲಿವುಡ್ ನಟ ವಿವೇಕ್ ಒಬೆರಾಯ್.!ಕನ್ನಡ ಚಿತ್ರರಂಗಕ್ಕೆ ಬಂದೇ ಬಿಟ್ರಲ್ಲ ಬಾಲಿವುಡ್ ನಟ ವಿವೇಕ್ ಒಬೆರಾಯ್.!

  ರಚಿತಾ ಬಾಲಿವುಡ್ ನಟನ ಜೊತೆ ಅಭಿನಯ ಮಾಡುತ್ತಿದ್ದು ಕನ್ನಡ ಸ್ಟಾರ್ ನಟರೂ ಕೂಡ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಹಾಗಾದರೆ ರಚಿತಾ ಅಭಿನಯ ಮಾಡುತ್ತಿರುವ ಸಿನಿಮಾ ಯಾವುದು? ಆ ಬಿಟೌನ್ ನಟ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ...

  ಬಿಟೌನ್ ನಟನ ಜೊತೆ ಅಭಿನಯ

  ಬಿಟೌನ್ ನಟನ ಜೊತೆ ಅಭಿನಯ

  ಕನ್ನಡದ ಬೆಡಗಿ ಡಿಂಪಲ್ ಕ್ವೀನ್ ಬಾಲಿವುಡ್ ನಟ ವಿವೇಕ್ ಒಬೆರಾಯ್ ಜೊತೆ ಅಭಿನಯ ಮಾಡುತ್ತಿದ್ದಾರೆ. ರವಿವರ್ಮ ನಿರ್ದೇಶನದ 'ರುಸ್ತುಂ' ಚಿತ್ರದಲ್ಲಿ ರಚಿತಾ ರಾಮ್ ಆಕ್ಟ್ ಮಾಡುವುದು ಪಕ್ಕಾ ಆಗಿದೆ.

  ಹೊಸ ರೀತಿ ಪಾತ್ರದಲ್ಲಿ ಬುಲ್ ಬುಲ್ ಬೆಡಗಿ

  ಹೊಸ ರೀತಿ ಪಾತ್ರದಲ್ಲಿ ಬುಲ್ ಬುಲ್ ಬೆಡಗಿ

  ವಿವೇಕ್ ಒಬೆರಾಯ್ ಜೊತೆಯಲ್ಲಿ ರಚಿತಾ ಅಭಿನಯ ಮಾಡುತ್ತಿರುವು ಒಂದು ವಿಶೇಷ ಆದರೆ ಮತ್ತೊಂದು ಸ್ಪೆಷಲ್ ಎಂದರೆ ಸಿನಿಮಾದ ಕಥೆಗೆ ತಿರುವು ನೀಡುವ ಪಾತ್ರ ಇದಾಗಿದ್ಯಂತೆ.

  ಶಿವರಾಜ್ ಕುಮಾರ್ ಅಭಿನಯದ ಚಿತ್ರ

  ಶಿವರಾಜ್ ಕುಮಾರ್ ಅಭಿನಯದ ಚಿತ್ರ

  ಈ ಮೂಲಕ ರಚಿತಾ ರಾಮ್ ಶಿವರಾಜ್ ಕುಮಾರ್ ಜೊತೆಯಲ್ಲಿ ಸ್ಕ್ರೀನ್ ಶೇರ್ ಮಾಡಿದಂತೆಯೂ ಆಗುತ್ತದೆ. ಆದರೆ ಇಬ್ಬರು ಒಟ್ಟಿಗೆ ತೆರೆ ಮೇಲೆ ಅಭಿನಯ ಮಾಡುತ್ತಾರಾ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು.

  ಉತ್ತಮ ಸಿನಿಮಾಗಳ ಆಯ್ಕೆಯಲ್ಲಿ ರಚಿತಾ

  ಉತ್ತಮ ಸಿನಿಮಾಗಳ ಆಯ್ಕೆಯಲ್ಲಿ ರಚಿತಾ

  ಕಂಪ್ಲೀಟ್ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ರಚಿತಾ ಈಗ ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡಿದ್ದಾರೆ. 'ಅಯೋಗ್ಯ', 'ಸೀತಾರಾಮ ಕಲ್ಯಾಣ', 'ನಟಸಾರ್ವಭೌಮ', 'ಐ ಲವ್ ಯು', 'ರುಸ್ತುಂ' ಸೇರಿದಂತೆ ಇನ್ನು ಎರಡು ಸಿನಿಮಾಗೆ ಸಹಿ ಹಾಕಿದ್ದಾರೆ.

  English summary
  Kannada actress Rachita Ram is acting in the Rustam movie, Rachita Ram is acting alongside vivek oberoi. Shivaraj Kumar is the hero of the Rustram film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X