ಶ್ರೀಮುರಳಿ ಜೊತೆ ಬುಲ್ ಬುಲ್ ರಚಿತಾ 'ಭರಾಟೆ' ಡಾನ್ಸ್
Recommended Video

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇತ್ತೀಚಿಗಷ್ಟೆ ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯ ಸೆರೆಡಿದ್ದ ಚಿತ್ರತಂಡ ಈಗ ಟೈಟಲ್ ಸಾಂಗ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.
'ಭರಾಟೆ' ಚಿತ್ರದ ಅದ್ದೂರಿ ಹಾಡಿನ ಚಿತ್ರೀಕರಣ ಬೆಂಗಳೂರಿನ ನೆಲಮಂಗಳ ಬಳಿ ನಡೆಯುತ್ತಿದೆ. ವಿಶೇಷ ಅಂದ್ರೆ ಈ ಹಾಡಿನಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಕಪ್ಪು ಮತ್ತು ಹಳದಿ ಬಣ್ಣದ ಕಾಸ್ಟ್ಯೂಮ್ ನಲ್ಲಿ ಮಿಂಚುತ್ತಿರುವ ರಚಿತಾ, ಶ್ರೀಮುರಳಿ ಜೊತೆ ಹೆಜ್ಜೆ ಹಾಕಿದ್ದಾರೆ. ರಚಿತಾ ಡಾನ್ಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
'ಭರಾಟೆ' ಟೈಟಲ್ ಸಾಂಗ್ ಗಾಗಿ ಅದ್ದೂರಿ ಸೆಟ್ ನಿರ್ಮಾಣ ಮಾಡಲಾಗಿದೆ. ಸುಮಾರು 200 ಕ್ಕೂ ಹೆಚ್ಚು ಜನ ಜೂನಿಯರ್ ಆರ್ಟಿಸ್ಟ್ ಈ ಹಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಈ ಹಾಡಿಗೆ ಮೋಹನ್ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಅಂದ್ಹಾಗೆ 'ಭರಾಟೆ' ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿದೆ.

ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಈ ಚಿತ್ರದಲ್ಲಿ 10 ಜನ ಖಡಕ್ ಖಳನಟರು ಅಭಿನಯಿಸಿದ್ದಾರೆ. ನಟ ರವಿಶಂಕರ್ ಸಹೋದರು ಕೂಡ ಈ ಸಿನಿಮಾ ಮೂಲಕ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ವಿಷೇಶತೆಗಳಿಂದ ಸದ್ದು ಮಾಡುತ್ತಿರುವ ಭರಾಟೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.


Click it and Unblock the Notifications











