ಧ್ರುವ ಸರ್ಜಾ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡ ರಚಿತಾ ರಾಮ್‌!

ನಟಿ ರಚಿತಾ ರಾಮ್‌ ಮತ್ತು ಅಜಯ್‌ ರಾವ್‌ ಅಭಿನಯದ ಲವ್‌ ಯು ರಚ್ಚು ಸಿನಿಮಾ ಸದ್ಯ ರಿಲೀಸ್‌ಗೆ ರೆಡಿ ಆಗಿದೆ. ಟ್ರೇಲರ್ ಮೂಲಕ ಸಿನಿಮಾ ಸದ್ದು ಮಾಡ್ತಿದೆ. ಲವ್‌ ಯು ರಚ್ಚು ಚಿತ್ರ ಈಗಾಗಲೇ ಸಾಕಷ್ಟು ವಿಚಾರಗಳಿಂದ ಚರ್ಚೆಯಲ್ಲಿ ಇದೆ. ಸದ್ಯ ಚಿತ್ರದ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ನಟ ಧ್ರುವ ಸರ್ಜಾ ಟ್ರೇಲರ್‌ ರಿಲೀಸ್‌ ಮಾಡಿದರು.

ಲವ್‌ ಯು ರಚ್ಚು ಚಿತ್ರದ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಮುಖ್ಯ ಅತಿಥಿ ಆಗಿದ್ದರು. ಟ್ರೇಲರನ್ನು ಅವರೇ ಲಾಂಚ್‌ ಮಾಡಿದ್ದಾರೆ. ಧ್ರುವನ ಕಾರ್ಯಕ್ರಮ ಅಂದರೆ ಅಲ್ಲಿ ಅವರ ಅಭಿಮಾನಿಗಳೇ ತುಂಬಿ ಹೋಗುತ್ತಾರೆ. ಟ್ರೇಲರ್‌ ರಿಲೀಸ್‌ ವೇಳೆ ಧ್ರುವ ಸರ್ಜಾ ಅಭಿಮಾನಿಗಳ ಅಬ್ಬರ ಜೋರಾಗಿತ್ತು.

ಲವ್‌ ಯು ರಚ್ಚು ಕಾರ್ಯಮದಲ್ಲಿ ನಟ ಧ್ರುವ ಸರ್ಜಾ ಅಭಿಮಾನಿಗಳ ಅಬ್ಬರವೇ ಹೆಚ್ಚಾಗಿತ್ತು. ಇದು ಧ್ರುವ ಸರ್ಜಾ ಅವರ ಸಿನಿಮಾದ ಕಾರ್ಯಕ್ರಮ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹಾಗಾಗಿ ರಚಿತಾ ರಾಮ್‌ ಧ್ರುವ ಅಭಿಮಾನಿಗಳಿಗೆ ಕ್ಲಾಸ್‌ ತೆಗೆದುಕೊಂಡರು.

ಸ್ವಲ್ಪ ಹೊತ್ತು ಸುಮ್ಮನೇ ಇರಿ: ನಟಿ ರಚಿತಾ ರಾಮ್‌!

ಸ್ವಲ್ಪ ಹೊತ್ತು ಸುಮ್ಮನೇ ಇರಿ: ನಟಿ ರಚಿತಾ ರಾಮ್‌!

ನಟಿ ರಚಿತಾ ರಾಮ್‌ ಅವರು ಟ್ರೇಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಚಿತ್ರದ ಬಗ್ಗೆ ಮಾತನಾಡಲು ವೇದಿಕೆ ಹತ್ತಿದರು. ಆದರೆ ಅವರಿಗೆ ಮಾತನಾಡಲು ಧ್ರುವ ಅಭಿಮಾನಿಗಳು ಅವಕಾಶವೇ ಕೊಡಲಿಲ್ಲ. ಅವರನ್ನು ಮಾತನಾಡಲು ಬಿಡದೆ ಧ್ರುವ ಸರ್ಜಾಗೆ ಜೈಕಾರ ಹಾಕುತ್ತಿದ್ದರು. ನಟಿ ರಚಿತಾರಾಮ್‌ ವೇದಿಕೆ ಮೇಲೆ ನಿಂತು ಸ್ವಲ್ಪ ಸುಮ್ಮನೆ ಇರಿ ಎಂದು ಪದೇ ಪದೇ ಹೇಳಿದರೂ ಸಹ ಧ್ರುವ ಅಭಿಮಾನಿಗಳು ಮಾತ್ರ ಜೋರಾಗಿ ಕೂಗುತ್ತಲೇ ಇದ್ದರು. ಹಾಗಾಗಿ ರಚಿತಾ ರಾಮ್‌ ಕೂಡ ಕೊಂಚ ಜೋರಾಗಿಯೇ ಅವಾಜ್‌ ಹಾಕಿ ಸುಮ್ಮನಿರುವಂತೆ ಹೇಳಿದರು.

'ಲವ್‌ ಯು ರಚ್ಚು' ಟ್ರೇಲರ್‌ ಬಿಚ್ಚಿಟ್ಟಿತು ಚಿತ್ರದ ರೋಚಕಥೆ!

'ಲವ್‌ ಯು ರಚ್ಚು' ಟ್ರೇಲರ್‌ ಬಿಚ್ಚಿಟ್ಟಿತು ಚಿತ್ರದ ರೋಚಕಥೆ!

ನಟಿ ರಚಿತಾ ರಾಮ್‌ ಅವರ ಹೆಸರನ್ನೇ ಚಿತ್ರಕ್ಕೆ ಇಡಲಾಗಿದೆ. ಹಾಗಾಗಿ ಈ ಚಿತ್ರ ಹೆಚ್ಚಾಗಿ ರಚಿತಾ ರಾಮ್‌ ಅವರ ಪಾತ್ರದ ಮೇಲೆಯೇ ಸುತ್ತಲಿದೆ. ಇನ್ನು ಸಿನಿಮಾ ಯಾವ ರೀತಿಯ ಕಥಾ ಹಂದರ ಹೊಂದಿದೆ ಎನ್ನುವುದನ್ನು ಈ ಥ್ರಿಲ್ಲರ್‌ ಟ್ರೇಲರ್ ಹೇಳುತ್ತಿದೆ. ಸಿನಿಮಾದ ಟ್ರೇಲರ್‌ಗಳು ಚಿತ್ರಕ್ಕೆ ಆಮಂತ್ರಣ ಇದ್ದ ಹಾಗೆ. ಹಾಗಾಗಿ ಪ್ರತೀ ಚಿತ್ರದ ಟ್ರೇಲರ್‌ ಕೂಡ ಸಿನಿಮಾದ ಮೇಲಿನ ಆಸಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಲವ್‌ ಯು ರಚ್ಚು ಟ್ರೇಲರ್‌ ಕೂಡ ಅಂತೆಯೇ ನಿರೀಕ್ಷೆಗೆ ಕಾರಣ ಆಗಿದೆ.

ಕ್ರೈಮ್ ಥ್ರಿಲ್ಲರ್‌ ಕಹಾನಿಯ ಸುತ್ತ ರಚ್ಚು!

ಕ್ರೈಮ್ ಥ್ರಿಲ್ಲರ್‌ ಕಹಾನಿಯ ಸುತ್ತ ರಚ್ಚು!

ಈ ಚಿತ್ರ ಕೇವಲ ಲವ್‌ ಸ್ಟೋರಿಯನ್ನು ಒಳಗೊಂಡ ಸಿನಿಮಾ ಅಲ್ಲ. ಚಿತ್ರದ ಮುಖ್ಯ ಕಥಾ ವಸ್ತುವೇ ಕ್ರೈಮ್‌ ಸ್ಟೋರಿ. ರಚಿತಾ ರಾಮ್‌ ಪಾತ್ರದ ಸುತ್ತ ನಡೆಯುವ ಕ್ರೈಮ್‌ ಸಿನಿಮಾದ ಮುಖ್ಯ ತಿರುಳು ಎನ್ನುವುದು ಗೊತ್ತಾಗುತ್ತದೆ. ಇದು ರಚಿತಾ ರಾಮ್‌ ಮತ್ತು ಅಜಯ್‌ ರಾವ್‌ ಅವರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೊದಲ ಸಿನಿಮಾ ಇದು. ಚಿತ್ರದ ಹಾಡಗಳು ಲವ್‌ ಮತ್ತು ಫ್ಯಾಮಿಲಿ ಕಹಾನಿಯನ್ನು ಹೇಳಿದರೆ, ಟ್ರೇಲರ್‌ ಕ್ರೈಂ ಥ್ರಿಲ್ಲರ್‌ ಅಂಶವನ್ನು ಬಿಚ್ಚಿಟ್ಟಿದೆ.

ಲವ್‌ ಯು ರಚ್ಚು ಬಗ್ಗೆ ಧ್ರುವ ಸರ್ಜಾ ಮಾತು!

ಲವ್‌ ಯು ರಚ್ಚು ಬಗ್ಗೆ ಧ್ರುವ ಸರ್ಜಾ ಮಾತು!

ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ ಲವ್‌ ಯು ರಚ್ಚು ಚಿತ್ರದ ಬಗ್ಗೆ ಮಾತನಾಡಿದ್ದಾರೆ. "ಟ್ರೇಲರ್‌ ನೋಡಿದರೆ ಇದೊಂದು ಮರ್ಡರ್‌ ಮಿಸ್ಟ್ರಿ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಖಂಡಿತ ಜನರನ್ನು ಚಿತ್ರ ಮಂದಿರದಲ್ಲಿ ಹಿಡಿದಿಟ್ಟುಕೊಳ್ಳುತ್ತೆ. ನಮಗೆ ಕಂಟೆಂಟ್‌ ಓರಿಯೆಂಟ್‌ ಸಿನಿಮಾಗಳು ಬೇಕಲ್ವಾ. ಕನ್ನಡ ಚಿತ್ರಗಳನ್ನ ನೋಡಿ ಪ್ರೋತ್ಸಾಹಿಸಿ, ಎಲ್ಲರೂ ಕಂಟೆಂಟ್‌ ಇರೋ ಸಿನಿಮಾಗಳನ್ನೆ ಮಾಡುತ್ತಾರೆ. ಈ ಚಿತ್ರದ ಬಗ್ಗೆ ಹೇಳಬೇಕು ಅಂದರೆ ಡಿಸೆಂಬರ್‌ 31ಕ್ಕೆ ಲವ್‌ ಯು ರಚ್ಚು ಸಿನಿಮಾ ರಿಲೀಸ್‌ ಆಗ್ತಿದೆ. ಎಲ್ಲರೂ ಚಿತ್ರ ಮಂದಿರಕ್ಕೆ ಹೋಗಿ ಸಿನಿಮಾ ನೋಡಿ" ಎಂದು ಧ್ರುವ ಹೇಳಿದ್ದಾರೆ.

More from Filmibeat

English summary
Rachita Ram Warn To Dhruva Sarja Fans At Love You Rachchu Movie Trailer Release Event,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X