'ಅಯೋಗ್ಯ'ನ ಜೊತೆ ಸೇರಿ ಹಳ್ಳಿ ಹುಡುಗಿ ಆದ ರಚಿತಾ ರಾಮ್
ನಟಿ ಡಿಂಪಲ್ ಕ್ವೀನ್ ಈಗ ವಿಭಿನ್ನ ಪಾತ್ರಗಳನ್ನು ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ 'ಅಯೋಗ್ಯ' ಸಿನಿಮಾ ಕೂಡ ಒಂದು. ಈ ಸಿನಿಮಾದಲ್ಲಿ ಮೊದಲ ಬಾರಿಗೆ ರಚಿತಾ ರಾಮ್ ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ.
ಸತೀಶ್ ನೀನಾಸಂ ಅವರ 'ಅಯೋಗ್ಯ' ಸಿನಿಮಾಗೆ ರಚಿತಾ ರಾಮ್ ನಾಯಕಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದು, ಅವರ ಲುಕ್ ತುಂಬ ಚೆನ್ನಾಗಿದೆ. ಸದ್ಯ ಚಿತ್ರದ ಕೆಲ ಹೊಸ ಪೋಸ್ಟರ್ ಗಳು ರಿಲೀಸ್ ಆಗಿದ್ದು, ರಚಿತಾ ಲುಕ್ ಹೊರಬಂದಿದೆ. ಸ್ವಲ್ಪ ದಪ್ಪ ಆಗಿರುವ ರಚಿತಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, ಈ ಹಿಂದೆ ಯೋಗರಾಜ್ ಭಟ್ ಜೊತೆ ಕೆಲಸ ಮಾಡಿದ್ದ ಮಹೇಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರಕ್ಕೆ ಎರಡನೇ ಬಾರಿ ಮುಹೂರ್ತ ಮಾಡಿದ ಚಿತ್ರತಂಡ ಈಗ ಶೂಟಿಂಗ್ ನಲ್ಲಿ ಬಿಜಿ ಇದೆ. ಸದ್ಯ 'ಅಯೋಗ್ಯ' ಚಿತ್ರದ ಚಿತ್ರೀಕರಣ ಮಂಡ್ಯದಲ್ಲಿ ನಡೆಯುತ್ತಿದ್ದು, ಶೂಟಿಂಗ್ ನಲ್ಲಿ ನಟಿ ರಚಿತಾ ರಾಮ್ ಮತ್ತು ಸತೀಶ್ ಭಾಗಿಯಾಗಿದ್ದಾರೆ.
English summary
Kannada actress Rachita Ram's Ayogya movie posters released.


Click it and Unblock the Notifications