For Quick Alerts
  ALLOW NOTIFICATIONS  
  For Daily Alerts

  ಮಾರುವೇಷದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಸುತ್ತಾಡಿದ ಕನ್ನಡದ ಖ್ಯಾತ ನಟಿ

  |

  ಮಾರುವೇಷದಲ್ಲಿ ಕನ್ನಡದ ಖ್ಯಾತ ನಟಿಯೊಬ್ಬರು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಶಾಪಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಅಂದ್ಹಾಗೆ, ಈ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್. ಪ್ರಜ್ವಲ್ ದೇವರಾಜ್ ನಟನೆಯ ವೀರಂ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ಶಾಪಿಂಗ್ ಮಾಡಿದ್ದಾರೆ.

  ಡಿಸೆಂಬರ್ 6 ರಿಂದ 'ವೀರಂ' ಚಿತ್ರೀಕರಣ ಆರಂಭಿಸಲಿದ್ದಾರೆ ಪ್ರಜ್ವಲ್ ದೇವರಾಜ್ಡಿಸೆಂಬರ್ 6 ರಿಂದ 'ವೀರಂ' ಚಿತ್ರೀಕರಣ ಆರಂಭಿಸಲಿದ್ದಾರೆ ಪ್ರಜ್ವಲ್ ದೇವರಾಜ್

  ಈ ವೇಳೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಾರ್ವಜನಿಕರ ಮಧ್ಯೆ ಶಾಪಿಂಗ್ ಮಾಡಿದ್ದಾರೆ. ಇದು ರಚಿತಾ ರಾಮ್ ಎಂದು ಯಾರು ಸಹ ಗುರುತಿಸಿಲ್ಲ ಎಂದು ಸ್ವತಃ ನಟಿಯೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

  ''ಇದೊಂದು ರೀತಿ ಹೊಸ ಅನುಭವ. ನನ್ನನ್ನು ಯಾರು ಗುರುತಿಸುತ್ತಿಲ್ಲ. ಸಿನಿಮಾಗಾಗಿ ಶಾಪಿಂಗ್ ಬಂದಿದ್ದೇವೆ. ಇಡೀ ಚಿತ್ರತಂಡ ಇಲ್ಲಿದೆ'' ಎಂದು ಮಾರುವೇಷದ ಶಾಪಿಂಗ್ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.

  ಅಂದ್ಹಾಗೆ, ವೀರಂ ಚಿತ್ರಕ್ಕೆ ಖಾದರ್ ಕುಮಾರ್ ನಿರ್ದೇಶನ ಮಾಡ್ತಿದ್ದು, ಡಿಸೆಂಬರ್ 6 ರಿಂದ ಚಿತ್ರೀಕರಣ ಆರಂಭವಾಗಿದೆ. ರಚಿತಾ ರಾಮ್, ಹಿರಿಯ ನಟಿ ಶ್ರುತಿ, ಶ್ರೀನಗರ ಕಿಟ್ಟಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ತೆಲುಗಿನ ನಂತರ ತಮಿಳು ಸಿನಿಮಾರಂಗಕ್ಕೆ ಕಾಲಿಡಲಿದ್ದಾರೆ ರಚಿತಾ ರಾಮ್ತೆಲುಗಿನ ನಂತರ ತಮಿಳು ಸಿನಿಮಾರಂಗಕ್ಕೆ ಕಾಲಿಡಲಿದ್ದಾರೆ ರಚಿತಾ ರಾಮ್

  Recommended Video

  ಇದ್ದಕ್ಕಿದ್ದಂತೆ ಹೈದ್ರಾಬಾದ್ ಆಸ್ಪತ್ರೆಗೆ ದಾಖಲಾದ ಸೂಪರ್ ಸ್ಟಾರ್ | Filmibeat Kannada

  ಈ ಹಿಂದೆ ಹರಿಪ್ರಿಯಾ ಮತ್ತು ಸುಮಲತಾ ನಟಿಸಿದ್ದ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರ ನಿರ್ಮಿಸಿದ್ದ ದಿಶಾ ಎಂಟರ್ ಟೈನ್ ಮೆಂಟ್ ಸಂಸ್ಥೆ ವೀರಂ ಚಿತ್ರಕ್ಕೆ ಬಂಡವಾಳ ಹಾಕಿದೆ.

  English summary
  Dimple queen Rachita Ram shopping at commercial street for her upcoming film Veeram along with director Khadar Kumar and team.
  Friday, December 25, 2020, 9:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X