Just In
Don't Miss!
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- News
ಮುಡಾ ನಿವೇಶನಗಳ ಅಭಿವೃದ್ಧಿಗೆ ಒನ್ ಟೈಂ ಸೆಟ್ಲಮೆಂಟ್
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಫ್ತಿ ಪೊಲೀಸ್ ಆಗಲಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್!

ಇತ್ತೀಚಿಗಷ್ಟೆ ನಟಿ ಪ್ರಿಯಾಂಕಾ ಉಪೇಂದ್ರ 'ಸೆಕೆಂಡ್ ಹಾಫ್' ಚಿತ್ರದಲ್ಲಿ ಪೊಲೀಸ್ ಆಗಿ ಮಿಂಚಿದ್ದರು. ಆದರೆ ಈಗ ನಟಿ ರಚಿತಾ ರಾಮ್ ಕೂಡ ಪೊಲೀಸ್ ಆಗುವುದಕ್ಕೆ ಸಜ್ಜಾಗಿದ್ದಾರೆ.
ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಲ್ಲಿ ಹೆಚ್ಚಾಗಿ ಹೋಮ್ಲಿ ಲುಕ್ ನಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದರು. ಆದರೆ ಈಗ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರ ಮಾಡುವುದಕ್ಕೆ ರಚಿತಾ ಮುಂದಾಗಿದ್ದಾರೆ. ಡಿಂಪಲ್ ಕ್ವೀನ್ ಇದೀಗ ತಮ್ಮ ಹೊಸ ಚಿತ್ರದಲ್ಲಿ ಪೊಲೀಸ್ ಆಗುತ್ತಿದ್ದು, ಆ ಸಿನಿಮಾದ ಕೆಲ ಮಾಹಿತಿಗಳು ಮುಂದಿದೆ ಓದಿ..

ಆರ್.ಜೆ.ಮಯೂರ್ ನಿರ್ದೇಶನ
ರಚಿತಾ ರಾಮ್ ತಮ್ಮ ಹೊಸ ಸಿನಿಮಾದಲ್ಲಿ ಪೊಲೀಸ್ ಪಾತ್ರವನ್ನು ಮಾಡಲಿದ್ದಾರೆ. ಈ ಚಿತ್ರವನ್ನು ಆರ್.ಜೆ.ಮಯೂರ್ ನಿರ್ದೇಶನ ಮಾಡಲಿದ್ದಾರೆ.

'ರಿಷಭಪ್ರಿಯ' ಬಳಿಕ
ಈ ಹಿಂದೆ ರಚಿತಾ ನಿರ್ಮಾಣದ 'ರಿಷಭಪ್ರಿಯ' ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದ ಆರ್.ಜೆ.ಮಯೂರ್ ಇದೇ ಮೊದಲ ಬಾರಿಗೆ ದೊಡ್ಡ ಸಿನಿಮಾವನ್ನು ಮಾಡುತ್ತಿದ್ದಾರೆ.

ಮಫ್ತಿ ಪೊಲೀಸ್
ಚಿತ್ರದಲ್ಲಿ ರಚಿತಾ ಪೊಲೀಸ್ ಪಾತ್ರವನ್ನು ಮಾಡುತ್ತಿದ್ದರು, ಇಲ್ಲಿ ಅವರು ಖಾಕಿ ತೊಡುವುದಿಲ್ಲವಂತೆ. ಮಫ್ತಿ ಪೊಲೀಸ್ ವೇಷದಲ್ಲಿ ರಚಿತಾ ಚಿತ್ರದಲ್ಲಿ ಕಾಣಿಸಿಕೊಳಲಿದ್ದಾರೆ. ಇನ್ನು ಇಡೀ ಚಿತ್ರದಲ್ಲಿ ರಚಿತಾ ಲುಕ್ ಮತ್ತು ಡೈಲಾಗ್ ಗಳು ಸಖತ್ ಖಡಕ್ ಆಗಿ ಇರಲಿದೆಯಂತೆ.
ವಾವ್.. ಎರಡು ಕಾಲುಗಳ ಆಧಾರ ಇಲ್ಲದೆ ನಿಂತ ರಚಿತಾ ರಾಮ್!

ಡಿಸೆಂಬರ್ ನಲ್ಲಿ ಶುರು
ರಚಿತಾ ಅವರ ಈ ಹೊಸ ಸಿನಿಮಾ ಡಿಸೆಂಬರ್ ಮೂರನೇ ವಾರ ಶುರುವಾಗಲಿದ್ದು, ಜನವರಿ ಅಂತ್ಯಕ್ಕೆ ಶೂಟಿಂಗ್ ಮುಗಿಸುವ ಪ್ಲಾನ್ ಚಿತ್ರತಂಡದ್ದು. ಇನ್ನು ಅಂದುಕೊಂಡಂತೆ ಸಿನಿಮಾ ಮೇ ವೇಳೆಗೆ ರಿಲೀಸ್ ಆಗಲಿದೆ.
ಕಡೆಗೂ ಮದುವೆ, ಗಾಸಿಪ್ ಬಗ್ಗೆ ಮೌನ ಮುರಿದ ರಚಿತಾ ರಾಮ್.!

ಕನ್ನಡಿಗರಿಗೆ ಮಾತ್ರ
ಈ ಸಿನಿಮಾದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಆದರೆ 'ಈ ಚಿತ್ರ ಕಡ್ಡಾಯವಾಗಿ ಕನ್ನಡಿಗರಿಗೆ ಮಾತ್ರ' ಎನ್ನುವ ಮೂಲಕ ನಿರ್ದೇಶಕರು ದೊಡ್ಡ ನಿರೀಕ್ಷೆ ಹುಟ್ಟಿಸಿದ್ದಾರೆ.
'ನೋಟ್ ಬ್ಯಾನ್', 'ಜಿ.ಎಸ್.ಟಿ'ಯಿಂದಾಗಿ ನೆಲ ಕಚ್ಚಿದ ಕನ್ನಡ ಚಿತ್ರರಂಗ.!

ಪೊಲೀಸ್ ಆದ ನಾಯಕಿಯರು
ಈ ಹಿಂದೆ ನಟಿ ಮಾಲಾಶ್ರೀ, ಪ್ರೇಮಾ, ರಾಗಿಣಿ, ಪ್ರಿಯಾಂಕ ಉಪೇಂದ್ರ ಪೊಲೀಸ್ ಆಗಿ ತೆರೆ ಮೇಲೆ ತಮ್ಮ ಖದರ್ ಪ್ರದರ್ಶನ ಮಾಡಿದ್ದರು. ಈಗ ರಚಿತಾ ಪೊಲೀಸ್ ಆಗಿ ಹೇಗೆ ಕಾಣಿಸುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.