For Quick Alerts
  ALLOW NOTIFICATIONS  
  For Daily Alerts

  ಧ್ರುವ 'ಭರ್ಜರಿ' ಚಿತ್ರಕ್ಕೆ 'ಬುಲ್ ಬುಲ್' ಹಕ್ಕಿ ನಾಯಕಿ

  By Harshitha
  |

  ಅಂತೂ ಇಂತೂ ಧ್ರುವ ಸರ್ಜಾ ತಮ್ಮ ಹೊಸ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. 'ಬಹದ್ದೂರ್' ಚಿತ್ರದ ನಂತರ ತಿಂಗಳುಗಳ ಕಾಲ ಸದ್ದೇ ಮಾಡದ ಸರ್ಜಾ ಕುಟುಂಬದ ಕುಡಿ ಇಂದು ತಮ್ಮ ನೂತನ ಚಿತ್ರದ ಪೂಜಾ ಕಾರ್ಯಕ್ರಮವನ್ನ ನೆರವೇರಿಸಿದರು.

  ನಿಮ್ಮ 'ಫಿಲ್ಮಿಬೀಟ್ ಕನ್ನಡ' ಈ ಹಿಂದೆ ವರದಿ ಮಾಡಿದಂತೆ ಧ್ರುವ ಸರ್ಜಾ ಅಭಿನಯಿಸಲಿರುವ ಹೊಸ ಚಿತ್ರ 'ಭರ್ಜರಿ'. 'ಬಹದ್ದೂರ್' ಚಿತ್ರದ ನಿರ್ದೇಶಕ ಚೇತನ್, ಧ್ರುವ ಸರ್ಜಾಗಾಗಿ ಮಾಡಿರುವ 'ಭರ್ಜರಿ' ಕಥೆ ಇದು.

  'ಭರ್ಜರಿ' ಚಿತ್ರದ ಸ್ಕ್ರಿಪ್ಟ್ ಪೂಜೆ ಕಾರ್ಯಕ್ರಮ ಇಂದು ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿರುವ ಶ್ರೀ ಪಂಚಮುಖಿ ಆಂಜಿನೇಯ ದೇವಸ್ಥಾನದಲ್ಲಿ ನಡೆಯಿತು. ನಿರ್ದೇಶಕ ಚೇತನ್, ನಾಯಕ ಧ್ರುವ ಸರ್ಜಾ, 'ಅಲೆಮಾರಿ' ಸಂತು, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸೇರಿದಂತೆ ಆಪ್ತೇಷ್ಟರಷ್ಟೇ ಭಾಗವಹಿಸಿದರು.['ಭರ್ಜರಿ'ಯಾಗಿ ಬರುತ್ತಿದ್ದಾರೆ 'ಬಹದ್ದೂರ್' ಧ್ರುವ ಸರ್ಜಾ]

  ಧ್ರುವ ಸರ್ಜಾ ಜೊತೆ ಜೋಡಿಯಾಗಲಿರುವ ಕನ್ಯಾಮಣಿ ಬಗ್ಗೆ ಇಲ್ಲಿವರೆಗೂ ಕುತೂಹಲ ಇತ್ತು. ಆ ಸಸ್ಪೆನ್ಸ್ ಗೆ ಇವತ್ತು ಬ್ರೇಕ್ ಬಿದ್ದಿದೆ. ಯಾಕಂದ್ರೆ, 'ಭರ್ಜರಿ' ಚಿತ್ರದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗುತ್ತಿರುವುದು 'ಬುಲ್ ಬುಲ್' ಬೆಡಗಿ ರಚಿತಾ ರಾಮ್.

  ಇಂದು ಸಿನಿಮಾ ಸ್ಕ್ರಿಪ್ಟ್ ಗೆ ಅಧಿಕೃತ ಚಾಲನೆ ನೀಡಿರುವ ಚಿತ್ರತಂಡ, ಸದ್ಯದಲ್ಲಿ ಸ್ಟೈಲಿಶ್ ಫೋಟೋಶೂಟ್ ಕೂಡ ಹಮ್ಮಿಕೊಂಡಿದೆ. ಮುಂದಿನ ತಿಂಗಳು 'ಭರ್ಜರಿ'ಯಾಗಿ ಮುಹೂರ್ತ ನೆರವೇರಲಿದೆ. (ಫಿಲ್ಮಿಬೀಟ್ ಕನ್ನಡ)

  English summary
  Kannada Actress Rachita Ram is roped into play lead opposite Dhruva Sarja in 'Bharjari', which is directed by Chetan Kumar of 'Bahaddur' fame. 'Bharjari' script pooja was held today (April 22nd) in Sri Panchamuki Anjaneya temple in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X