ಜೆಡಿಎಸ್ ಪರವಾಗಿ ಮತಯಾಚನೆಗೆ ನಿಂತ್ರು ಡಿಂಪಲ್ ಕ್ವೀನ್
Recommended Video

ಚುನಾವಣೆ ಸಮೀಪಿಸುತ್ತಿದ್ದಂತೆ ಸಿನಿಮಾ ಸ್ಟಾರ್ ಗಳು ತಮಗಿಷ್ಟವಾದ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ಕಾರ್ಯವನ್ನ ಆರಂಭ ಮಾಡಿದ್ದಾರೆ. ಕೆಲ ಸ್ಟಾರ್ ಗಳು ಅಭ್ಯರ್ಥಿಗಳ ಜೊತೆ ಸೇರಿ ಮತಯಾಚನೆ ಮಾಡಿದರೆ, ಇನ್ನೂ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ನಿಮ್ಮ ಮತ ಚಲಾಯಿಸಿ ಎಂದಿದ್ದಾರೆ.
ಸದ್ಯ ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ ಜೆಡಿಎಸ್ ಪಕ್ಷದ ಪರವಾಗಿ ಮತಯಾಚನೆ ಮಾಡಿದ್ದಾರೆ. ವಿಡಿಯೋ ಮಾಡಿ ರೈತ ನಾಯಕ ಕುಮಾರಸ್ವಾಮಿ ಅವರಿಗೆ ನಿಮ್ಮ ಮತ ನೀಡಿ ಎಂದಿದ್ದಾರೆ ರಚಿತಾ ರಾಮ್.

ಅದರ ಜೊತೆಯಲ್ಲಿ ಸಿಕ್ಕ ಹತ್ತು ತಿಂಗಳಲ್ಲಿ ರೈತರ ಪರ ಕಾಳಜಿ ವಹಿಸಿರುವ ರಾಜಕೀಯ ವ್ಯಕ್ತಿ ಎಂದರೆ ಕುಮಾರಣ್ಣ. ಹಾಗಾಗಿ ತಪ್ಪದೆ ಅವರಿಗೆ ನಿಮ್ಮ ಮತ ನೀಡಿ ಗೆಲ್ಲಿಸಿ ಎಂದಿದ್ದಾರೆ. ಈ ಹಿಂದೆ ರಚಿತಾ ರಾಮ್ ಯಾವುದೇ ಪಕ್ಷದ ಪರವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷದ ಪರವಾಗಿ ಮಾತನಾಡಿದ್ದು ಅವರ ಅಭಿಮಾನಿಗಳಲ್ಲಿ ಆಶ್ಚರ್ಯ ತರಿಸಿದೆ. ಒಟ್ಟಾರೆ ಸ್ಟಾರ್ ಗಳೆಲ್ಲರೂ ಸಾಲು ಸಾಲಾಗಿ ರಾಜಕೀಯ ಪಕ್ಷಗಳ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಯದಲ್ಲಿ ರಚಿತಾ ಜೆಡಿಎಸ್ ಪಕ್ಷದ ಪರವಾಗಿ ಮತ ಕೇಳಿರುವುದು ಅಭಿಮಾನಿಗಳಿಗೆ ವಿಶೇಷ ಎನಿಸಿದೆ.


Click it and Unblock the Notifications











