'ಅಯೋಗ್ಯ'ನಿಗೆ ಜೊತೆಯಾದ ಡಿಂಪಲ್ ಕ್ವೀನ್ ರಚಿತಾ ರಾಮ್
ನಟಿ ರಚಿತಾ ರಾಮ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಾನೆ ಇದೆ. ಸದ್ಯ ಕೈ ತುಂಬ ಸಿನಿಮಾಗಳನ್ನು ಹೊಂದಿರುವ ರಚಿತಾ ಖಾತೆಗೆ ಮತ್ತೊಂದು ಸಿನಿಮಾ ಬಂದು ಬಿದ್ದಿದೆ. ನೀನಾಸಂ ಸತೀಶ್ ನಟನೆಯ 'ಅಯೋಗ್ಯ' ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಈ ಹಿಂದೆ ಚಿತ್ರಕ್ಕೆ ನಟಿ ಐಂದ್ರಿತಾ ರೇ ನಾಯಕಿ ಎಂಬ ಸುದ್ದಿ ಇತ್ತು. ಆ ಬಳಿಕ ಕಿರುತೆರೆ ನಟಿ ಕಾವ್ಯ ಗೌಡ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಅಂತ ಹೇಳಲಾಗಿತ್ತು. ಆದರೆ ಈಗ ಚಿತ್ರಕ್ಕೆ ರಚಿತಾ ರಾಮ್ ಫೈನಲ್ ಆಗಿ ಆಯ್ಕೆ ಆಗಿದ್ದಾರೆ.

ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಸತೀಶ್ ಮತ್ತು ರಚಿತಾ ರಾಮ್ ಜೋಡಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಯೋಗರಾಜ್ ಭಟ್ ಶಿಷ್ಯ ಮಹೇಶ್ ನಿರ್ದೇಶನ ಈ ಚಿತ್ರದಲ್ಲಿ ಸತೀಶ್ ಗ್ರಾಮ ಪಂಚಾಯ್ತಿ ಸದಸ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಂಡ್ಯ ಸುತ್ತ ಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಮುಂದಿನ ತಿಂಗಳು ಶೂಟಿಂಗ್ ಶುರು ಆಗಲಿದೆ.
English summary
Kannada actress Rachita Ram is selected to play lead opposite Ninasam Satish in 'Ayogya' movie.


Click it and Unblock the Notifications