ಡೇಟಿಂಗ್ ಆಪ್‌ನಲ್ಲಿ ರಚಿತಾ ರಾಮ್; ಹಾಟ್ ಅಥವಾ ಟ್ರೆಡಿಷನಲ್ ಯಾವುದು ಇಷ್ಟ ಎಂದದ್ದಕ್ಕೆ ನಟಿ ಉತ್ತರವಿದು!

ಅರಸಿ ಸೀರಿಯಲ್ ಮೂಲನ ನಟನೆ ಆರಂಭಿಸಿದ ನಟಿ ರಚಿತಾ ರಾಮ್ ಈ ಸೀರಿಯಲ್‌ ಬಳಿಕ ಸಿನಿಮಾ ಕ್ಷೇತ್ರಕ್ಕೂ ಸಹ ಕಾಲಿಟ್ಟರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ರಚಿತಾ ರಾಮ್ ಸ್ಟಾರ್ ನಟನ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ್ದು ಮಾತ್ರವಲ್ಲದೇ ಮೊದಲ ಚಿತ್ರದಲ್ಲಿಯೇ ಶತಕವನ್ನೂ ಬಾರಿಸಿ ದೊಡ್ಡ ಬ್ರೇಕ್ ಪಡೆದುಕೊಂಡರು.

ಬುಲ್ ಬುಲ್ ಹಿಟ್ ಆದ ಬಳಿಕ ರಚಿತಾ ರಾಮ್ ಆ ಸಮಯಕ್ಕೆ ಹಲವರ ಫೇವರಿಟ್ ನಟಿಯಾದರು ಹಾಗೂ ಸಾಲು ಸಾಲು ಆಫರ್‌ಗಳನ್ನು ಗಿಟ್ಟಿಸಿಕೊಂಡರು. ಆ ಬಳಿಕ ದರ್ಶನ್, ಸುದೀಪ್, ಗಣೇಶ್, ಪುನೀತ್ ರಾಜ್‌ಕುಮಾರ್, ಉಪೇಂದ್ರ ಹಾಗೂ ಶಿವ ರಾಜ್‌ಕುಮಾರ್ ರೀತಿಯ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿದ ರಚಿತಾ ರಾಮ್ ಸ್ಟಾರ್ ಹಿರೋಯಿನ್ ಆದರು.

ಇನ್ನು ಇಂಡಸ್ಟ್ರಿಗೆ ಕಾಲಿಟ್ಟು ಹತ್ತು ವರ್ಷಗಳನ್ನು ಪೂರೈಸಿರುವ ರಚಿತಾ ರಾಮ್ ಇಂದಿಗೂ ಸಹ ಬೇಡಿಕೆಯ ನಟಿ. ರಚಿತಾ ಬಳಿಕ ಸಾಲು ಸಾಲು ನಟಿಯರು ಕನ್ನಡ ಚಿತ್ರರಂಗ ಪ್ರವೇಶಿಸಿದರೂ ಸಹ ಯಾರೊಬ್ಬರೂ ಆಕೆಯನ್ನು ಹಿಂದಿಕ್ಕುವಲ್ಲಿ ಮಾತ್ರ ಯಶಸ್ವಿಯಾಗಲಿಲ್ಲ. ಹೀಗೆ ದಶಕ ಪೂರೈಸಿದರೂ ದಶಕ ಬಾರಿಸಿದರೂ ಸಹ ಇಂಡಸ್ಟ್ರಿಯಲ್ಲಿ ನಂಬರ್ ಒನ್ ಪಟ್ಟವನ್ನು ತನ್ನ ಬಿಗಿ ಹಿಡಿತದಲ್ಲಿ ಹೊಂದಿರುವ ನಟಿ ರಚಿತಾ ರಾಮ್ ಯಾವಾಗ ಮದುವೆಯಾಗಲಿದ್ದಾರೆ, ಡಿಂಪಲ್ ಕ್ವೀನ್ ಕೈಹಿಡಿಯುವ ಆ ಅದೃಷ್ಟವಂತ ಯಾರು ಎಂದೆಲ್ಲಾ ಚರ್ಚೆಗಳು ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ನಡೆದಿವೆ. ಇನ್ನು ರಚಿತಾ ರಾಮ್ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾದಾಗಲೆಲ್ಲಾ ಸದ್ಯಕ್ಕಿಲ್ಲ, ತಿಳಿಸುವೆ ಎಂದು ಜಾರಿಕೊಳ್ತಾ ಇರುತ್ತಾರೆ. ಹೀಗಿರುವ ರಚಿತಾ ರಾಮ್ ಇದೀಗ ಡೇಟಿಂಗ್ ಆಪ್‌ನಲ್ಲಿ ಪ್ರತ್ಯಕ್ಷಗೊಂಡಿದ್ದಾರೆ. ಇದರಲ್ಲಿ ತಮಗೆ ಇಷ್ಟವಾದ ನಟ, ಇಷ್ಟವಾದ ಡ್ರೆಸ್ ಹಾಗೂ ಫುಡ್ ಏನು ಎಂಬುದನ್ನೂ ಸಹ ರಚ್ಚು ಬಿಚ್ಚಿಟ್ಟಿದ್ದಾರೆ.

ರಚಿತಾ ಡೇಟಿಂಗ್ ಆಪ್‌ಗೆ ಬಂದದ್ದೇಕೆ?

ರಚಿತಾ ಡೇಟಿಂಗ್ ಆಪ್‌ಗೆ ಬಂದದ್ದೇಕೆ?

ಇನ್ನು ನಟಿ ರಚಿತಾ ರಾಮ್ ಸಾಮಾಜಿಕ ಜಾಲತಾಣದಲ್ಲಿನ ತನ್ನ ಖಾತೆಗಳಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ಕನ್ನಡಿಗರಿಗಾಗಿ ತಯಾರು ಮಾಡಿರುವ ನೀನೆ ಎಂಬ ಡೇಟಿಂಗ್ ಅಪ್ಲಿಕೇಶನ್ ಒಂದರ ಪ್ರಚಾರ ಮಾಡಿದ್ದಾರೆ. ತಾವೇ ನೀನೆ ಎಂಬ ಡೇಟಿಂಗ್ ಆಪ್ ಉಪಯೋಗಿಸುತ್ತಿರುವ ಹಾಗೆ ಈ ಪ್ರಚಾರದ ವಿಡಿಯೊವನ್ನು ಮಾಡಲಾಗಿದ್ದು, ರಚಿತಾ ಇದರಲ್ಲಿ ತಮಗಿಷ್ಟವಾದದ್ದನ್ನು ತಿಳಿಸಿದ್ದಾರೆ.

ಹಾಟ್ ಡ್ರೆಸ್ ಇಷ್ಟನಾ ಅಥವಾ ಟ್ರೆಡಿಷನಲ್?

ಹಾಟ್ ಡ್ರೆಸ್ ಇಷ್ಟನಾ ಅಥವಾ ಟ್ರೆಡಿಷನಲ್?

ಈ ವಿಡಿಯೊದಲ್ಲಿ ತಮ್ಮ ಇಷ್ಟಗಳೇನು ಎಂಬುದನ್ನು ರಚಿತಾ ರಾಮ್ ತಿಳಿಸಿದ್ದು, ಹಾಟ್ ಡ್ರೆಸ್ ಇಷ್ಟಾನಾ ಅಥವಾ ಟ್ರೆಡಿಷನಲ್ ಡ್ರೆಸ್ ಇಷ್ಟಾನಾ ಎಂಬ ಪ್ರಶ್ನೆಗೆ ಯಾವಾಗಲೂ ಸಹ ನನಗೆ ಟ್ರೆಡಿಶನಲ್ ಡ್ರೆಸ್ ಎಂದರೆ ಇಷ್ಟ ಎಂದು ತಿಳಿಸಿದ್ದಾರೆ. ಪಿಜಾ ಹಾಗೂ ಮಸಾಲಾ ದೋಸೆ ಈ ಎರಡರಲ್ಲಿ ಮಸಾಲಾ ದೋಸೆ ಇಷ್ಟ ಎಂದು ಆರಿಸಿದ್ದಾರೆ. ಹಾಲಿವುಡ್‌ನ ಬಾಂಡ್ ಸಿನಿಮಾ ಹಾಗೂ ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರಗಳಲ್ಲಿ ನಾಗರಹಾವು ಇಷ್ಟ ಎಂದಿರುವ ರಚಿತಾ ವಿಷ್ಣುವರ್ಧನ್ ಬೆಂಕಿ ಹೀರೊ ಎಂದಿದ್ದಾರೆ. ಹೀಗೆ ಕನ್ನಡಿಗರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಂತ ಡೇಟಿಂಗ್ ಆಪ್ ಈ ನೀನೆ ಆಪ್ ಎಂದು ಪ್ರಚಾರ ಮಾಡಿರುವ ರಚಿತಾ ರಾಮ್ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ವಿವಾದವಾದರೂ ಆಶ್ಚರ್ಯವಿಲ್ಲ!

ವಿವಾದವಾದರೂ ಆಶ್ಚರ್ಯವಿಲ್ಲ!

ಇನ್ನು ರಚಿತಾ ರಾಮ್ ಡೇಟಿಂಗ್ ಅಪ್ಲಿಕೇಶನ್‌ವೊಂದಕ್ಕೆ ಪ್ರಚಾರ ಮಾಡಿರುವುದು ಮುಂದಿನ ದಿನಗಳಲ್ಲಿ ವಿವಾದಕ್ಕೆ ತಿರುಗುವ ಸಾಧ್ಯತೆ ಹೆಚ್ಚೇ ಇದೆ ಎಂದು ಹೇಳಬಹುದು. ಯುವಕ - ಯುವತಿಯರಿಗೆ ಡೇಟ್ ಮಾಡಿ, ನಿಮ್ಮ ಇಷ್ಟ ಕಷ್ಟಗಳನ್ನು ಹುಡುಕಿಕೊಳ್ಳಿ ಎಂದು ಹೇಳಿ ಪ್ರಚೋದಿಸಿ ಪ್ರಚಾರ ಮಾಡುವುದು ತಪ್ಪು ಎಂದು ರಚಿತಾ ವಿರುದ್ಧ ದನಿ ಎದ್ದರೂ ಆಶ್ಚರ್ಯವಿಲ್ಲ. ರಮ್ಮಿ, ಕುಡಿತ, ತಂಬಾಕು ಜಾಹೀರಾತುಗಳಲ್ಲಿ ಭಾಗವಹಿಸಿದ್ದ ನಟರನ್ನೇ ಬಿಡದಿದ್ದ ನೆಟ್ಟಿಗರು ಈಗ ಡೇಟ್ ಮಾಡಿ ಎಂದು ಹೇಳುತ್ತಿರುವ ರಚಿತಾ ರಾಮ್ ಅವರನ್ನು ಟ್ರೋಲ್ ಮಾಡದೇ ಇರುತ್ತಾರಾ?

More from Filmibeat

English summary
Rachita Ram may face huge trolls as she featured in Neene dating app promotion. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X