For Quick Alerts
  ALLOW NOTIFICATIONS  
  For Daily Alerts

  ಈ ಫೋಟೋದಲ್ಲಿರುವ ಕನ್ನಡದ ಸ್ಟಾರ್ ನಟ ಯಾರೆಂದು ಗುರುತಿಸಬಲ್ಲಿರಾ?

  |

  ಮುದ್ದಾಗಿರುವ ಈ ಪುಟ್ಟ ಪೋರನ ಫೋಟೋ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಇದೇ ಬಾಲಕ ಇಂದು ಸ್ಯಾಂಡಲ್ ವುಡ್ ಆಳುತ್ತಿರುವ ಸ್ಟಾರ್ ನಟ ಎನ್ನುವುದೇ ಇದರ ವಿಶೇಷ. ಈ ಫೋಟೋ ಇಂದು (ಫೆಬ್ರವರಿ 16) ವೈರಲ್ ಆಗಿದೆ ಅಂದಮೇಲೆ ಯಾರು ಅಂತ ಈಗಾಗಲೇ ಗೊತ್ತಾಗಿರುತ್ತೆ. ಮತ್ಯಾರು ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್.

  ಹೌದು, ಚಾಲೆಂಜಿಂಗ್ ಸ್ಟಾರ್ ಅವರ ಬಾಲ್ಯದ ಫೋಟೋ ಇದಾಗಿದೆ. ಅಭಿಮಾನಿಗಳ ಗಮನ ಸೆಳೆಯುತ್ತಿರುವ ಈ ಫೋಟೋವನ್ನು ಶೇರ್ ಮಾಡಿದ್ದು, ಸ್ಯಾಂಡಲ್ ವುಡ್ ನ ಖ್ಯಾತ ನಟಿ ಮತ್ತು ದರ್ಶನ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಾಯಕಿ ರಚಿತಾ ರಾಮ್. ಡಿ ಬಾಸ್ ಅಪರೂಪದ ಫೋಟೋ ಶೇರ್ ಮಾಡಿ ರಚಿತಾ ವಿಶ್ ಮಾಡಿದ್ದು ಹೀಗೆ..

  ದರ್ಶನ್ ಹುಟ್ಟುಹಬ್ಬಕ್ಕೆ ಗಣ್ಯರಿಂದ ಹಾರೈಕೆ: ಯಾರು ಏನು ಹೇಳಿದರು?ದರ್ಶನ್ ಹುಟ್ಟುಹಬ್ಬಕ್ಕೆ ಗಣ್ಯರಿಂದ ಹಾರೈಕೆ: ಯಾರು ಏನು ಹೇಳಿದರು?

  ಡಿಂಪಲ್ ಕ್ವೀನ್ ವಿಶೇಷ ವಿಶ್

  ಡಿಂಪಲ್ ಕ್ವೀನ್ ವಿಶೇಷ ವಿಶ್

  ಡಿಂಪಲ್ ಕ್ವೀನ್ ರಚಿತಾ ರಾಮ್ ದರ್ಶನ್ ಅವರ ತೀರಾ ಅಪರೂಪದ ಬಾಲ್ಯದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಡಿ ಬಾಸ್ ಅವರಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. 'ಸ್ನೇಹ ಜೀವಿ, ಸರಳತೆಯ ಸಂಕೇತ, ಅಭಿಮಾನಿಗಳ ಅಭಿಮಾನಿ ಡಿ ಬಾಸ್ ಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದಾರೆ.

  ರಚಿತಾ ಮೊದಲ ಸಿನಿಮಾದ ಹೀರೋ ದರ್ಶನ್

  ರಚಿತಾ ಮೊದಲ ಸಿನಿಮಾದ ಹೀರೋ ದರ್ಶನ್

  ದರ್ಶನ್ ಅವರ ಈ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಟಿ ರಚಿತಾ ರಾಮ್ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ರಚಿತಾ ಮೊದಲ ಸಿನಿಮಾದಲ್ಲೇ ಸ್ಟಾರ್ ನಟನಿಗೆ ನಾಯಕಿಯಾಗಿ ಮಿಂಚುವ ಮೂಲಕ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದರು.

  ಅಭಿಮಾನಿಗಳ 'ದಾಸ' ದರ್ಶನ್‌ಗೆ ಹುಟ್ಟುಹಬ್ಬದ ಸಂಭ್ರಮಅಭಿಮಾನಿಗಳ 'ದಾಸ' ದರ್ಶನ್‌ಗೆ ಹುಟ್ಟುಹಬ್ಬದ ಸಂಭ್ರಮ

  ದರ್ಶನ್ ಜೊತೆ 3 ಸಿನಿಮಾಗಳಲ್ಲಿ ರಚಿತಾ ನಟನೆ

  ದರ್ಶನ್ ಜೊತೆ 3 ಸಿನಿಮಾಗಳಲ್ಲಿ ರಚಿತಾ ನಟನೆ

  ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡಿರುವ ರಚಿತಾ, ಬಳಿಕ ಮತ್ತೆ ಅಂಬರೀಶ ಸಿನಿಮಾ ಮೂಲಕ ಎರಡನೇ ಬಾರಿ ಡಿ ಬಾಸ್ ಜೊತೆ ನಟಿಸುವ ಅವಕಾಶ ಪಡೆದುಕೊಳ್ಳುತ್ತಾರೆ. ನಂತರ ದರ್ಶನ್ ನಟನೆಯ ಜಗ್ಗುದಾದಾ ಸಿನಿಮಾದಲ್ಲೂ ರಚಿತಾ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ದರ್ಶನ್ ನಟನೆಯ ಮೂರು ಸಿನಿಮಾಗಳಲ್ಲಿ ರಚಿತಾ ಮಿಂಚಿದ್ದಾರೆ.

  ದಾಸನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ ಸ್ಟಾರ್ ಗಳು | Filmibeat Kannada
  44ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ದರ್ಶನ್

  44ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು 44ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದರ್ಶನ್ ಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇನ್ನು ಹುಟ್ಟುಹಬ್ಬದ ವಿಶೇಷವಾಗಿ ರಾಬರ್ಟ್ ಸಿನಿಮಾದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

  English summary
  Rachita Ram shares rare pic of Challenging star Darshan And birthday wishes to him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X