For Quick Alerts
  ALLOW NOTIFICATIONS  
  For Daily Alerts

  ದಚ್ಚು ಚಿತ್ರಕ್ಕೆ ಮತ್ತೆ ರಚ್ಚುನೇ ನಾಯಕಿ

  By Pavithra
  |
  ದರ್ಶನ್ 51ನೇ ಸಿನಿಮಾಗೆ ರಚಿತಾ ರಾಮ್ ನಾಯಕಿ | Filmibeat Kannada

  ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಈಗ ದರ್ಶನ್ ಅಭಿನಯದ 51 ನೇ ಸಿನಿಮಾಗೆ ನಾಯಕಿ ಯಾರು ಅನ್ನುವುದು ದೊಡ್ಡ ಸುದ್ದಿ ಆಗುತ್ತಿದೆ. ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗುತ್ತಿದ್ದಂತೆ ಡಿ ಬಾಸ್ ಮುಂದಿನ ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.

  ಈ ಹಿಂದೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಯಲ್ಲಿ ಡಿಂಪಲ್ ಕ್ವೀನ್ ಮತ್ತೆ ಅಭಿನಯಿಸುತ್ತಾರೆ ಎನ್ನುವ ಸುದ್ದಿ ಆಗಿತ್ತು. ಅದಾದ ನಂತರ ಚಿತ್ರಕ್ಕೆ ರಶ್ಮಿಕಾ ನಾಯಕಿ ಅಂತೆ ಎಂದು ಗಾಸಿಪ್ ಕೂಡ ಹರಡಿತ್ತು.

  ಹೀರೋ ಆಗಲು ಸಜ್ಜಾದ ದರ್ಶನ್ ಸಂಬಂಧಿಯ ಲುಕ್ ಟೆಸ್ಟ್ ನೋಡಿ

  ದರ್ಶನ್ ಚಿತ್ರಕ್ಕೆ ಕನ್ನಡದ ನಟಿಯನ್ನೇ ಆಯ್ಕೆ ಮಾಡುವ ಸಲುವಾಗಿ ನಿರ್ಮಾಪಕರು ಕನ್ನಡದ ನಾಯಕಿಯರನ್ನೇ ಹುಡುಕುತ್ತಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿದ್ದು ಸುಳ್ಳಲ್ಲ. ಚಿತ್ರಕ್ಕೆ ಕೃತಿ ಕರಬಂಧ ಅವರ ಡೇಟ್ಸ್ ಕೇಳಲಾಗಿತ್ತಂತೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಎಲ್ಲಿಯೂ ಸುದ್ದಿ ಬಿಟ್ಟುಕೊಟ್ಟಿಲ್ಲ. ಅವರನ್ನ ಬಿಟ್ಟು,ಇವರನ್ನ ಬಿಟ್ಟು ಮತ್ಯಾರು ಅನ್ನುವ ಪ್ರಶ್ನೆ ಮೂಡುವಷ್ಟರಲ್ಲಿ ದಚ್ಚುಗೆ ರಚ್ಚುನೇ ನಾಯಕಿ ಅನ್ನೋದು ಕನ್ಫರ್ಮ್ ಆಗಿದ್ಯಂತೆ.

  ದರ್ಶನ್ ಚಿತ್ರಕ್ಕೆ ರಚಿತಾ ನಾಯಕಿ

  ದರ್ಶನ್ ಚಿತ್ರಕ್ಕೆ ರಚಿತಾ ನಾಯಕಿ

  ಚಾಲೆಂಜಿಂಗ್ ಸ್ಟಾರ್ ಅಭಿನಯದ ಮುಂದಿನ ಚಿತ್ರಕ್ಕೆ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ಅವರೇ ನಾಯಕಿ ಅನ್ನುವುದು ಕನ್ಫರ್ಮ್ ಆಗಿದೆ. ಚಿತ್ರವನ್ನ ಶೈಲಜಾ ನಾಗ್ ನಿರ್ಮಾಣ ಮಾಡುತ್ತಿದ್ದು ಚಿತ್ರಕ್ಕೆ ಪಿ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಸಂಕ್ರಾಂತಿಗೆ ಸೆಟ್ಟರಲಿದೆ ಚಿತ್ರ

  ಸಂಕ್ರಾಂತಿಗೆ ಸೆಟ್ಟರಲಿದೆ ಚಿತ್ರ

  ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣ ಮುಗಿಸಿ ಬಂದಿರುವ ದರ್ಶನ್ ಅಭಿನಯದ 51 ನೇ ಸಿನಿಮಾದ ಮಹೂರ್ತ ಸಂಕ್ರಾಂತಿ ಹಬ್ಬದಂದು ನಡೆಯಲಿದ್ಯಂತೆ. ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿರುವ ನಿರ್ದೇಶಕರು ಆಕ್ಷನ್ ಕಟ್ ಹೇಳಲು ತಯಾರಾಗಿದ್ದಾರಂತೆ .

  ಚಿತ್ರದಲ್ಲಿ ಇರುತ್ತಾರಾ ರಶ್ಮಿಕಾ

  ಚಿತ್ರದಲ್ಲಿ ಇರುತ್ತಾರಾ ರಶ್ಮಿಕಾ

  ಇತ್ತಿಚಿಗಷ್ಟೇ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಸ್ಟಾರ್ ನಟರೊಬ್ಬರ ಜೊತೆ ಅಭಿನಯಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಆದರೆ ರಶ್ಮಿಕಾ ಎಲ್ಲಿಯೂ ದರ್ಶನ್ ಚಿತ್ರದಲ್ಲಿ ಹೀರೋಯಿನ್ ಎಂದು ಕನ್ಫರ್ಮ್ ಮಾಡಿರಲಿಲ್ಲ. ಒಂದು ಮೂಲದ ಪ್ರಕಾರ ಚಿತ್ರದ ಪಾತ್ರವೊಂದಕ್ಕೆ ರಶ್ಮಿಕಾ ಅವರನ್ನ ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ.

  ಶೀಘ್ರದಲ್ಲೇ ಚಿತ್ರದ ಬಗ್ಗೆ ಮಾಹಿತಿ

  ಶೀಘ್ರದಲ್ಲೇ ಚಿತ್ರದ ಬಗ್ಗೆ ಮಾಹಿತಿ

  ಸಿನಿಮಾ ಬಗ್ಗೆ ಇಷ್ಟೇಲ್ಲಾ ಸುದ್ದಿಗಳು ಹರಿದಾಡುತ್ತಿದ್ದರು ಚಿತ್ರತಂಡ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸೈಲೆಂಟ್ ಆಗಿದೆ. ಒಟ್ಟಾರೆ ಅಭಿಮಾನಿಗಳು ಮಾತ್ರ ದರ್ಶನ್ ಜೊತೆ ಮತ್ತೊಮ್ಮೆ ಡಿಂಪಲ್ ಕ್ವೀನ್ ಆಕ್ಟ್ ಮಾಡಿದರೆ ಚೆನ್ನಾಗಿರುತ್ತೆ ಎಂದು ಕಾದಿದ್ದಾರೆ.

  English summary
  Kannada actress Rachita Ram is the heroine of Challenging star Darshan's 51st movie. Rashmika Mandanna is acting as the second heroine of the film.The film mahurtha will be held on Sankranti festival

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X