For Quick Alerts
  ALLOW NOTIFICATIONS  
  For Daily Alerts

  ಯೋಗರಾಜ್ ಭಟ್ಟರ 'ಸೀರೆ' ತೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್

  |

  ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಆಯುಷ್ಮಾನ್ ಭವ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲೆ ಡಿಂಪಲ್ ಕ್ವೀನ್ ಮತ್ತೆ ಸೀರೆ ಧರಿಸಿ ಯುವಕರ ಟೆಂಪ್ರೆಚರ್ ಹೆಚ್ಚಿಸಲು ಸಜ್ಜಾಗುತ್ತಿದ್ದಾರೆ. ಅಂದಹಾಗೆ ರಚಿತಾ ರಾಮ್ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿಯ ಖ್ಯಾತಿಯ ನಟ ರಿಷಿ ಅಭಿನಯದ 'ಸೀರೆ' ಚಿತ್ರಕ್ಕೆ ನಟಿ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

  ರಿಷಿ ಸದ್ಯ ಮದುವೆ ಸಂಭ್ರಮದಲ್ಲಿದ್ದಾರೆ. ಇದೆ ತಿಂಗಳು 10 ರಂದು ರಿಷಿ ಗೆಳತಿ ಸ್ವಾತಿ ಜೊತೆ ಚೆನ್ನೈನಲ್ಲಿ ಹಸೆಮಣೆ ಏರುತ್ತಿದ್ದಾರೆ. ಇದರ ಜೊತೆಗೆ ಸೀರೆ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ವಿಶೇಷ ಅಂದರೆ ಚಿತ್ರ ಇಬ್ಬರು ಖ್ಯಾತ ನಿರ್ದೇಶಕರ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಹೌದು, ಯೋಗರಾಜ್ ಭಟ್ ಮತ್ತು ಶಶಾಂಕ್ ಇಬ್ಬರು ನಿರ್ಮಾಣ ಮಾಡುತ್ತಿದ್ದಾರೆ.

  'ಸೀರೆ' ಹಿಂದೆ ಹೊರಟ ಯೋಗರಾಜ್ ಭಟ್, ಶಶಾಂಕ್'ಸೀರೆ' ಹಿಂದೆ ಹೊರಟ ಯೋಗರಾಜ್ ಭಟ್, ಶಶಾಂಕ್

  ಸೀರೆಲಿ ಹುಡುಗೀರ ನೋಡಲೇಬಾರದು.. ನಿಲಲ್ಲ ಟೆಂಪ್ರೆಚರು. ಎಂದು ಬರೆದಿದ್ದ ಭಟ್ಟರು ಈಗ ಅದೆ ಸೀರೆ ಹುಡುಗಿಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಸೀರೆ ಮೋಹನ್ ಸಿಂಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೀರೆ ಚಿತ್ರದ ಮೂಲಕ ಮೊದಲ ಬಾರಿಗೆ ಮೋಹನ್ ಸಿಂಗ್ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ.

  ಚಿತ್ರದಲ್ಲಿ ರಚಿತಾ ರಾಮ್ ಇಂಗ್ಲೆಂಡ್ ನ ಎನ್ ಆರ್ ಐ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಷಿ ಪಕ್ಕ ಲೋಕಲ್ ಬಾಯ್ ಪಾತ್ರದಲ್ಲಿ ಮಿಂಚಲಿದ್ದಾರೆ. ವಿಶೇಷ ಅಂದರೆ ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಮೊದಲ ಬಾರಿಗೆ ರಿಷಿ ಮತ್ತು ರಚಿತಾ ರಾಮ್ ಇಬ್ಬರು ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಪೇರ್ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

  English summary
  Kannada actress Rachita Ram team up with Yogaraj Bhat and Shashank's sari film. Actor Rishi Playing lead role in this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X