ದರ್ಶನ್ ಋಣ ತೀರಿಸುವ ಆಸೆ ವ್ಯಕ್ತಪಡಿಸಿದ ರಚಿತಾ ರಾಮ್
ಡಿಂಪಲ್ ಕ್ವೀನ್ ಎಂದು ಪ್ರೀತಿಯಿಂದ ಕರೆಯಲ್ಪಡುವ ನಟಿ ರಚಿತಾ ರಾಮ್ ಚಿತ್ರರಂಗಕ್ಕೆ ಬಂದು ಏಳು ವರ್ಷವಾಯಿತು.
Recommended Video
ಹಲವು ಸ್ಟಾರ್‌ನಟರೊಂದಿಗೆ ಅಭಿನಯಿಸಿರುವ ರಚಿತಾ ರಾಮ್ ತಮ್ಮ ಭವಿಷ್ಯದ ಕನಸೊಂದನ್ನು ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲ ನಟ ದರ್ಶನ್ ಅವರ ಋಣಸಂದಾಯ ಮಾಡುವ ಇರಾದೆಯನ್ನೂ ರಚಿತಾ ರಾಮ್ ವ್ಯಕ್ತಪಡಿಸಿದ್ದಾರೆ.
ನಟಿ ರಚಿತಾ ರಾಮ್ ಗೆ ನಿರ್ಮಾಪಕಿ ಆಗುವ ಕನಸಿದೆಯಂತೆ. ತಾವೊಂದು ನಿರ್ಮಾಣ ಸಂಸ್ಥೆಯನ್ನು ಆರಂಭಿಸುವ ಕನಸನ್ನು ರಚಿತಾ ರಾಮ್ ಸಂದರ್ಶನವೊಂದರಲ್ಲಿ ವ್ಯಕ್ತಪಡಿಸಿದ್ದಾರೆ.

ಬುಲ್-ಬುಲ್ ಸಿನಿಮಾ ಮೂಲಕ ಎಂಟ್ರಿ
ನಟಿ ರಚಿತಾ ರಾಮ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ದರ್ಶನ್ ಅವರ ಸಿನಿಮಾದಲ್ಲಿ. ತೂಗುದೀಪ ಪ್ರೊಡಕ್ಷನ್ ನಿರ್ಮಿಸಿದ್ದ ಬುಲ್-ಬುಲ್ ಸಿನಿಮಾದ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯವಾದವರು ರಚಿತಾ ರಾಮ್.

ತೂಗುದೀಪ ಪ್ರೊಡಕ್ಷನ್ ಸಿನಿಮಾ ಮೂಲಕ ಎಂಟ್ರಿ
ತೂಗದೀಪ ಪ್ರೊಡಕ್ಷನ್ ನಿಂದಾಗಿ ನಾನು ಚಿತ್ರರಂಗಕ್ಕೆ ಬಂದೆ. ದರ್ಶನ್ ಅವರು ನೀಡಿದ ಅವಕಾಶದಿಂದ ಚಿತ್ರರಂಗದಲ್ಲಿ ಇಷ್ಟು ವರ್ಷ ಸಾಗಿಬರುವಂತಾಯಿತು' ಎಂದಿರುವ ರಚಿತಾ ರಾಮ್ ತಮ್ಮ ಪ್ರತಿಭೆಯನ್ನು ಕನ್ನಡ ಪ್ರೇಕ್ಷಕರಿಗೆ ಅವಕಾಶ ನೀಡಿದ ದರ್ಶನ್ ಅವರಿಗೆ ಭಿನ್ನವಾಗಿ ಧನ್ಯವಾದ ಹೇಳುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

'ಮೊದಲ ಸಿನಿಮಾಕ್ಕೆ ದರ್ಶನ್ ನಾಯಕರಾಗಬೇಕು'
'ನನ್ನ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡುವ ಮೊದಲ ಸಿನಿಮಾಕ್ಕೆ ದರ್ಶನ್ ಅವರೇ ನಾಯಕರಾಗಬೇಕು. ಇದೇ ನನ್ನ ಆಸೆ' ಎಂದಿದ್ದಾರೆ ರಚಿತಾ ರಾಮ್. ತಮಗೆ ಅವಕಾಶ ಕೊಟ್ಟ ನಾಯಕನನ್ನೇ ತಮ್ಮ ನಿರ್ಮಾಣದ ಮೊದಲ ಸಿನಿಮಾಕ್ಕೆ ತೆಗೆದುಕೊಳ್ಳಬೇಕು ಎಂಬ ಆಸೆಯನ್ನು ರಚಿತಾ ರಾಮ್ ವ್ಯಕ್ತಪಡಿಸಿದ್ದಾರೆ.

ಫಿಲ್ಮೀಬೀಟ್ ಕನ್ನಡದೊಂದಿಗೆ ರಚಿತಾ ರಾಮ್ ಮಾತು
ಫಿಲ್ಮೀಬೀಟ್ ಕನ್ನಡದೊಂದಿಗೆ ಮಾತನಾಡಿದ್ದ ರಚಿತಾ ರಾಮ್, ತಾವೊಂದು ಹೊಸ ತಂಡ ಕಟ್ಟಿದ್ದು, ನನ್ನ ಕಡೆಯಿಂದ ಹೊಸ ಸಿನಿಮಾ ಒಂದು ಬರಲಿದೆ ಎಂದಿದ್ದರು. ನಿರ್ದೇಶಕಿನಾ, ನಿರ್ಮಾಪಕಿನಾ, ಕತೆಗಾರ್ತಿಯಾ ಎನ್ನುವ ಪ್ರಶ್ನೆಗಳಿಗೆಲ್ಲ ಸದ್ಯಕ್ಕೆ ಉತ್ತರ ಇಲ್ಲ. ಸಣ್ಣದಾಗಿ ಫೊಟೋ ಶೂಟ್ ಮಾಡಿ, ಮೋಶನ್ ಪೋಸ್ಟರ್ ಬಿಡುಗಡೆಯ ಮೂಲಕ ರಿವೀಲ್ ಮಾಡೋಣ ಅಂತ ಇದ್ದೀನಿ ಎಂದು ಹೇಳಿದ್ದರು.


Click it and Unblock the Notifications











