For Quick Alerts
  ALLOW NOTIFICATIONS  
  For Daily Alerts

  ಪೆಂಟಗನ್ ಚಿತ್ರಕ್ಕೆ ಸಾಥ್ ನೀಡಿದ ಡಿಂಪಲ್ ಕ್ವೀನ್ ರಚಿತಾ ರಾಮ್

  |

  ಐದು ಕಥೆ, ಐದು ನಿರ್ದೇಶಕರು ಎಂಬ ಕಾರಣಕ್ಕೆ 'ಪೆಂಟಗನ್' ಎಂಬ ಹೊಸ ಸಿನಿಮಾ ಸುದ್ದಿಯಲ್ಲಿದೆ. ಈ ಹಿಂದೆ ರಿಷಬ್ ಶೆಟ್ಟಿ ಅಂಡ್ ಟೀಂ ಕಡೆಯಿಂದ ಮೂಡಿ ಬಂದಿದ್ದ 'ಕಥಾಸಂಗಮ' ಸಿನಿಮಾದಂತೆ ಪೆಂಟಗನ್ ಚಿತ್ರವನ್ನು ಮಾಡಲಾಗುತ್ತಿದೆ.

  ಗುಲಾಬಿ ಕೆಳಗೆ ಇರೋದನ್ನ ನೋಡಿ ಗಾಬರಿಯಾದ ರಚಿತಾ ರಾಮ್ | Filmibeat Kannada

  ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್‌ಮ್ಯಾನ್ ಚಿತ್ರದ ಮೂಲಕ ನಿರ್ಮಾಪಕರಾದ ಗುರುದೇಶಪಾಂಡೆ ಈಗ ಪೆಂಟಗನ್ ಚಿತ್ರವನ್ನು ತಮ್ಮದೇ 'ಜಿ ಸಿನಿಮಾಸ್' ಬ್ಯಾನರ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

  ಪೆಂಟಗನ್ ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಥ್ ನೀಡಿದ್ದು, ಮೊದಲ ಕಥೆಯ ಥೀಮ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮೊದಲ ಕಥೆ 'ಒನ್ ಪೆಗ್, ಒನ್ ಶಾಟ್' ಎಂಬ ಶೀರ್ಷಿಕೆಯಡಿ ಸಿದ್ಧವಾಗುತ್ತಿದೆ.

  ಮಾರುವೇಷದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಸುತ್ತಾಡಿದ ಕನ್ನಡದ ಖ್ಯಾತ ನಟಿಮಾರುವೇಷದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಸುತ್ತಾಡಿದ ಕನ್ನಡದ ಖ್ಯಾತ ನಟಿ

  ಇನ್ನು ಮೋಷನ್ ಪೋಸ್ಟರ್ ಜನವರಿ 18 ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುಂಚೆ ಪೆಂಟಗನ್ ಟೈಟಲ್ ಪೋಸ್ಟರ್‌ನ್ನು ಡಾರ್ಲಿಂಗ್ ಕೃಷ್ಣ ರಿಲೀಸ್ ಮಾಡಿದ್ದರು.

  ಇನ್ನುಳಿದಂತೆ ಐದು ನಿರ್ದೇಶಕರು ಯಾರು ಹಾಗೂ ಐದು ಕಥೆಗಳನ್ನು ನಟಿಸುವವರು ಯಾರು ಎಂಬುದು ಕುತೂಹಲ ಮೂಡಿಸಿದೆ. ಮುಂದಿನ ದಿನದಲ್ಲಿ ಒಂದೊಂದೆ ಕಥೆಯ ಬಗ್ಗೆ ಮಾಹಿತಿ ಹೊರಬೀಳುತ್ತಾ ಹೋಗಲಿದೆ.

  English summary
  G Cinemas Productions' second movie. Pentagon's First story theme poster launched by dimple queen Rachita Ram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X