For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ರಚಿತಾ ರಾಮ್ !

  By Pavithra
  |
  ಬ್ಯಾಟ್ ಹಿಡಿದ ರಚಿತಾ ರಾಮ್..! | Filmibeat Kannada

  ಚಂದನವನದಲ್ಲಿ ಆಗಾಗ ಕ್ರಿಕೆಟ್ ಮ್ಯಾಚ್ ಗಳು ನಡೆಯುತ್ತಲೇ ಇರುತ್ತೆ. ರಾಜ್ ಕಪ್, ಡಿ ಬ್ರದರ್ಸ್ ಪ್ರಿಮಿಯರ್ ಲೀಗ್, ಕೆಸಿಸಿ ಕಪ್ ಹೀಗೆ ಸಾಕಷ್ಟು ಭಾರಿ ಕಲಾವಿದರು ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನದಲ್ಲಿ ಆಟ ಆಡುತ್ತಾರೆ. ಸದ್ಯ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದಾರೆ.

  ಹಾಗಾದರೆ ನಟಿ ರಚಿತಾ ರಾಮ್ ಯಾವ ಟೀಂ ನಲ್ಲಿ ಕ್ರಿಕೆಟ್ ಆಡುತ್ತಾರೆ? ಕೆಸಿಸಿ ತಂಡದಲ್ಲಿ ಏನಾದರೂ ಕಾಣಿಸಿಕೊಳ್ಳುತ್ತಾರಾ? ಎನ್ನುವ ಪ್ರಶ್ನೆ ನಿಮ್ಮಲ್ಲಿಯೂ ಮೂಡಿರುತ್ತೆ. ಆದರೆ ರಚಿತಾ ಸಿನಿಮಾ ಸೆಟ್ ನಲ್ಲಿ ಕ್ರಿಕೆಟ್ ಆಡಿದ್ದಾರೆ.

  ಮೇ 10, 'ಬುಲ್ ಬುಲ್' ರಚಿತಾಗೆ ಅದೃಷ್ಟ ಕೊಟ್ಟ ದಿನಮೇ 10, 'ಬುಲ್ ಬುಲ್' ರಚಿತಾಗೆ ಅದೃಷ್ಟ ಕೊಟ್ಟ ದಿನ

  ರಿಯಲ್ ಸ್ಟಾರ್ ಉಪ್ಪಿ ಹಾಗೂ ರಚಿತಾ ರಾಮ್ ಅಭಿನಯದ 'ಐ ಲವ್ ಯು' ಸಿನಿಮಾ ಚಿತ್ರೀಕರಣದ ವೇಳೆ ರಚಿತಾ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ್ದಾರೆ. ಉಪ್ಪಿ ಕೂಡ ರಚಿತಾಗೆ ಸಾಥ್ ಕೊಟ್ಟಿದ್ದಾರೆ.

  Rachita Ram played cricket at the I Love You cinema set

  ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಫೋಟೋವನ್ನು ಶೇರ್ ಮಾಡಿರುವ ರಚಿತಾ ಸಾಕಷ್ಟು ವರ್ಷಗಳ ನಂತರ ಈ ಅವಕಾಶ ಸಿಕ್ಕಿರುವುದಾಗಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕಾಗಿ ಬಾಲ್ಯದ ನೆನಪು ಆಯ್ತು ಎಂದು ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.

  🤞😅🏏🏏🏏❤️

  A post shared by Rachita Ram (@rachita_ram) on

  English summary
  Kannada actress Rachita Ram played cricket at the I Love You cinema set. Rachita's Photos are viral on the social networking site.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X