ಕನ್ನಡದ ಈ ಸ್ಟಾರ್ ಕಲಾವಿದರು ವೋಟ್ ಮಾಡಿಲ್ಲ
ಸ್ಟಾರ್ ನಟ-ನಟಿಯರು ವೋಟ್ ಮಾಡುವುದರಿಂದ ಅಭಿಮಾನಿಗಳಿಗೆ ಪ್ರೇರಣೆ ಆಗುತ್ತೆ. ಇದರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗುತ್ತೆ. ಆದ್ರೆ ವೋಟ್ ಮಾಡಿ ಅಭಿಮಾನಿಗಳಿಗೆ ಸ್ಫೂರ್ತಿ ಆಗಬೇಕಾದವರು, ಹಕ್ಕು ಚಲಾಯಿಸಿ ಎಂದು ಸಂದೇಶ ನೀಡಬೇಕಾದವರೇ ಅನೇಕ ನಟ-ನಟಿಯರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ.
ಬಹುತೇಕ ಕಲಾವಿದರು ಭಾರಿ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುವ ಮೂಲಕ ಶಾಯಿ ಹಾಕಿದ ಬೆರಳನ್ನು ತೋರಿಸಿ ಸೆಲ್ಫಿ ತೆಗೆದು ಸಾಮಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಹಕ್ಕು ಚಲಾಯಿಸಿ ಎಂದು ಅಭಿಮಾನಿಗಳಿಗೆ ಸಂದೇಶ ಕೂಡ ನೀಡಿದ್ದಾರೆ. ಬೆಳಗ್ಗೆಯೇ ಕ್ಯೂ ನಲ್ಲಿ ನಿಂತು ಮತ ಚಲಾಯಿಸಿದ ಅನೇಕ ನಟ-ನಟಿಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆದ್ರೆ ಈ ಲಿಸ್ಟ್ ನಲ್ಲಿ ಕೆಲವು ಸ್ಟಾರ್ಸ್ ಫೋಟೋಗಳು ಮಿಸ್ ಆಗಿವೆ. ಕಾರಣ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವೋಟ್ ಮಾಡಿಲ್ಲ. ಸ್ಟಾರ್ ನಟರೇ ಮತ ಹಾಕದಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಹಾಗಾದರೆ ಈ ಭಾರಿ ಹಕ್ಕು ಚಲಾಯಿಸದ ನಟ-ನಟಿಯರು ಯಾರ್ಯಾರು?ಮುಂದೆ ಓದಿ..

ಹಕ್ಕು ಚಲಾಯಿಸದ ರಚಿತಾ ರಾಮ್
ಸ್ಟಾರ್ ಕಲಾವಿದರು ಮತದಾನ ಮಾಡಿದ ಫೋಟೋಗಳು ಸಾಮಾಜಿಕಾ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದ್ರೆ ಈ ಲಿಸ್ಟ್ ನಲ್ಲಿ ನಟಿ ರಚಿತಾ ಫೋಟೋ ಕಾಣುತ್ತಿಲ್ಲ. ಬೆಂಗಳೂರು ಗ್ರಾಮಂತರ ಕ್ಷೇತ್ರಕ್ಕೆ ಸೇರುವ ಆರ್ ಆರ್ ನಗರದಲ್ಲಿ ರಚಿತಾ ವೋಟ್ ಮಾಡಬೇಕಿತ್ತು. ಆದ್ರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಡಿಂಪಲ್ ಕ್ವೀನ್ ಮತ ಚಲಾಯಿಸಿಲ್ಲ. ಸದ್ಯ 'ಆನಂದ್' ಚಿತ್ರದಲ್ಲಿ ಬ್ಯುಸಿ ಇರುವ ರಚಿತಾ ತನ್ನ ಹಕ್ಕು ಚಲಾಯಿಸದೆ ಇರುವುದು ಅನೇಕರಿಗೆ ಬೇಸರ ತಂದಿದೆ.

ವೋಟ್ ಮಾಡದ ರಶ್ಮಿಕಾ ಮಂದಣ್ಣ
ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡದ ನಟಿ ರಶ್ಮಿಕಾ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿಲ್ಲ. ರಶ್ಮಿಕಾ ತವರೂರಾದ ವಿರಾಚಪೇಟೆಯಲ್ಲಿ ಮತದಾನ ಮಾಡಬೇಕಾಗಿತ್ತು. ಆದ್ರೆ ತನ್ನ ಹಕ್ಕು ಚಲಾಯಿಸದೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತೆಲುಗು ನಟ ವಿಜಯ್ ದೇವರಕೊಂಡ ಜೊತೆ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ ಕಿರಿಕ್ ಬೆಡಗಿ.

ಇಟಲಿಯಲ್ಲಿ ಮೇಘನಾ- ಚಿರು
ನಟಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ವೋಟ್ ಮಾಡದೆ ವಿದೇಶಿ ಪ್ರವಾಸದಲ್ಲಿ ಜಾಲಿ ಮಾಡುತ್ತಿದ್ದಾರೆ. ಇಟಲಿ ಪ್ರವಾಸದಲ್ಲಿ ಇರುವ ಮೇಘನಾ ದಂಪತಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಕ್ಕು ಚಲಾಯಿಸದೆ ಅನೇಕರ ಅಸಮದಾನಕ್ಕೆ ಕಾರಣರಾಗಿದ್ದಾರೆ. ಅಪ್ಪ-ಅಮ್ಮನ ಜೊತೆ ಬಂದು ಪ್ರತಿಬಾರಿಯೂ ಮತ ಚಲಾಯಿಸುತ್ತಿದ್ದ ಮೇಘನಾ ಈ ಬಾರಿ ಮತದಾನದ ಸಮಯದಲ್ಲಿ ಪತಿ ಚಿರು ಜೊತೆ ವಿದೇಶಿ ಫ್ಲೈಟ್ ಹತ್ತಿದ್ದಾರೆ.

ವಿದೇಶದಲ್ಲಿರುವ ಪುನೀತ್ ರಾಜ್ ಕುಮಾರ್
ಪ್ರತಿಬಾರಿಯೂ ತಪ್ಪದೆ ಬೆಳಗ್ಗೆಯೇ ಮತಗಟ್ಟಿಗೆ ಹೋಗಿ ಮತದಾನ ಮಾಡುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿಲ್ಲ. ವಿದೇಶಿ ಪ್ರವಾಸದಲ್ಲಿರುವ ಪುನೀತ್ ದಂಪತಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸದೆ ಇರುವುದು ಅನೇಕರ ಅಸಮದಾನಕ್ಕೆ ಕಾರಣವಾಗಿದೆ.

ಮೂರನೇ ಬಾರಿಯೂ ಮತದಾನ ಮಾಡದ ರಮ್ಯಾ
ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ರಮ್ಯಾ ಹೆಸರಿದೆ. ಆದರೆ, ನಿನ್ನೆ (ಗುರುವಾರ) ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಮತದಾನ ಮಾಡಲು ಬರಲಿಲ್ಲ. ಅದಕ್ಕೂ ಹಿಂದೆ ಮಂಡ್ಯದಲ್ಲಿ ನಡೆದ ಲೋಕಸಭಾ ಮರು ಚುನಾವಣೆ, ಹಾಗೂ ವಿಧಾನಸಭೆ ಚುನಾವಣೆಯಲ್ಲಿಯೂ ರಮ್ಯಾ ವೋಟ್ ಒತ್ತಿರಲಿಲ್ಲ. ಮೂರು ಬಾರಿಯೂ ವೋಟ್ ಮಾಡದೆ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.


Click it and Unblock the Notifications











