'ಕೆಲವು ಪಾತ್ರಗಳನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಚಿತಾ
ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಟಿದ್ದಾರೆ. ತೆಲುಗು ಚಿತ್ರದಲ್ಲಿ ಬ್ಯುಸಿ ಇರುವ ಬುಲ್ ಬುಲ್ ರಚಿತಾ, ಈಗಾಗಲೆ ಹೈದರಾಬಾದ್ ನಲ್ಲಿದ್ದಾರೆ. ತೆಲುಗು ನಟ ಕಲ್ಯಾಣ್ ದೇವ್ ಗೆ ನಾಯಕಿಯಾಗುವ ಮೂಲಕ ರಚಿತಾ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
Recommended Video
ಅಂದ್ಹಾಗೆ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ತೆಲುಗು ಸಿನಿಮಾದ ಚಿತ್ರೀಕರಣದ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡ ರಚಿತಾ ಈಗ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅಂದ್ಹಾಗೆ ಇದು ಏಪ್ರಿಲ್ ಸಿನಿಮಾದ ಲುಕ್. ಮುಂದೆ ಓದಿ..

ಚಿರು ಸರ್ಜಾ ಪಾತ್ರಕ್ಕೆ ಯಾರು ಬರ್ತಾರೆ?
ನಟ ಚಿರಂಜೀವಿ ಸರ್ಜಾ ಮಿಸ್ಸಿಂಗ್ ಎನ್ನುವ ರಚಿತಾ ಪೋಸ್ಟರ್ ಹಿಡಿದು ನಿಂತಿರುವ ಲುಕ್ ಅನ್ನು ರಿಲೀಸ್ ಮಾಡಲಾಗಿತ್ತು. ಆ ನಂತರ ಸಿನಿಮಾದ ಬಗ್ಗೆ ಯಾವುದೆ ಸುದ್ದಿ ಇರಲಿಲ್ಲ. ಕಥೆಯಲ್ಲಿ ಒಂದಿಷ್ಟು ಬದಲಾವಣೆಯಾಗಿದೆ ಎಂದು ಹೇಳಲಾಗಿತ್ತು. ಅಲ್ಲದೆ ಚಿತ್ರಕ್ಕೆ ನಟ ಚಿರು ಸರ್ಜಾ ಕೂಡ ಎಂಟ್ರಿ ಕೊಟ್ಟಿದ್ದರು. ಆದರೀಗ ಚಿರು ಇಲ್ಲ. ಚಿರಂಜೀವಿ ಪಾತ್ರಕ್ಕೆ ಯಾರು ಬರ್ತಿದ್ದಾರೆ ಎನ್ನುವ ಬಗ್ಗೆಯೂ ಮಾಹಿತಿ ನೀಡಿಲ್ಲ. ಹಳೆಯ ಕಥೆಯನ್ನೆ ಮುಂದುವರೆಸುತ್ತಾರಾ ಅಥವಾ ಚಿರು ಜಾಗಕ್ಕೆ ಬೇರೆ ನಟ ಎಂಟ್ರಿ ಕೊಡ್ತಾರಾ ಎನ್ನುವುದು ಗೊತ್ತಾಗಬೇಕಿದೆ.

ಅಭಿಮಾನಿಗಳ ನಿದ್ದೆಗೆಡಿಸಿದ ರಚಿತಾ ಹೊಸ ಅವತಾರ
ರಚಿತಾ ಚಿತ್ರದ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ರಕ್ತ ಸಿಕ್ತವಾಗಿರುವ ಮುಖ, ಕೂದಲನ್ನು ಹರಿಡಿಕೊಂಡು ಗಂಭೀರವಾಗಿ ಕುಳಿತಿರುವ ರಚಿತಾ ಲುಕ್ ಅಭಿಮಾನಿಗಳ ನಿದ್ದೆ ಗೆಡಿಸಿದೆ. ಪೋಸ್ಟರ್ ಜೊತೆಗೆ 'ಕೆಲವು ಪಾತ್ರಗಳನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದಾರೆ.

ಈಗಾಗಲೆ ಚಿತ್ರೀಕರಣ ಪ್ರಾರಂಭವಾಬೇಕಿತ್ತು
ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಚಿತ್ರೀಕರಣ ಈಗಾಗಲೆ ಪ್ರಾರಂಭವಾಗಬೇಕಿತ್ತು. ಆದರೆ ಆಗಲೆ ಲಾಕ್ ಡೌನ್ ಚಿತ್ರತಂಡದ ಲೆಕ್ಕಾಚಾರವನ್ನೆ ಬದಲಾಯಿಸಿದೆ. ರಚಿತಾ ರಾಮ್ ಹೊಸ ಪೋಸ್ಟರ್ ಶೇರ್ ಮಾಡುವ ಮೂಲಕ ಮತ್ತೆ ಏಪ್ರಿಲ್ ಸದ್ದು ಸುದ್ದಿಯಲ್ಲಿದೆ. ಆದರೆ ಸಿನಿಮಾ ಚಿತ್ರೀಕರಣ ಯಾವಾಗ ಪ್ರಾರಭವಾಗಲಿದೆ, ಚಿರು ಪಾತ್ರಕ್ಕೆ ಯಾರು ಬರಲಿದ್ದಾರೆ ಎನ್ನುವುದು ಇನ್ನೂ ಅಧಿಕೃತವಾಗಿಲ್ಲ.

ರಚಿತಾ ಬಳಿ ಇರುವ ಸಿನಿಮಾಗಳು
ರಚಿತಾ ರಾಮ್ ಬಳಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ರಚಿತಾ ಏಕ್ ಲವ್ ಯಾ, 100, ಡಾಲಿ, ಸೀರೆ, ಸಂಜು ಅಲಿಯಾಸ್ ಸಂಜಯ್, ಲಿಲ್ಲಿ ಸೇರಿದ್ದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತೆಲುಗಿನ ಸೂಪರ್ ಮಚ್ಚಿ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











