ಸಿಗರೇಟು ಸೇದುತ್ತಿರುವ ರಚಿತಾ ರಾಮ್ ಫೋಟೋ ವೈರಲ್

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಮತ್ತೆ ಸುದ್ದಿಲ್ಲಿದ್ದಾರೆ. ಇತ್ತೀಚಿಗಷ್ಟೆ ಮದುವೆ ವಿಚಾರವಾಗಿ ಸದ್ದು ಮಾಡಿದ್ದ ರಚಿತಾ ಈಗ ಸಿಗರೇಟು ಸೇದುವ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಡಿಂಪಲ್ ಕ್ವೀನ್ ಸಿಗರೇಟು ಸೇದುತ್ತಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು, ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಚಿತಾ ಸಿಗರೇಟು ಸೇದುತ್ತಾರಾ ಎಂದು ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ತರಹೇವಾರಿ ಪೋಸ್ ನಲ್ಲಿ ರಚಿತಾ ಸಿಗರೇಟು ಸೇದುತ್ತಿದ್ದಾರೆ. ಅಂದ್ಹಾಗೆ ರಚಿತಾ ಸಿಗರೇಟು ಹಿಡಿದಿರುವುದು ಸಿನಿಮಾಗಾಗಿ. ಅಷ್ಟಕ್ಕು ರಚಿತಾ ಕೈಗೆ ಸಿಗರೇಟು ಕೊಟ್ಟವರ್ಯಾರು?ಮುಂದೆ ಓದಿ..

 ರಚಿತಾ ಕೈಗೆ ಸಿಗರೇಟು ಕೊಟ್ಟ ಪ್ರೇಮ್

ರಚಿತಾ ಕೈಗೆ ಸಿಗರೇಟು ಕೊಟ್ಟ ಪ್ರೇಮ್

ರಚಿತಾ ಕೈಗೆ ಸಿಗರೇಟು ಕೊಟ್ಟಿದ್ದು ಮತ್ಯಾರು ಅಲ್ಲ ನಿರ್ದೇಶಕ ಪ್ರೇಮ. ಏಕ್ ಲವ್ ಯಾ ಸಿನಿಮಾಗಾಗಿ ರಚಿತಾ ಸಿಗರೇಟು ಸೇದಿದ್ದಾರೆ. ಈ ಚಿತ್ರದಲ್ಲಿ ರಚಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದ್ರೆ ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್ ರಕ್ಷಿತಾ ಕೂಡ ಒಂದು ಹಾಡಿನಲ್ಲಿ ಹೆಜ್ಜೆಹಾಕಿದ್ದಾರೆ.

 ವರ್ಷಗಳ ಬಳಿಕ ರಕ್ಷಿತಾ ಅಭಿನಯ

ವರ್ಷಗಳ ಬಳಿಕ ರಕ್ಷಿತಾ ಅಭಿನಯ

ಅನೇಕ ವರ್ಷಗಳ ಬಳಿಕ ರಕ್ಷಿತಾ ಬಣ್ಣಹಚ್ಚಿದ್ದಾರೆ. ರಚಿತಾ ಮತ್ತು ರಕ್ಷಿತಾ ಇಬ್ಬರು ಒಂದೆ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಇಬ್ಬರ ನಟಿಯರ ಅಭಿಮಾನಿಗಳಿಗೆ ಫುಲ್ ಖುಷ್. ಅಂದ್ಹಾಗೆ ರಕ್ಷಿತಾ ಒಂದು ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ರಚಿತಾ ರಾಮ್ ಪಾತ್ರ ಹೇಗಿರಲಿದೆ ಎನ್ನುವುದು ಇನ್ನು ರಿವೀಲ್ ಆಗಿಲ್ಲ.

 ಬೋಲ್ಡ್ ಪಾತ್ರದಲ್ಲಿ ರಚಿತಾ

ಬೋಲ್ಡ್ ಪಾತ್ರದಲ್ಲಿ ರಚಿತಾ

ಫೋಟೋಗಳನ್ನು ನೋಡುತ್ತಿದ್ದರೆ ರಚಿತಾ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ ಎನಿಸುತ್ತೆ. ಡ್ರಿಂಕ್ಸ್, ಸ್ಮೋಕ್ ಮಾಡುವ ಯುವತಿಯ ಪಾತ್ರದಲ್ಲಿ ರಚಿತಾ ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷ ಅಂದರೆ ಚಿತ್ರದಲ್ಲಿ ರಚಿತಾ ಲಿಪ್ ಲಾಕ್ ದೃಶ್ಯದಲ್ಲಿಯೂ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 ರಾಣಾ ಅಭಿನಯದ ಮೊದಲ ಸಿನಿಮಾ

ರಾಣಾ ಅಭಿನಯದ ಮೊದಲ ಸಿನಿಮಾ

ಏಕ್ ಲವ್ ಯಾ ರಕ್ಷಿತಾ ಸಹೋದರ ರಾಣಾ ನಯಕನಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ. ಮೊದಲ ಬಾರಿಗೆ ರಾಣಾ ಸಿನಿ ಪ್ರಿಯರ ಮುಂದೆ ಬರುತ್ತಿದ್ದಾರೆ. ಚಿತ್ರಕ್ಕೆ ರಕ್ಷಿತಾ ಬಂಡವಾಳ ಹೂಡಿದ್ದಾರೆ, ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೆ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾದ ಮೊದಲ ಟೀಸರ್ ನಾಳೆ ಪ್ರೇಮಿಗಳ ದಿನಾಚರಣೆ ದಿನ ತೆರೆಗೆ ಬರುತ್ತಿದೆ.

More from Filmibeat

English summary
Kannada actress Rachita Ram smoking photos viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X