'ಪೈಲ್ವಾನ್' ಲುಕ್ ಗೆ ಮನಸೋತ ರಚಿತಾ ರಾಮ್
ನಟ ಸುದೀಪ್ ಸಿನಿಮಾಗಳು ಬರ್ತಿದೆ ಅಂದರೆ ದೊಡ್ಡ ಕ್ರೇಜ್ ಸೃಷ್ಟಿಯಾಗಿ ಬಿಡುತ್ತದೆ. ಅದೇ ರೀತಿ ಈಗ 'ಪೈಲ್ವಾನ್' ಸಿನಿಮಾ ಕೂಡ ಹಂತ ಹಂತವಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಫಸ್ಟ್ ಲುಕ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.
ಚಿತ್ರದ ಪೋಸ್ಟರ್ ನೋಡಿ ಅಭಿಮಾನಿಗಳು ಮಾತ್ರವಲ್ಲ, ನಟಿ ರಚಿತಾ ರಾಮ್ ಕೂಡ ಇಷ್ಟ ಪಟ್ಟಿದ್ದಾರೆ. Wooowww Awesome Look ಎಂದು ಪೋಸ್ಟರ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಚಿತಾ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ಅಂದಹಾಗೆ, ಸ್ಯಾಂಡಲ್ ವುಡ್ ನಿರ್ದೇಶಕರಾದ ಪವನ್ ಒಡೆಯರ್ ಹಾಗೂ ಸಂತೋಷ್ ಆನಂದ್ ರಾಮ್ ಕೂಡ ಚಿತ್ರದ ಪೋಸ್ಟರ್ ಬಗ್ಗೆ ಟ್ವಿಟ್ಟರ್ ನಲ್ಲಿ ಮೆಚ್ಚಿಗೆಯ ಮಾತುಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲದೆ, ಟಾಲಿವುಡ್ ಅಭಿಮಾನಿಗಳು ಸಹ ಪೋಸ್ಟರ್ ನೋಡಿ ಸಿನಿಮಾಗೆ ವಿಶ್ ಮಾಡಿದ್ದಾರೆ.
'ಪೈಲ್ವಾನ್' ಪೋಸ್ಟರ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. 'ಹೆಬ್ಬುಲಿ' ಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ತಮ್ಮದೆ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರತಂಡ 'ಬಾದ್ ಶಾ' ಎಂಬ ಬಿರುದನ್ನು ಸುದೀಪ್ ಅವರಿಗೆ ನೀಡಿದೆ.


Click it and Unblock the Notifications











