ನಟ ದರ್ಶನ್‌ಗೆ ಬಿಗ್‌ ರಿಲೀಫ್; ಕನ್ನಡ ತಾರೆಯರ ಪ್ರತಿಕ್ರಿಯೆ ಏನು?

ಚಿಕಿತ್ಸೆಗಾಗಿ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ಹೈಕೋರ್ಟ್‌ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಸಂಜೆ ವೇಳೆಗೆ ನಟ ದರ್ಶನ್ ಜೈಲಿನಿಂದ ಬಿಡುಗಡೆ ಆಗಿ ಬೆಂಗಳೂರಿಗೆ ವಾಪಸ್ ಬರುವ ನಿರೀಕ್ಷೆಯಿದೆ. ದರ್ಶನ್‌ಗೆ ರಿಲೀಫ್ ಸಿಕ್ಕ ಬಗ್ಗೆ ಚಿತ್ರರಂಗದ ತಾರೆಯರು ಪ್ರತಿಕ್ರಿಯಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದಾಗ ಚಿತ್ರರಂಗ ಕೆಲವರು ಬೆಂಬಲಕ್ಕೆ ನಿಂತಿದ್ದರು. ಪರಪ್ಪನ ಅಗ್ರಹಾರ ಜೈಲಿಗೂ ಹೋಗಿ ಭೇಟಿ ಮಾಡಿ ಬಂದಿದ್ದರು. ದರ್ಶನ್ ತಪ್ಪು ಮಾಡಿದ್ದರೂ ಅವರ ಪರ ನಿಲ್ಲುತ್ತೇವೆ ಎಂದು ಕೆಲವರು ಹೇಳಿದ್ದರು. ಇದೀಗ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರ ಬರುವ ಸುದ್ದಿ ಕೇಳಿ ಅಭಿಮಾನಿಗಳು, ಆಪ್ತರು ಸಂತಸ ವ್ಯಕ್ತಪಡಿಸಿದ್ದಾರೆ.

Rachita ram rakshitha nanda Kishore reacts on Darshan getting interim bail

ದರ್ಶನ್ ಆದಷ್ಟು ಬೇಗ ಸಂಕಷ್ಟದಿಂದ ಪಾರಾಗಿ ಬರಲಿ ಎಂದು ಅಭಿಮಾನಿಗಳು, ಕುಟುಂಬ ಸದಸ್ಯರು, ಆಪ್ತರು ಪ್ರಾರ್ಥಿಸಿದ್ದರು. ತರುಣ್ ಸುಧೀರ್ ಹಾಗೂ ಸೋನಲ್ ದಂಪತಿ ಇತ್ತೀವೆಗೆ ಹಾಸನಾಂಬೆ ದರ್ಶನ ಪಡೆದು ಪ್ರಾರ್ಥಿಸಿದ್ದರು. ಇನ್ನು ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಪೊಲೀಸರು ದರ್ಶನ್ ಅವರನ್ನು ಶವಕ್ಕೆ ಪಡೆಯುತ್ತಿದ್ದಂತೆ ಮೊದಲು ಪ್ರತಿಕ್ರಿಯಿಸಿದ್ದು ನಟಿ ಸಂಜನಾ ಗರ್ಲಾನಿ.

ಇದೀಗ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬರುತ್ತಿರುವ ಬಗ್ಗೆಯೂ ನಟಿ ಸಂಜನಾ ಪ್ರತಿಕ್ರಿಯಿಸಿ ಸಂಜನಾ ಮಾತನಾಡಿದ್ದಾರೆ. ವೀಡಿಯೋ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿರುವುದು ಖುಷಿಯ ವಿಚಾರ, ಅವರ ಆರೋಗ್ಯ ಸಮಸ್ಯೆ ಬಗ್ಗೆ ಗೊತ್ತೇಯಿದೆ. ಆದಷ್ಟು ಬೇಗ ಅವರು ಸಂಪೂರ್ಣವಾಗಿ ಪ್ರಕರಣದಿಂದ ಹೊರಬರಲಿ ಎಂದು ಪ್ರಾರ್ಥಿಸುವುದಾಗಿ ಸಂಜನಾ ಹೇಳಿದ್ದಾರೆ.

ನಿರ್ದೇಶಕ ನಂದ ಕಿಶೋರ್ ವೀಡಿಯೋ ಬೈಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ನಾನು ದೇವಸ್ಥಾನದಲ್ಲಿದ್ದೆ. ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕ ವಿಷಯ ಗೊತ್ತಾಯಿತು. ಬಹಳ ಖುಷಿಯಾಗುತ್ತಿದೆ. ದರ್ಶನ್ ಅವರಿಗೆ ಮತ್ತಷ್ಟು ಆಯಸ್ಸು, ಆರೋಗ್ಯ ಸಿಗಲಿ ಎಂದಿದ್ದಾರೆ.

ದರ್ಶನ್ ಬಂಧನ ವಿಚಾರದ ಬಗ್ಗೆ ನಟಿ ರಚಿತಾ ರಾಮ್ ತಡವಾಗಿ ಪ್ರತಿಕ್ರಿಯಿಸಿದ್ದರು. ತೂಗುದೀಪ ಪ್ರೊಡಕ್ಷನ್ಸ್ ತಮಗೆ ಮೊದಲ ಅವಕಾಶ ಕೊಟ್ಟಿದ್ದನ್ನು ನೆನಪಿಸಿಕೊಂಡಿದ್ದರು. ನನ್ನ ಗುರು ಸಮಾನರಾದ ದರ್ಶನ್ ಅವರು ಇಂತಹ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನುವುದನ್ನು ನಂಬಲು ಕಷ್ಟವಾಗುತ್ತದೆ ಎಂದಿದ್ದರು. ಇದೀಗ ದರ್ಶನ್‌ ಮಧ್ಯಂತರ ಜಾಮೀನು ಪಡೆದಿರುವ ಬಗ್ಗೆ ರಚಿತಾ ರಾಮ್ "ಕಾಲಾಯ ತಸ್ಮೈ ನಮಃ" ಎಂದು ಹೇಳಿದ್ದಾರೆ.

ನಟಿ ರಕ್ಷಿತಾ ಪ್ರೇಮ್ ಇನ್‌ಸ್ಟಾಗ್ರಾಮ್‌ನಲ್ಲಿ 'ಇವತ್ತು ಬಹಳ ಒಳ್ಳೆಯ ದಿನ' ಎಂದು ಬರೆದುಕೊಂಡಿದ್ದಾರೆ. ದಿನಕರ್ ಹಾಗೂ ನಟ ಧನ್ವೀರ್ ಗೌಡ ಇಬ್ಬರೂ ನಟ ದರ್ಶನ್ ಜಾಮೀನಿಗೆ ಶ್ಯೂರಿಟಿ ನೀಡಿದ್ದಾರೆ. ರಾಜಾಜಿನಗರ ಹಾಗೂ ಮಾಗಡಿ ರೋಡ್ ಪ್ರಾಪರ್ಟಿ ಶ್ಯೂರಿಟಿಯಾಗಿ ಇಡಲಾಗಿದೆ.

ದರ್ಶನ್ ಜೈಲಿನಿಂದ ಹೊರ ಬರುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಪತ್ನಿಯ ಜೊತೆ ಕಾರಿನಲ್ಲಿ ದರ್ಶನ್ ಬಳ್ಳಾರಿ ಜೈಲಿನಿಂದ ಬೆಂಗಳೂರಿಗೆ ಬರುತ್ತಾರೆ ಎನ್ನಲಾಗ್ತಿದೆ. ನಾಳೆ(ಅಕ್ಟೋಬರ್ 31) ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬ. ಈ ವಿಶೇಷ ದಿನದ ವೇಳೆಗೆ ದರ್ಶನ್ ಜೈಲಿನಿಂದ ಮನೆ ತಲುಪುತ್ತಿದ್ದಾರೆ.

ದರ್ಶನ್ ಜೈಲು ಸೇರಿ 131 ದಿನ ಕಳೆದಿತ್ತು. ತಂದೆಯನ್ನು ವಿನೀಶ್ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದ. ಜೈಲಿಗೂ ಭೇಟಿ ನೀಡಿ ತಂದೆಯನ್ನು ಭೇಟಿ ಮಾಡಿ ಬಂದಿದ್ದ. ಈ ಬಾರಿ ತಂದೆಯ ಜೊತೆಗೆ ಹುಟ್ಟುಹಬ್ಬ ಆಚರಿಸುವ ಸಾಧ್ಯತೆಯಿದೆ. ಇನ್ನು ದರ್ಶನ್ ಬೆಂಗಳೂರಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವ ಸಾಧ್ಯತೆಯಿದೆ. ದರ್ಶನ್ ಪಾಸ್‌ಪೋರ್ಟ್‌ ಅನ್ನು ಕೋರ್ಟ್‌ಗೆ ಸರೆಂಡರ್ ಮಾಡಲಾಗಿದೆ. ಒಂದಷ್ಟು ಷರತ್ತು ವಿಧಿದಿ ಮಧ್ಯಂತರ ಜಾಮೀನು ನೀಡಲಾಗಿದೆ.

More from Filmibeat

English summary
Sandalwood celebs express their happiness on Darshan releasing from jail;
Read more about: darshan rachita ram rakshita
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X