ಐ ಲವ್ ಯೂ ಚಿತ್ರ ನೋಡಿ ರಚಿತಾ ರಾಮ್ ತಾಯಿ ಹೇಳಿದ್ದೇನು?

Recommended Video

ಐ ಲವ್ ಯು ಸಿನಿಮಾ ನೋಡಿ ತಾಯಿ ಏನಂದ್ರು ಎಂಬ ಬಗ್ಗೆ ತಿಳಿಸಿದ ರಚಿತಾ ರಾಮ್ | FILMIBEAT KANNADA

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ಐ ಲವ್ ಯೂ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರ ರಚಿತಾ ರಾಮ್ ಅವರ ಪಾತ್ರದ ವಿಚಾರಕ್ಕೆ ವಿವಾದ ಸೃಷ್ಟಿಸಿತ್ತು.

ರಚಿತಾ ರಾಮ್ ಹಾಡೊಂದರಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದು, ಅದಕ್ಕೆ ಉಪೇಂದ್ರ ಅವರೇ ಕಾರಣ ಎಂಬ ಮಾತು ಹೇಳಿದ್ದಾರೆ ಎಂದು ಉಪೇಂದ್ರ ಪತ್ನಿ ಪ್ರಿಯಾಂಕಾ ರಚ್ಚು ವಿರುದ್ಧ ಕಿಡಿ ಕಾರಿದ್ದರು. ಅದಾದ ಬಳಿಕ ರಚಿತಾ ರಾಮ್ ಕೂಡ ಅಷ್ಟಾಗಿ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಬೇರೆ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣನಾ ಅಥವಾ ಉಪ್ಪಿ ಪತ್ನಿ ಮೇಲೆ ಬೇಸರ ಮಾಡಿಕೊಂಡರಾ ಗೊತ್ತಿಲ್ಲ.

ಆದ್ರೆ, ಸಿನಿಮಾ ರಿಲೀಸ್ ಆದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ಇಷ್ಟ ಆಗಿಲ್ಲ ಎಂದ ಪ್ರೇಕ್ಷಕರು ಕೂಡ ಇದ್ದಾರೆ. ಸಿನಿಮಾ ರಿಲೀಸ್ ಆದ ಬಳಿಕ ಟಿವಿ ವಾಹಿನಿಯೊಂದಕ್ಕೆ ರಚಿತಾ ರಾಮ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಿನಿಮಾ ನೋಡಿದ ಬಳಿಕ ರಚಿತಾ ತಾಯಿ ಏನಂದ್ರು ಎಂಬುದನ್ನ ಹೇಳಿಕೊಂಡಿದ್ದಾರೆ. ಮುಂದೆ ಓದಿ....

ರಚಿತಾ ಅಕ್ಕ, ತಾಯಿ ಸಿನಿಮಾ ನೋಡಿದ್ರು

ರಚಿತಾ ಅಕ್ಕ, ತಾಯಿ ಸಿನಿಮಾ ನೋಡಿದ್ರು

ಐ ಲವ್ ಯೂ ಚಿತ್ರವನ್ನ ರಚಿತಾ ರಾಮ್ ಅವರ ಅಕ್ಕ ನಿತ್ಯಾ ರಾಮ್ ಮತ್ತು ತಾಯಿ ನೋಡಿದರಂತೆ. ''ನನ್ನ ಮಗಳ ಸಿನಿಮಾ ಅನ್ನೋದಕ್ಕಿಂತ ಉಪೇಂದ್ರ-ರಚಿತಾ ಸಿನಿಮಾ ಅಂತ ಹೋಗಿದ್ದೆ. ತುಂಬಾ ಚೆನ್ನಾಗಿ ನಟಿಸಿದ್ದಿಯಾ. ಅದರಲ್ಲೂ ಆ ಹಾಡಿನಲ್ಲಂತೂ ಅದ್ಭುತ ಪರ್ಫಾಮೆನ್ಸ್. ಎಕ್ಸ್ ಪ್ರೆಶನ್ ಚಿಂದಿ. ಯೂ ಕಿಲ್ಡ್ ಹಿಟ್' ಎಂದು ಹೊಗಳಿದರಂತೆ.

ನೆಗಿಟೀವ್ ಬಗ್ಗೆ ಕೇರ್ ಮಾಡಲ್ಲ

ನೆಗಿಟೀವ್ ಬಗ್ಗೆ ಕೇರ್ ಮಾಡಲ್ಲ

'ನಮ್ಮ ತಾಯಿನೇ ಸಿನಿಮಾ ನೋಡಿ ಮೆಚ್ಚಿಕೊಂಡರು. ಇನ್ಯಾರು ಈ ಹಾಡಿನ ಬಗ್ಗೆ ಅಥವಾ ನನ್ನ ಪಾತ್ರದ ಬಗ್ಗೆ ನೆಗಿಟೀವ್ ಹೇಳಿಕೊಂಡರು ನಾನು ತಲೆಕೆಡಿಸಿಕೊಳ್ಳಲ್ಲ' ಎಂದು ರಚಿತಾ ರಾಮ್ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

'ಮಾಸ್ಟರ್ ಪೀಸ್' ಸಾಂಗ್ ಅದು

'ಮಾಸ್ಟರ್ ಪೀಸ್' ಸಾಂಗ್ ಅದು

ಐ ಲವ್ ಯೂ ಚಿತ್ರದಲ್ಲಿರುವ ರೋಮ್ಯಾಂಟಿಕ್ ಹಾಡಿನ ಬಗ್ಗೆ ಮಾತನಾಡಿದ ರಚಿತಾ ರಾಮ್ ''ಇದು ಮಾಸ್ಟರ್ ಪೀಸ್ ಹಾಡು, ಕಿರಣ್ ಅವರು ಒಳ್ಳೆಯ ಹಾಡು ಕೊಟ್ಟಿದ್ದಾರೆ. ಅಷ್ಟು ಒಳ್ಳೆ ಹಾಡು ಬಂದಿದ್ದಕ್ಕೆ ನಮಗೆ ಪರ್ಫಾಮ್ ಮಾಡೋಕೆ ಸಾಧ್ಯವಾಗಿದ್ದು. ಚಿನ್ನಿ ಮಾಸ್ಟರ್ ಕೊರಿಯೋಗ್ರಫಿ ಸೂಪರ್. ರೋಮ್ಯಾಂಟಿಕ್ ಹಾಡುಗಳಿಗೆ ಅವರು ಫೇಮಸ್ ಅಂತ ಕೇಳಿದ್ದೆ, ಅದನ್ನ ಈ ಸಿನಿಮಾದಲ್ಲಿ ನೋಡಿದೆ'' ಎಂದು ಖುಷಿ ಹಂಚಿಕೊಂಡರು.

ಸಕ್ಸಸ್ ಮೀಟ್ ನಲ್ಲೂ ಭಾಗಿಯಾಗಿಲ್ಲ

ಸಕ್ಸಸ್ ಮೀಟ್ ನಲ್ಲೂ ಭಾಗಿಯಾಗಿಲ್ಲ

ರಚಿತಾ ರಾಮ್ ತಮ್ಮ ಸಿನಿಮಾಗಳ ಪ್ರಚಾರದಲ್ಲಿ ಮಿಸ್ ಮಾಡದೆ ಭಾಗಿಯಾಗ್ತಾರೆ. ಆದರೆ ಐ ಲವ್ ಯೂ ಸಿನಿಮಾದಲ್ಲಿ ಪ್ರಚಾರದಿಂದ ಸ್ವಲ್ಪ ದೂರು ಉಳಿದಿದ್ದಾರೆ. ಕೆಲವೇ ಸಂದರ್ಶನ ಮಾತ್ರ ಕೊಟ್ಟಿದ್ದು, ಮುಖ್ಯವಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ. ತೆಲುಗಿನ ಪ್ರೀ-ರಿಲೀಸ್ ಕಾರ್ಯಕ್ರಮ ಹಾಗೂ ಐ ಲವ್ ಯೂ ಸಕ್ಸಸ್ ಮೀಟ್ ನಲ್ಲೂ ಕಾಣಿಸಿಕೊಂಡಿಲ್ಲ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ.

More from Filmibeat

English summary
Kannada actor Rachita ram mother expressed happy about i love you movie after watched movie in theater. i love you movie released on june 14th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X