»   » ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕಾಗಿ ಹೋಗಿದ್ಯಾ.?

ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕಾಗಿ ಹೋಗಿದ್ಯಾ.?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ.... ಇವರೆಲ್ಲರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅಲ್ಪಾವಧಿಯಲ್ಲಿ ನಟಿ ರಚಿತಾ ರಾಮ್ ಗೆ ಬಿಟ್ಟರೆ ಇನ್ಯಾರಿಗೂ ಲಭಿಸಿಲ್ಲ. ಈ ಮಟ್ಟಕ್ಕೆ ಈ ವಿಷಯದಲ್ಲಿ ಡಿಂಪಲ್ ಕ್ವೀನ್ ಸಿಕ್ಕಾಪಟ್ಟೆ ಲಕ್ಕಿ.

ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕಂತೆ.?

ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬೆರಳೆಣಿಕೆಯಷ್ಟು ವರ್ಷಗಳಲ್ಲಿಯೇ ಬಹು ಬೇಡಿಕೆ ಕಂಡುಕೊಂಡಿದ್ದರೂ, ಅದ್ಯಾಕೋ... ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕು ಅಂತ ಅನಿಸಿರುವ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ ಏನಪ್ಪಾ ಅಂದ್ರೆ....

ಮದುವೆ ಆದ್ಮೇಲೆ ಚಿತ್ರರಂಗಕ್ಕೆ ಗುಡ್ ಬೈ

''ನಟಿ ರಚಿತಾ ರಾಮ್ ಗೆ ಮದುವೆ ಅಂತೆ'' ಎಂಬ ಅಂತೆ-ಕಂತೆ ಎಲ್ಲೆಲ್ಲೂ ಕೇಳಿಬರುತ್ತಿದ್ದರೂ, ''ಮದುವೆಯ ಪ್ಲಾನ್ ಮಾಡಿಲ್ಲ'' ಅಂತ ಸ್ವತಃ ರಚಿತಾ ರಾಮ್ ಸ್ಪಷ್ಟ ಪಡಿಸಿದ್ದಾರೆ. ಇದರ ಜೊತೆಗೆ ''ಮದುವೆಯ ನಂತರ ಸಿನಿಮಾ ಮಾಡುವ ಆಸಕ್ತಿ ಇಲ್ಲ'' ಎಂಬ ಮಾತು ಕೂಡ ರಚಿತಾ ರಾಮ್ ಬಾಯಿಂದಲೇ ಬಂದಿದೆ.

'ಗೌಪ್ಯತೆ' ಕಾಪಾಡುತ್ತಿರುವ ರಚಿತಾ ರಾಮ್ ಹಿಂದಿದ್ಯಾ ಕೆಟ್ಟ ಅನುಭವ.?

ನಟಿ ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ಏನು.?

''ಮದುವೆ ಆದ್ಮೇಲೆ ಸಿನಿಮಾ ಮಾಡುವುದಿಲ್ಲ. ಸಿನಿಮಾದಲ್ಲಿ ಮುಂದುವರಿಯುವಂತೆ ಹುಡುಗ ಹೇಳಿದರೂ, ನಾನು ಮಾಡಲ್ಲ. ಫ್ಯಾಮಿಲಿ ಜೊತೆ ಖುಷಿಯಾಗಿರಬೇಕು ಎಂಬುದೇ ನನ್ನ ಆಸೆ'' ಅಂತ ಹೇಳಿದ್ದಾರೆ ನಟಿ ರಚಿತಾ ರಾಮ್.

ಅಲ್ಲಿಗೆ 'ಗುಡ್ ಬೈ' ಹೇಳುವುದು ಖಚಿತ

ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ನೋಡಿದ್ರೆ, ಮದುವೆ ನಂತರ ಬಣ್ಣದ ಬದುಕಿಗೆ ಗುಡ್ ಬೈ ಹೇಳುವುದು ಖಚಿತ ಅಂದ್ಹಾಗೆ ಲೆಕ್ಕ.

ಚಿತ್ರರಂಗ ಸಾಕಾಗಿ ಹೋಗಿದ್ಯಾ.?

ಮದುವೆ ಬಳಿಕ ಕುಟುಂಬಕ್ಕೆ ಪ್ರಾಮುಖ್ಯತೆ ಕೊಡಬೇಕು ನಿಜ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಎಷ್ಟೋ ನಟಿಯರು ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ, ಕುಟುಂಬದ ಸಪೋರ್ಟ್ ಸಿಕ್ಕರೂ ಸಿನಿಮಾ ಮಾಡಲ್ಲ ಅಂತ ರಚಿತಾ ರಾಮ್ ಹೇಳಿರುವುದನ್ನ ನೋಡಿದರೆ ಚಿತ್ರರಂಗ ಸಾಕು ಅಂತ ಅವರಿಗೆ ಅನಿಸಿದ್ಯಾ ಎಂಬ ಪ್ರಶ್ನೆ ಕಾಡದೇ ಇರಲ್ಲ.

English summary
Dimple Queen Rachita Ram to bid good bye to Film Industry after Marriage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada