»   » ನಟ ರಮೇಶ್ ಅರವಿಂದ್ ಪುತ್ರಿ ಬೇರಾರೂ ಅಲ್ಲ! ಈಕೆಯೇ.!

ನಟ ರಮೇಶ್ ಅರವಿಂದ್ ಪುತ್ರಿ ಬೇರಾರೂ ಅಲ್ಲ! ಈಕೆಯೇ.!

Posted By:
Subscribe to Filmibeat Kannada

ಶೀರ್ಷಿಕೆ ನೋಡಿ ಏನೇನೋ ಕಲ್ಪಿಸಿಕೊಳ್ಳುವ ಮುನ್ನ ನಾವು ಹೇಳುತ್ತಿರುವುದು ರೀಲ್ ಸುದ್ದಿ ಮಾತ್ರ ಅನ್ನೋದು ನಿಮಗೆ ನೆನಪಿರಲಿ.

ನಟ ರಮೇಶ್ ಅರವಿಂದ್ ಅಭಿನಯಿಸುತ್ತಿರುವ ಹೊಚ್ಚ ಹೊಸ ಸಿನಿಮಾ 'ಪುಷ್ಪಕ ವಿಮಾನ' ಬಗ್ಗೆ ನಿಮಗೆ ಗೊತ್ತಿದೆ ತಾನೆ.[ಅಪ್ಪ-ಮಗಳ ಮುದ್ದಾದ 'ಪುಷ್ಪಕ ವಿಮಾನ' ನೋಡಿದ್ರಾ?]


'ಪುಷ್ಪಕ ವಿಮಾನ' ಚಿತ್ರದಲ್ಲಿ ರಮೇಶ್ ಅರವಿಂದ್ ಪುತ್ರಿಯ ಪಾತ್ರದಲ್ಲಿ ಪುಟಾಣಿ ಯುವಿನಾ ಪಾರ್ಥವಿ ನಟಿಸಿರುವುದನ್ನ ನೀವೆಲ್ಲಾ ಈಗಾಗಲೇ ಜಗಜ್ಜಾಹೀರಾಗಿರುವ ಟೀಸರ್ ನಲ್ಲಿ ನೋಡಿರ್ತೀರಾ.


ಈಗ ಇದೇ ಚಿತ್ರದ ಕಥೆಯಲ್ಲಿ ಹೊಸ ಟ್ವಿಸ್ಟ್ ಇದೆ ಅನ್ನೋ ಸಂಗತಿ ಬಯಲಾಗಿದೆ. 'ಪುಷ್ಪಕ ವಿಮಾನ' ಚಿತ್ರದಲ್ಲಿ ಕನ್ನಡದ ಸ್ಟಾರ್ ನಟಿಯೊಬ್ಬರು ರಮೇಶ್ ಅರವಿಂದ್ ಮಗಳಾಗಿ ಅಭಿನಯಿಸಲಿದ್ದಾರೆ. ಆಕೆ ಯಾರು? ಎನ್ನುವ ಸಂಪೂರ್ಣ ವಿವರ ನೀಡ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....


ರಮೇಶ್ ಅರವಿಂದ್ ಮಗಳು ಯಾರು?

ನಟ ರಮೇಶ್ ಅರವಿಂದ್ ಮುದ್ದು ಮಗಳಾಗಿ 'ಪುಷ್ಟಕ ವಿಮಾನ' ಚಿತ್ರದಲ್ಲಿ ಯುವಿನಾ ಪಾರ್ಥವಿ ನಟಿಸಿದ್ದಾಳೆ. ಆಕೆಯ ಟೀನೇಜ್ ವಯಸ್ಸಿನ (Elder Version) ಪಾತ್ರದಲ್ಲಿ ನಟಿಸುತ್ತಿರುವ ಕನ್ನಡ ಸ್ಟಾರ್ ನಟಿ...??['ಪುಷ್ಪಕ ವಿಮಾನ' ಏರ್ತಾರಾ ಕಿಂದರಿ ಜೋಗಿ ಜೂಹಿ ಚಾವ್ಲಾ]


ಬೇರಾರೂ ಅಲ್ಲ! ರಚಿತಾ ರಾಮ್!

ಹೌದು, ಯುವಿನಾ ಪಾರ್ಥವಿಯ Elder Version ಪಾತ್ರದಲ್ಲಿ ನಟಿ ರಚಿತಾ ರಾಮ್ ಅಭಿನಯಿಸಲಿದ್ದಾರೆ. ನಟ ರಮೇಶ್ ಅರವಿಂದ್ ಮಗಳ ಪಾತ್ರದಲ್ಲಿ ರಚಿತಾ ರಾಮ್ 'ಪುಷ್ಪಕ ವಿಮಾನ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.[ಕನ್ನಡ ಚಿತ್ರದಲ್ಲಿ ಐಶ್ವರ್ಯ ರೈ ಮಗಳು ಆರಾಧ್ಯ ನಟನೆ?]


ರಚಿತಾ ಗ್ರೀನ್ ಸಿಗ್ನಲ್ ನೀಡಿದ್ದಾಗಿದೆ!

ಅಪ್ಪ-ಮಗಳ ಬಾಂಧವ್ಯದ ಬಗ್ಗೆ ಹೆಣೆದಿರುವ 'ಪುಷ್ಪಕ ವಿಮಾನ' ಚಿತ್ರ ಕಥೆ ರಚಿತಾ ರಾಮ್ ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಅದರಲ್ಲೂ ನಟ ರಮೇಶ್ ಅರವಿಂದ್ ಅಂದ್ರೆ ರಚಿತಾ ರಾಮ್ ಗೆ ಅಚ್ಚು ಮೆಚ್ಚು. ಹೀಗಾಗಿ, ಅವಕಾಶ ಸಿಕ್ಕ ತಕ್ಷಣ ಹಿಂದು ಮುಂದೆ ನೋಡದೆ ಚಿತ್ರದಲ್ಲಿ ನಟಿಸುವುದಕ್ಕೆ ರಚಿತಾ ರಾಮ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.


ನಾಳೆಯಿಂದಲೇ ಶೂಟಿಂಗ್?

ಮೂಲಗಳ ಪ್ರಕಾರ, ನಾಳೆಯಿಂದಲೇ (ಶುಕ್ರವಾರ) 'ಪುಷ್ಪಕ ವಿಮಾನ' ಸೆಟ್ ಗೆ ರಚಿತಾ ರಾಮ್ ಹಾಜರ್ ಆಗಲಿದ್ದಾರೆ. ಚಿತ್ರಕ್ಕಾಗಿ 12 ದಿನಗಳ ಕಾಲ್ ಶೀಟ್ ನೀಡಿದ್ದಾರೆ ರಚಿತಾ ರಾಮ್. [ಕನ್ನಡ ಚಿತ್ರದಲ್ಲಿ ಐಶ್ವರ್ಯ ರೈ ಮಗಳು ಆರಾಧ್ಯ ನಟನೆ?]


'ಪುಷ್ಪಕ ವಿಮಾನ'ದಲ್ಲಿ ಜೂಹಿ ಚಾವ್ಲಾ?

'ಪುಷ್ಪಕ ವಿಮಾನ' ಚಿತ್ರದ ಸ್ಪೆಷಲ್ ಪಾತ್ರವೊಂದರಲ್ಲಿ ನಟಿಸುವುದಕ್ಕೆ ನಿರ್ದೇಶಕ ರವೀಂದ್ರನಾಥ್ ಬಾಲಿವುಡ್ ನಟಿ ಜೂಹಿ ಚಾವ್ಲಾ ರವರನ್ನ ಸಂಪರ್ಕಿಸಿದ್ದಾರೆ. ಜೂಹಿ ಚಾವ್ಲಾ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ.


'ಪುಷ್ಪಕ ವಿಮಾನ' ಚಿತ್ರದ ಬಗ್ಗೆ...

ಅಪ್ಪ-ಮಗಳು ನಡುವಿನ ಅನ್ಯೋನ್ಯ ಸಂಬಂಧ ಕುರಿತ ಮನ ಮಿಡಿಯುವ ಕಥೆ ಹೊಂದಿರುವ ಚಿತ್ರ 'ಪುಷ್ಪಕ ವಿಮಾನ'. ಚಿತ್ರಕ್ಕೆ ರವೀಂದ್ರನಾಥ್ ಆಕ್ಷನ್ ಕಟ್ ಹೇಳಿದ್ದಾರೆ.


'ಪುಷ್ಪಕ ವಿಮಾನ' ಟೀಸರ್....

ಈಗಾಗಲೇ ಬಿಡುಗಡೆ ಆಗಿರುವ 'ಪುಷ್ಪಕ ವಿಮಾನ' ಚಿತ್ರದ ಟೀಸರ್ ಇಲ್ಲಿದೆ ನೋಡಿ....


English summary
Kannada Actress Rachita Ram is roped into play Ramesh Aravind's daughter in Kannada Movie 'Pushpaka Vimana', Directed by Ravindranath.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada