ಮೊದಲ ಬಾರಿಗೆ 'ದ್ವಾರಕೀಶ್ ಚಿತ್ರ'ದಲ್ಲಿ ರಚಿತಾ ರಾಮ್
ನಟಿ ರಚಿತಾ ರಾಮ್ ಅವರ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಇದೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇರುವ ಅವರಿಗೆ ಇದೀಗ ಮತ್ತೊಂದು ದೊಡ್ಡ ಆಫರ್ ಸಿಕ್ಕಿದೆ. ದ್ವಾರಕೀಶ್ ಚಿತ್ರದಲ್ಲಿ ಮೊದಲ ಬಾರಿಗೆ ರಚಿತಾ ರಾಮ್ ನಟಿಸುತ್ತಿದ್ದಾರೆ.
ದ್ವಾರಕೀಶ್ ಚಿತ್ರ ಬ್ಯಾನರ್ 'ಅಮ್ಮ ಐ ಲವ್ ಯೂ' ನಂತರ ಹೊಸ ಸಿನಿಮಾ ಪ್ಲಾನ್ ಮಾಡಿದೆ. ಈ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ನಾಯಕನಾಗಿದ್ದಾರೆ. ಇದು ದ್ವಾರಕೀಶ್ ಬ್ಯಾನರ್ ನಲ್ಲಿ ಶಿವಣ್ಣ ನಟಿಸುತ್ತಿರುವ ಮೊದಲ ಸಿನಿಮಾವಾಗಿದೆ.

ಇದೇ ಸಿನಿಮಾಗೆ ಈಗ ರಚಿತಾ ರಾಮ್ ನಾಯಕಿ ಆಗಿದ್ದಾರೆ. ಶಿವಣ್ಣನ 'ರುಸ್ತುಂ' ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದ ರಚಿತಾಗೆ ಮತ್ತೊಮ್ಮೆ ಅದೃಷ್ಟ ಖುಲಾಯಿಸಿದೆ. ಅಂದಹಾಗೆ, ಡಿಸೆಂಬರ್ ವೇಳೆಗೆ ಈ ಸಿನಿಮಾದ ಶೂಟಿಂಗ್ ಶುರು ಆಗಲಿದೆ.

'ಶಿವಲಿಂಗ' ನಂತರ ಪಿ ವಾಸು ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಬರುತ್ತಿರುವ ಸಿನಿಮಾ ಇದಾಗಿದೆ. 'ಆಪ್ತಮಿತ್ರ' ಬಳಿಕ ಮತ್ತೆ ವಾಸು ಹಾಗೂ ದ್ವಾರಕೀಶ್ ಒಂದಾಗಿದ್ದಾರೆ.
More from Filmibeat
English summary
Actress Rrachita Ram selected to play lead role in Dwarakish banner new movie. Kannada producer Dwarakish will be producing a movie to kannada actor shivaraj kumar.
rachita ram shivaraj kumar dwarakish sandalwood kannada cinema ರಚಿತಾ ರಾಮ್ ಶಿವರಾಜ್ ಕುಮಾರ್ ದ್ವಾರಕೀಶ್ ಕನ್ನಡ ಸಿನಿಮಾ ಸ್ಯಾಂಡಲ್ ವುಡ್


Click it and Unblock the Notifications











