ಕಷ್ಟ ಬಂದು ಎಲ್ಲ ಕಳ್ಕೊಂಡ್ರೂ ಆ ಕೆಲಸ ಮಾಡಲ್ಲ, ವಕೀಲ್ ಸಾಬ್ ಜಗದೀಶ್‌ಗೆ ರಚಿತಾ ರಾಮ್ ಖಡಕ್ ಉತ್ತರ..!
ಧಾರಾವಾಹಿ ಪ್ರಪಂಚದಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದವರು ರಚಿತಾ ರಾಮ್. ಅಲ್ಲಿಂದಾಚೆ ಕಮರ್ಷಿಯಲ್ ಪಥದಲ್ಲಿಯೇ ಮುಂದುವರೆಯುತ್ತಾ ಬಂದ ರಚಿತಾ ರಾಮ್, ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ್ದಾರೆ. ದರ್ಶನ್ ಸೇರಿ ಡಾ.ಪುನೀತ್ ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಗಣೇಶ್, ದುನಿಯಾ ವಿಜಯ್ ಹೀಗೆ ಕನ್ನಡದ ಬಹುತೇಕ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಈ ಹತ್ತು ವರ್ಷಗಳ ಪ್ರಯಾಣದಲ್ಲಿ ಹಲವು ಏರಿಳಿತವನ್ನು ಕೂಡ ಕಂಡಿದ್ದಾರೆ.
ಇಂಥಾ ರಚಿತಾ ರಾಮ್ ಅವರ ಹೆಸರನ್ನು ಲಾಯರ್ ಜಗದೀಶ್ ಕುಂತಲ್ಲಿ ನಿಂತಲ್ಲಿ ಕನವರಿಸುತ್ತಿದ್ದಾರೆ. ರಚಿತಾ ರಾಮ್ ಮೇಲೆ ದಿನಕ್ಕೊಂದು ಬಾಂಬ್ ಎಸೆಯುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ರಚಿತಾ ರಾಮ್ ಈ ವಿಚಾರದ ಕುರಿತು ಮಾತನಾಡಿರಲಿಲ್ಲ. ವಕೀಲ್ ಸಾಬ್ ಹೇಳಿಕೆಗಳಿಗೆ ಕ್ಯಾರೇ ಎಂದಿರಲಿಲ್ಲ. ಆದರೆ ಈಗ ರಚಿತಾ ರಾಮ್ ಮಾತನಾಡಿದ್ದಾರೆ.ಆ ವ್ಯಕ್ತಿ ವಯಸ್ಸಿನಲ್ಲಿ ದೊಡ್ಡವರು ಮರ್ಯಾದೆ ಕೊಟ್ಟು ಸುಮ್ಮನಿದ್ದೇನೆ ಎಂದು ಹೇಳಿದ್ದಾರೆ. ಯಾರ ಜೊತೆಗೂ ಹೋಗಿ ಇರುವಳು ನಾನಲ್ಲ ಎಂದು ಖಂಡತುಂಡ ಉತ್ತರವನ್ನು ನೀಡಿದ್ದಾರೆ. ಈ ಮೂಲಕ ಲಾಯರ್ ಜಗದೀಶ್‌ಗೆ ತಿರುಗೇಟನ್ನು ನೀಡಿದ್ದಾರೆ.

ಹೌದು, ಅಸಲಿಗೆ ರಚಿತಾ ರಾಮ್ ಅಭಿನಯದ ಸಂಜು ವೆಡ್ಸ್ ಗೀತಾ 2 ಚಿತ್ರ ಈ ವಾರ ತೆರೆಗೆ ಬರಲಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ರಚಿತಾ ರಾಮ್ ಮಾಡುತ್ತಿದ್ದಾರೆ. ಆದರೆ ಚಿತ್ರಕ್ಕಿಂತ ರಚಿತಾ ರಾಮ್ ಅವರಿಗೆ ಲಾಯರ್ ಜಗದೀಶ್ ಅವರ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಎಷ್ಟೇ ಅವಾಯ್ಡ್ ಮಾಡುವ ಪ್ರಯತ್ನವನ್ನು ಮಾಡಿದರು ಕೂಡ ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ವಕೀಲ್ ಸಾಬ್ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಿರುವ ರಚಿತಾ ರಾಮ್, ತಂದೆ ತಾಯಿ ಒಡಹುಟ್ಟಿದವರನ್ನು ಹೊರತು ಪಡಿಸಿದರೆ ಸಂಬಂಧಿಕರೇ ನಮ್ಮ ಬಗ್ಗೆ ಕೆಲವೊಂದಿಷ್ಟು ವಿಚಾರ ಮಾತನಾಡುತ್ತಾರೆ. ಇನ್ನು ನಾನು ಲಾಯರ್ ಜಗದೀಶ್ ಅವರ ಬಗ್ಗೆ ನಾನೇನು ಹೇಳಲಿ ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ನನ್ನ ಪಾಡಿಗೆ ನನ್ನ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇನೆ, ಹನ್ನೆರಡು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ, ಅದಕ್ಕೆ ಪಡೆಯಬೇಕಾದ ಸಂಭಾವನೆ ಪಡೆಯುತ್ತಿದ್ದೇನೆ, ಅವಶ್ಯಕತೆ ಇರುವಾಗ ಮಾತ್ರ ನಾನು ಮಾತನಾಡುತ್ತೇನೆ ಹೊರತು ಸುಮ್ ಸುಮ್ನೆ ಮಾತನಾಡಲ್ಲ ಎಂದಿದ್ದಾರೆ. ಇನ್ನು ಚಿತ್ರದ ಚಿತ್ರೀಕರಣ ಇಲ್ಲದ ಸಮಯದಲ್ಲಿ ನಾನು ನನ್ನ ಕುಟುಂಬದ ಜೊತೆ ಟೈಮ್ ಕಳೆಯುತ್ತೇನೆ ಎಂದಿರುವ ರಚಿತಾ ರಾಮ್ ನೀವು ಹೇಳಿದ ವ್ಯಕ್ತಿ ನನಗಿಂತ ವಯಸ್ಸಿನಲ್ಲಿ ದೊಡ್ಡವರು ಹೀಗಾಗಿ ಅವರಿಗೆ ಅಗೌರವಿಸಲು ನನಗೆ ಇಷ್ಟ ಇಲ್ಲ ಎಂದಿದ್ದಾರೆ. ಅವರು ಹೇಳುತ್ತಿರುವುದೆಲ್ಲವೂ ಅಂತೆ ಕಂತೆ ಹೀಗಿರುವಾಗ ನಾನ್ಯಾಕೇ ಆ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಮಾತನಾಡಬೇಕು ಎಂದಿರುವ ರಚಿತಾ ರಾಮ್ ಹಾಗೊಂದು ವೇಳೆ ನಾನು ತಪ್ಪು ಕೆಲಸ ಮಾಡಿದ್ದರೆ ನನ್ನ ಜೀವನ ನನ್ನ ಇಷ್ಟ ಎಂದು ಹೇಳುತ್ತಿದ್ದೆ, ಆದರೆ ನಾನು ತಪ್ಪೇ ಮಾಡಿಲ್ಲ ಅಂದಾಗ ಯಾಕೆ ಯೋಚನೆ ಮಾಡಬೇಕು ಎಂದು TV9 ಕನ್ನಡಗೆ ನೀಡಿದ ಸಂದರ್ಶನವೊಂದರಲ್ಲಿ ರಚಿತಾ ರಾಮ್ ಮಾತನಾಡಿದ್ದಾರೆ.
ಮುಂದುವರೆದು ತಪ್ಪು ಮಾಡಿದ್ದರೆ ನಾನೇ ಒಪ್ಪಿಕೊಳ್ಳುತ್ತೇನೆ ಇಲ್ಲವಾದರೆ ಒಪ್ಪಿಕೊಳ್ಳಲ್ಲ ಎಂದಿರುವ ರಚಿತಾ ರಾಮ್ ನಾನು ಯಾವತ್ತು ನನ್ನ ಕುರಿತು ಕಾರ್ಯಕ್ರಮಗಳನ್ನು ಮಾಡಿ ಎಂದು ಟಿವಿ ಚಾನೆಲ್‌ಗಳಿಗೆ ಫೋನ್ ಮಾಡಿ ಕೇಳಿಕೊಂಡಿಲ್ಲ ನನ್ನ ಬಗ್ಗೆ ನೆಗೆಟಿವ್ ಸುದ್ದಿಗಳು ಬಂದಾಗ ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಎಂದು ಒತ್ತಡವನ್ನು ಹಾಕಿಲ್ಲ ಎಂದಿರುವ ರಚಿತಾ ರಾಮ್ ಕೆಲವರು ಸುಮ್ ಸುಮ್ನೆ ಕೆಣಕುವ ಕೆಲಸ ಮಾಡುತ್ತಾರೆ, ಆದರೆ ಕೆಲಸ ಮಾಡುವವರು ಯಾವುದಕ್ಕೂ ಟ್ರಿಗರ್ ಆಗಲ್ಲ ಎಂದು ಹೇಳಿದ್ದಾರೆ. ಜೀವನದಲ್ಲಿ ಕಮಿಟ್ಮೆಂಟ್‌ಗಳು ಜಾಸ್ತಿ ಇವೆ, ತಂದೆ ತಾಯಿಯ ಎಲ್ಲ ಕನಸುಗಳನ್ನು ನನಸು ಮಾಡುವ ಆಸೆ ನನಗೆ ಇದೆ ಹೀಗಾಗಿ ನಾನು ನನ್ನ ಕೆಲಸದ ಕಡೆ ಮಾತ್ರ ಗಮನ ಕೊಡುತ್ತಾ ಬಂದಿದ್ದೇನೆ ಎಂದು ಹೇಳಿರುವ ರಚಿತಾ ರಾಮ್ ನನಗೆ ಆ ತರ ಸ್ಪಾನ್ಸರ್ ಮಾಡುವವರು ಇದ್ದರೆ ನಾನ್ಯಾಕೇ ಈ ಹನ್ನೆರಡು ವರ್ಷ ಕಷ್ಟ ಪಡಬೇಕಿತ್ತು. ನೆಮ್ಮದಿಯಾಗಿ ಮನೆಯಲ್ಲಿ ಇರ್ತಿದ್ದೆ ಯಾವಾಗಲೋ ಒಂದೆರಡು ಸಿನಿಮಾ ಮಾಡಿಕೊಂಡು ಸುಮ್ನಾಗ್ತಿದ್ದೆ ಎಂದು ಹೇಳಿದ್ದಾರೆ.
ಅಪ್ಪಿ ತಪ್ಪಿ ರಚಿತಾ ರಾಮ್‌ಗೆ ಜೀವನದಲ್ಲಿ ಕಷ್ಟ ಬಂತು, ಜೀವನದಲ್ಲಿ ಎಲ್ಲಾ ಕಳೆದುಕೊಂಡೆ ಅನ್ನೋ ದಿನ ಬಂದರೆ ಒಂದು ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಅಲ್ಲಿ ಕೊಟ್ಟ ಪ್ರಸಾದ ತಿನ್ನುಕೊಂಡು ಇರುತ್ತೀನಿ ಹೊರತು ಯಾರದ್ದೋ ಜೊತೆಗೂ ಹೋಗಿ ಇರುವವಳು ನಾನಲ್ಲ ಎಂದಿರುವ ರಚಿತಾ ರಾಮ್ ಕೈ ತುಂಬಾ ಆ ದೇವರು ಕೆಲಸ ಕೊಟ್ಟಿದ್ದಾನೆ ಇದಕ್ಕೂ ಮೀರಿ ನಾನು ಏನೂ ಬೇಡಲು ಆಗಲ್ಲ ಬೇಡಿದರೆ ಅದು ದುರಾಸೆ ಆಗುತ್ತೆ ಅಂತಹ ದುರಾಸೆ ನನಗೆ ಇಲ್ಲ ಎಂದು ರಚಿತಾ ರಾಮ್ ಹೇಳಿದ್ದಾರೆ.


Click it and Unblock the Notifications











