ಬೋಲ್ಡ್‌ ಸೀನ್ ಮತ್ತು ಸಿಗರೇಟ್ ಸೀಕ್ರೆಟ್ ಬಿಚ್ಚಿಟ್ಟ ರಚಿತಾ ರಾಮ್!

ನಟಿ ರಚಿತಾ ರಾಮ್‌ ಸದ್ಯ ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್‌ ನಟಿ. ಸಾಲು ಸಾಲು ಸಿನಿಮಾಗಳು ರಚಿತಾ ರಾಮ್‌ ಕೈಯಲ್ಲಿ ಇವೆ. ಹಾಗಾಗಿ ವಾರದಲ್ಲಿ ಎರಡು ಮೂರು ಬಾರಿ ಅದರು ರಚಿತಾ ಅವರ ಒಂದಲ್ಲಾ ಒಂದು ಚಿತ್ರದ ಬಗ್ಗೆ ಸುದ್ದಿಗಳು ಹರಿದಾಡುತ್ತಿರುತ್ತವೆ.

ಸದ್ಯ 'ಏಕ್‌ ಲವ್‌ ಯಾ' ಮತ್ತು 'ಲವ್‌ ಯು ರಚ್ಚು' ಚಿತ್ರದ ಮೂಲಕ ನಟಿ ರಚಿತಾ ರಾಮ್‌ ಸುದ್ದಿಯಲ್ಲಿದ್ದಾರೆ. 'ಏಕ್‌ ಲವ್‌ ಯಾ' ಚಿತ್ರದ ಹೊಸ ಹಾಡೊಂದು ರಿಲೀಸ್ ಆಗಿದೆ. ಈ ಕುರಿತು ಚಿತ್ರ ತಂಡ ಸುದ್ದಿಗೋಷ್ಠಿ ನಡೆಸಿದೆ. ಈ ಸುದ್ದಿಗೋಷ್ಠಿಯಲ್ಲಿ ನಟಿ ರಚಿತಾ ರಾಮ್‌ ಒಂದಷ್ಟು ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಟ್ಟಿದ್ದಾರೆ.

ರಚಿತಾ ರಾಮ್ ಅವರನ್ನು ಒಂದಷ್ಟು ಪ್ರಶ್ನೆಗಳು ಸದಾ ಬೆನ್ನು ಬಿದ್ದಿರುತ್ತವೆ. ಅವರ ಮದುವೆ ಬಗ್ಗೆ, ಅವರ ಲುಕ್ ಮತ್ತು ಹಾಟ್‌ ದೃಶ್ಯಗಳ ಬಗ್ಗೆ ಸದಾ ಪ್ರಶ್ನೆ ಎದುರಾಗುತ್ತದೆ. 'ಏಕ್‌ ಲವ್‌ ಯಾ' ಮತ್ತು 'ಲವ್‌ ಯು ರಚ್ಚು' ಚಿತ್ರಗಳ ವಿಚಾರದಲ್ಲಿ ರಚ್ಚು ಹಾಟ್‌ ಲುಕ್ ಮತ್ತು ಬೋಲ್ಡ್‌ ಸೀನ್‌ಗಳ ವಿಚಾರವಾಗಿ ಹೆಚ್ಚು ಚರ್ಚೆಗೀಡಾಗಿದ್ದಾರೆ.

ಮತ್ತೆ ರಚಿತಾಳನ್ನು ಸುತ್ತಿಕೊಂಡ 'ಬೋಲ್ಡ್ ನಟನೆ'ಯ ಬಗ್ಗೆ ಪ್ರಶ್ನೆ!

ಮತ್ತೆ ರಚಿತಾಳನ್ನು ಸುತ್ತಿಕೊಂಡ 'ಬೋಲ್ಡ್ ನಟನೆ'ಯ ಬಗ್ಗೆ ಪ್ರಶ್ನೆ!

ರಚಿತಾ ರಾಮ್ ಮತ್ತು ಉಪೇಂದ್ರ ಅವರ 'ಐ ಲವ್‌ ಯು' ಚಿತ್ರದ ಮೂಲಕ ಈ ಬೋಲ್ಡ್‌ ದೃಶ್ಯಗಳ ಹಾವಳಿ ಶುರುವಾಗಿದೆ. ಈ ಚಿತ್ರದಲ್ಲಿ ರಚಿತಾ ಕೊಂಚ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದರು. ಆದರೆ ಅದು ರಚಿತಾ ತಮ್ಮ ಪಾತ್ರಕ್ಕಾಗಿ ಹಾಗೆ ಕಾಣಿಸಿಕೊಳ್ಳಬೇಕಾಗಿತ್ತು. ಬಳಿಕ ರಚಿತಾ ರಾಮ್‌ 'ಲವ್ ಯು ರಚ್ಚು', 'ಏಕ್ ಲವ್‌ ಯು' ಚಿತ್ರಗಳಲ್ಲಿ ಪಾತ್ರಕ್ಕೆ ತಕ್ಕಹಾಗೆ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಚಿತ್ರಗಳಲ್ಲಿ ರಚಿತಾ ಹಾಟ್‌ ಆಗಿ ಕಾಣಿಸಿಕೊಂಡಿದ್ದರ ಬಗ್ಗೆಯೂ ಪ್ರಶ್ನೆ ಮಾಡಲಾಗಿದೆ. ರಚಿತಾ ಅವರಿಗೆ ಈ ರೀತಿಯ ದೃಶ್ಯಗಳಲ್ಲಿ ನಟಿಸಲು ಮುಜುಗರ ಆಗಿತ್ತ ಎನ್ನುವ ಪ್ರಶ್ನೆ ಎದುರಾಗಿದೆ.

ಪಾತ್ರಕ್ಕೆ ಜೀವತುಂಬಲು ಮುಜುಗರ ಯಾಕೆ: ನಟಿ ರಚಿತಾ ರಾಮ್?

ಪಾತ್ರಕ್ಕೆ ಜೀವತುಂಬಲು ಮುಜುಗರ ಯಾಕೆ: ನಟಿ ರಚಿತಾ ರಾಮ್?

'ಏಕ್ ಲವ್‌ ಯಾ' ಚಿತ್ರದ ಟೀಸರ್‌ನಲ್ಲಿ ನಟಿ ರಚಿತಾ ರಾಮ್‌ ಕೊಂಚ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ನಟಿ ರಚಿತಾ ಅವರಿಗೆ ಪ್ರಶ್ನೆ ಎದುರಾಗಿದೆ. ಆದರೆ ಇದಕ್ಕೆ ರಚಿತಾ ಸರಿಯಾದ ಉತ್ತರವನ್ನೇ ನೀಡದರು. "ನಾನು ಆ ರೀತಿ ಮಾಡಿದ್ದೇನೆ ಅಂದರೆ ಅದಕ್ಕೊಂದು ಅರ್ಥ ಇರುತ್ತದೆ. ಸುಮ್ಮಸುಮ್ಮನೆ ಮಾಡಿಲ್ಲ. ಬೋಲ್ಡ್ ದೃಶ್ಯಗಳನ್ನು ಮಾಡಿದ್ದೇನೆ ಎಂದರೆ ಅದಕ್ಕೆ ಒಂದು ಅರ್ಥ ಇದೆ. ಸಿನಿಮಾ ಬಂದಾಗ ಗೊತ್ತಾಗುತ್ತೆ ನಾನು ಯಾಕೆ ಆ ರೀತಿ ಮಾಡಿದ್ದೇನೆ ಅಂತ. ನಾನು ಚೆನ್ನಾಗಿ ಮಾಡಿದ್ದೇನೆ ಅಂತ ಅಂದು ಕೊಂಡಿದ್ದೇನೆ".

ಸಿಗರೇಟ್ ದೃಶ್ಯ ನೋಡಿ ನಾನೇ ಆಶ್ಚರ್ಯಗೊಂಡೆ: ರಚಿತಾ ರಾಮ್!

ಸಿಗರೇಟ್ ದೃಶ್ಯ ನೋಡಿ ನಾನೇ ಆಶ್ಚರ್ಯಗೊಂಡೆ: ರಚಿತಾ ರಾಮ್!

ಇನ್ನು ಸಿಗರೇಟು ಸೇದಿರುವ ಬಗ್ಗೆ ಮಾತನಾಡಿದ ನಟಿ ರಚಿತಾ ರಾಮ್ " ಸಿಗರೇಟು ಸೇದುವುದು ಆರ್ಟಿಫಿಶಿಯಲ್ ಆಗಿ ಕಾಣಿಸಿದರೆ ಚೆನ್ನಾಗಿ ಇರುವುದಲ್ಲ. ನ್ಯಾಚುರಲ್ ಆಗಿ ಬಂದರೆ ಆ ಪಾತ್ರಕ್ಕೆ ಒಂದು ಕಳೆ. ದೃಶ್ಯಗಳಲ್ಲಿ ನೋಡಿದಾಗ ನಾನು ಇಷ್ಟು ಚೆನ್ನಾಗಿ ಸಿಗರೇಟು ಸೇದಿದ್ದೀನಾ ಅಂತ ಅನಿಸುತ್ತೆ". ಎಂದು ಹೇಳಿರುವ ರಚಿತಾ ರಾಮ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿರುವುದಾಗಿಯೂ, ಪಾತ್ರಕ್ಕೆ ಬೇಕಾದ ಹಾಗೆ ನಟಿಸಿರುವುದಾಗಿಯೂ ಹೇಳಿ ಕೊಂಡಿದ್ದಾರೆ.

ರಚಿತಾ ಪಾತ್ರದ ಬಗ್ಗೆ ನಿರ್ದೇಶಕ ಪ್ರೇಮ್ ಮಾತು!

ರಚಿತಾ ಪಾತ್ರದ ಬಗ್ಗೆ ನಿರ್ದೇಶಕ ಪ್ರೇಮ್ ಮಾತು!

ಇನ್ನೂ ಈ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರೇಮ್‌ ಸಿನಿಮಾದಲ್ಲಿ ಈ ಮೂಲಕ ಒಳ್ಳೆಯದನ್ನು ಏನೋ ಹೇಳ ಹೊರಟಿದ್ದಾರೆ ಎನ್ನುವುದನ್ನು ರಿವೀಲ್‌ ಮಾಡಿದ್ದಾರೆ. "ನಾವು ಒಳ್ಳೆಯ ಉದ್ದೇಶ ಹೇಳಲು ಹೋದರೆ ಜನ ಅದನ್ನು ತೆಗೆದುಕೊಳ್ಳುವುದಿಲ್ಲ. ಇದರ ಉದ್ದೇಶ ಚೆನ್ನಾಗಿದೆ. ಇದನ್ನ ಕಾಮಿಡಿ ಆಗಿ ಹೇಳುತ್ತಿಲ್ಲ. ಸೀಗರೇಟು ಎಣ್ಣೆ ಯಾಕೆ ಅಂದರೆ, ಪ್ರಪಂಚದಲ್ಲಿ ಕೆಲವರು ಸೇಡು ಇರುವ, ಫ್ರಸ್ಟ್‌ರೇಷನ್ ಇರುವರು ಇದ್ದಾರೆ. ಅಂಥ ಪಾತ್ರ ರಚಿತಾ ಮಾಡಿದ್ದಾರೆ. ಅವರಿಗೆ ತುಂಬಾ ಧನ್ಯವಾದಗಳು. ಮೊದಲು ಬಾಟಲಿ ಹಿಡಿಯುತ್ತೇನೋ ಮಗನೇ ಅಂದಾಗ ರಚಿತಾ ಬೇಡ ಅಂತಿದ್ದರು, ಆಮೇಲೆ ಚೆನ್ನಾಗಿ ಮಾಡಿದ್ದಾರೆ". ಎಂದು ನಿರ್ದೇಶಕ ಪ್ರೇಮ್‌ ರಚಿತಾ ರಾಮ್‌ ಪಾತ್ರದ ಬಗ್ಗೆ ಒಂದಷ್ಟು ಕ್ಲ್ಯಾರಿಟಿ ಕೊಟ್ಟಿದ್ದಾರೆ.

More from Filmibeat

English summary
Rachita Ram Talk About Hot Scene And Smoking Secret, In Ek Love Ya Press Meet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X