»   » ಪವರ್ ಸ್ಟಾರ್ ಜೊತೆ ಚಕ್ರವ್ಯೂಹ ಭೇದಿಸಲು ರಚಿತಾ ರೆಡಿ

ಪವರ್ ಸ್ಟಾರ್ ಜೊತೆ ಚಕ್ರವ್ಯೂಹ ಭೇದಿಸಲು ರಚಿತಾ ರೆಡಿ

Posted By:
Subscribe to Filmibeat Kannada

ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಚಕ್ರವ್ಯೂಹ' ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ. ಈ ಮೊದಲು ರಚಿತಾ ರಾಮ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಲಾಗಿತ್ತು.

ಮಾತ್ರವಲ್ಲದೇ ರಚಿತಾ ರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ನಟಿಸುತ್ತಿಲ್ಲ ಎಂದು ಸೋಷಿಯಲ್ ಸೈಟ್ ಗಳಲ್ಲೂ ಭಾರಿ ಗುಲ್ಲೆದ್ದಿತ್ತು.[ರಚಿತಾ ರಾಮ್ ವಿರುದ್ಧ ಪುನೀತ್ ಫ್ಯಾನ್ಸ್ ಸಮರ ]

ಇದೀಗ ಇದಕ್ಕೆಲ್ಲ ತೆರೆ ಎಳೆದಿರುವ ಗ್ಲಾಮರ್ ಬೊಂಬೆ ರಚಿತಾ ರಾಮ್ ಅವರು ಪವರ್ ಸ್ಟಾರ್ ಪುನೀತ್ ಅವರ 25ನೇ ಚಿತ್ರ 'ಚಕ್ರವ್ಯೂಹ'ದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದು, ಸುಮಾರು ಒಂಭತ್ತು ದಿನಗಳ ಶೂಟಿಂಗ್ ಅನುಭವಗಳನ್ನು ಕನ್ನಡ ದಿನ ಪತ್ರಿಕೆಯ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಈ ಮೊದಲು 'ಬುಲ್ ಬುಲ್' ಬೆಡಗಿ ನಿರ್ದೇಶಕ ಪವನ್ ಒಡೆಯರ್ ಅವರ 'ರಣವಿಕ್ರಮ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರೊಂದಿಗೆ ನಟಿಸಬೇಕಿತ್ತು. ಆದರೆ ರಚಿತಾ ರಾಮ್ ಸುದೀಪ್ ಜೊತೆ 'ರನ್ನ' ಚಿತ್ರದಲ್ಲಿ ಬ್ಯುಸಿಯಾಗಿದ್ದರಿಂದ ಪುನೀತ್ ಅವರ ಜೊತೆ ಕಾಣಿಸಿಕೊಳ್ಳಲಾಗಲಿಲ್ಲ.

ಇದೀಗ ತಮಿಳಿನ 'ಎಂಗೆಯುಮ್ ಎಪ್ಪೋದುಮ್' ಚಿತ್ರವನ್ನು ನಿರ್ದೇಶಿಸಿದ್ದ ಸರವಣನ್ ಪುನೀತ್ 25ನೇ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ತಮಿಳು ನಟ ಅರುಣ್ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪವರ್ ಸ್ಟಾರ್ ಜೊತೆ ರಚಿತಾ ರಾಮ್ 'ಚಕ್ರವ್ಯೂಹ' ಭೇದಿಸಲಿದ್ದಾರೆ. ಮುಂದೆ ಓದಿ.

'ಚಕ್ರವ್ಯೂಹ' ದಲ್ಲಿ ರಚಿತಾ ನಟಿಸುವುದು ಪಕ್ಕಾ

ಪುನೀತ್ ರಾಜ್ ಕುಮಾರ್ ಜೊತೆ 'ಚಕ್ರವ್ಯೂಹ'ದಲ್ಲಿ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಕಾಣಿಸಿಕೊಳ್ಳುವುದು ಆಫೀಶೀಯಲ್ ಆಗಿ ಪಕ್ಕಾ ಆಗಿದೆ.

ಪುನೀತ್ ಅವರದು ಡೌನ್ ಟು ಅರ್ಥ್ ವ್ಯಕ್ತಿತ್ವ- ರಚಿತಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರದು ತುಂಬಾ ಡೌನ್ ಟು ಅರ್ಥ್ ವ್ಯಕ್ತಿತ್ವ ಅವರು ನನ್ನ ಬಗ್ಗೆ ಪೂರ್ವಗ್ರಹ ಪೀಡಿತರಾಗಿರಲಿಲ್ಲ ಎಂದು ಖ್ಯಾತ ದಿನಪತ್ರಿಕೆಯೊಂದಕ್ಕೆ ಗ್ಲಾಮರ್ ಬೆಡಗಿ ರಚಿತಾ ರಾಮ್ ಅವರು ಮಾಹಿತಿ ನೀಡಿದ್ದಾರೆ.

ಪುನೀತ್ ಹಿಂದೆ ಬಿದ್ದ ರಚಿತಾ ರಾಮ್

ಪವರ್ ಸ್ಟಾರ್ ಪುನೀತ್ ಅಭಿನಯದ 25ನೇ ಚಿತ್ರ 'ಚಕ್ರವ್ಯೂಹ'ದಲ್ಲಿ ರಚಿತಾ ಅವರು ಸಖತ್ ಬೋಲ್ಡ್ ಆಗಿ ಅಭಿನಯಿಸಿದ್ದಾರಂತೆ. ಚಿತ್ರದಲ್ಲಿ ತಾನೇ ಪುನೀತ್ ಅವರ ಹಿಂದೆ ಬಿದ್ದು ಲವ್ ಮಾಡುವ ವಿಶೇಷ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.

'ಭರ್ಜರಿ' ಚಿತ್ರದ ಪೋಸ್ಟರ್ ನಲ್ಲಿ ರಚಿತಾ

ಸತತವಾಗಿ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ನಟಿಸಿರುವ ರಚಿತರಾಮ್ ರನ್ನ, ಚಿತ್ರದ ನಂತರ ಹಿಟ್ ನಟ ಧ್ರುವ ಸರ್ಜಾ ಅವರ ಜೊತೆ 'ಭರ್ಜರಿ' ಹಾಗೂ ಪುನೀತ್ ಅವರೊಂದಿಗೆ 'ಚಕ್ರವ್ಯೂಹ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

'ರನ್ನ' ಚಿತ್ರದ ತಿತಿಲಿ ಹಾಡಿನ ಪೋಸ್ಟರ್

ನಟ ಕಿಚ್ಚ ಸುದೀಪ್ ಅವರೊಂದಿಗೆ 'ರನ್ನ' ಚಿತ್ರದಲ್ಲಿ ತಿತಿಲಿ ಹಾಡಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ಮಿಂಚಿದ್ದರು. ಜೊತೆಗೆ ಸ್ಟಾರ್ ನಟರೊಂದಿಗೆ ನಟಿಸಿ ತಮ್ಮ ಉತ್ತಮ ಅಭಿನಯದ ಮೂಲಕ ರಚಿತಾ ರಾಮ್ ಗಾಂಧಿನಗರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ರಚಿತಾ ರಾಮ್-ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಸೋಷಿಯಲ್ ಸೈಟ್ ನಲ್ಲಿ ಪುನೀತ್ ಅಭಿಮಾನಿಗಳು ರಚಿತಾ ರಾಮ್ 'ಚಕ್ರವ್ಯೂಹ' ಚಿತ್ರದಲ್ಲಿ ಕಾಣಿಸಿಕೊಳ್ಳಬಾರದು ಎಂದು ಭಾರಿ ವಿರೋಧ ವ್ಯಕ್ತಪಡಿಸಿದರೂ ಕೂಡ ಇದೀಗ ಆಫೀಶೀಯಲ್ ಆಗಿ ರಚಿತಾ ರಾಮ್ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.

English summary
Kannada Actress Rachita Ram is the female lead actress of 'Chakravyuha' to pair opposite Puneeth Rajkumar and it's official. Tamil director Saravanan has said the action-cut to the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada