Don't Miss!
- Finance
Post Office scheme: ಮಾಸಿಕ 9,000 ರೂ ಆದಾಯ ಪಡೆಯುವುದು ಹೇಗೆ?
- News
ಕೂರ್ಮಗಿರಿ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
- Technology
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸಂಜಯ್ ಅಲಿಯಾಸ್ ಸಂಜು' ಜೊತೆಯಾದ ರಚಿತಾ ರಾಮ್
Recommended Video
ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಮತ್ತೊಂದು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗಿ ಮಿಂಚಿದ್ದ ರಚಿತಾ ಅವರ 'ಐ ಲವ್ ಯು' ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಚಿತ್ರಾಭಿಮಾನಿಗಳಿಗೆ 'ಐ ಲವ್ ಯು' ಹೇಳುತ್ತ ಉಪ್ಪಿ ಜೊತೆ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆ ಗೆಡಿಸಿದ್ದ ರಚಿತಾ ಈಗ ಸಂಜು ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬಾರದಿತ್ತು ಎಂದು ಕಣ್ಣೀರಿಡುತ್ತಲೆ ರಚ್ಚು ಈಗ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ.
ಬಾಲಿವುಡ್
ನ
ಖ್ಯಾತ
ನಿರ್ಮಾಪಕನ
ಪುತ್ರನಿಗೆ
ನಾಗಶೇಖರ್
ನಿರ್ದೇಶನ
ನಾಗಶೇಖರ್ ನಿರ್ದೇಶನದ 'ಸಂಜಯ್ ಅಲಿಯಾಸ್ ಸಂಜು' ಸಿನಿಮಾದಲ್ಲಿ ರಚಿತಾ ನಾಯಕಿಯಾಗಿ ಮಿಂಚುತ್ತಿದ್ದಾರೆ. ಅಮರ್ ಸಿನಿಮಾ ನಂತರ ನಾಗಶೇಖ್ ಅನೌನ್ಸ್ ಮಾಡಿದ ಸಿನಿಮಾ ಇದಾಗಿದೆ. ಈಗಾಗಲೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇರುವ ರಚಿತಾ ಸಿನಿಮಾಗಳ ಲಿಸ್ಟ್ ಗೆ ಸಂಜು ಸೇರ್ಪಡೆಯಾಗಿದೆ.

'ಸಂಜು ಅಲಿಯಾಸ್ ಸಂಜಯ್' ಜೊತೆ ರಚಿತಾ
ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಸಂಜಯ್ ಅಲಿಯಾಸ್ ಸಂಜು' ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ನಿರ್ದೇಶಕ ನಾಗಶೇಖರ್ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಚಿತ್ರದಲ್ಲಿ ರಚಿತಾ ಪಾತ್ರ ತುಂಬ ವಿಭಿನ್ನವಾಗಿರಲಿದೆಯಂತೆ. ರಚ್ಚು ಇತ್ತೀಚಿಗಷ್ಟೆ ಏಕ್ ಲವ್ ಯಾ ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸಂಜು
ವೆಡ್ಸ್
ಗೀತಾ-2
ಏನಾಯ್ತು?
ಅದೇ
ಕಥೆನಾ
ಇದು.!

ನಾಯಕನ ಪಾತ್ರಕ್ಕೆ ಹುಡುಕಾಟ
ಸದ್ಯ ರಚಿತಾ ರಾಮ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಆದ್ರೆ ನಾಯಕನ ಪಾತ್ರಕ್ಕೆ ಇನ್ನು ಹುಡುಕಾಟ ನಡೆಯುತ್ತಿದ್ದೆಯಂತೆ. ನಾಗಶೇಖರ್ ಸಿನಿಮಾ ಅಂದ್ಮೇಲೆ ರಿಯಾಲಿಗೆ ಹೆಚ್ಚು ಒತ್ತು ನೀಡುತ್ತಾರೆ. ಸಂಜು ಪಾತ್ರಕ್ಕೆ ಹೊಂದಿಕೊಳ್ಳುವಂತಹ ನಾಯಕ ಚಿತ್ರಕ್ಕೆ ಬೇಕಾಗಿರುವ ಕಾರಣ ನಾಯಕ ಪಾತ್ರಕ್ಕಾಗಿ ಭಾರಿ ಹುಡುಕಾಟ ನಡೆಸುತ್ತಿದೆ ಚಿತ್ರತಂಡ.

ಹಿಂದಿ ಸಿನಿಮಾ ನಂತರ ಸಂಜು ಚಿತ್ರೀಕರಣ
ನಾಗಶೇಖರ್ ಸದ್ಯ ಬಾಲಿವುಡ್ ಕಡೆ ಮುಖ ಮಾಡಿ ನಿಂತಿದ್ದಾರೆ. ಈಗಾಗಲೆ ಬಾಲಿವುಡ್ ನಲ್ಲಿ ಸಿನಿಮಾ ಕೂಡ ಅನೌನ್ಸ್ ಮಾಡಿದ್ದಾರೆ. ಖ್ಯಾತ ನಿರ್ಮಾಪಕ ಜೋಗಿಂದರ್ ಸಿಂಗ್ ಅವರ ಪುತ್ರ ಭವೀಶ್ ಅವರಿಗೆ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ 'ಮೈನಾ' ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಈ ಸಿನಿಮಾ ಮುಗಿದ ಬಳಿಕ 'ಸಂಜಯ್ ಅಲಿಯಾಸ್ ಸಂಜು' ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಅಂದ್ಮೇಲೆ ಚಿತ್ರ ಕೊಂಚ ತಡವಾಗುವ ಸಾಧ್ಯತೆ ಇದೆ.

ಸಂಜು ವೇಡ್ಸ್ ಗೀತಾ-2ನಾ ಇದು?
2011ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸಂಜು ವೆಡ್ಸ್ ಗೀತಾ ಚಿತ್ರದ ಪಾರ್ಟ್ ಕೂಡ ಅನೌನ್ಸ್ ಮಾಡಿದ್ದರು ನಾಗಶೇಖರ್. ಸದ್ಯ ಸಂಜಯ್ ಅಲಿಯಾಸ್ ಸಂಜು ಸಿನಿಮಾ ಟೈಟಲ್ ಫಿಕ್ಸ್ ಆಗುತ್ತಿದಂದೆ ಇದು 'ಸಂಜು ವೆಡ್ಸ್ ಗೀತಾ' ಚಿತ್ರದ ಪಾರ್ಟ್-2 ಎನ್ನುವ ಅನುಮಾನ ಚಿತ್ರಾಭಿಮಾನಿಗಳಲ್ಲಿ ಕಾಡಿತ್ತು. ಆದ್ರೆ ಈ ಬಗ್ಗೆ ನಿರ್ದೇಶಕ ನಾಗಶೇಖತ್ ಸ್ಪಷ್ಟಪಡಿಸಿದ್ದಾರೆ. ಈ ಸಿನಿಮಾಗು ಸಂಜು ವೆಡ್ಸ್ ಗೀತಾ ಚಿತ್ರಕ್ಕೂ ಯಾವುದೆ ಸಂಬಂಧ ಇರುವುದಿಲ್ಲವಂತೆ. ಇದೆ ವಿಭಿನ್ನವಾದ ಸಿನಿಮಾವಾಗಿದೆಯಂತೆ.
'ಅಮರ್'
ಸಿನಿಮಾ
ನಂತರ
ಹೊಸ
ಸಿನಿಮಾ
ಅನೌನ್ಸ್
ಮಾಡಿದ
ನಾಗಶೇಖರ್

ನೈಜ ಘಟನೆ ಆಧಾರಿತ ಸಿನಿಮಾ
'ಸಂಜಯ್ ಅಲಿಯಾಸ್ ಸಂಜು' ಸಿನಿಮಾ ನೈಜ ಘಟನೆ ಆಧಾರಿತ ಸಿನಿಮಾವಂತೆ. ನಾಗಶೇಖರ್ ನಿರ್ದೇಶಕ ಬಹುತೇಕ ಚಿತ್ರಗಳು ನೈಜ ಘಟನೆ ಆಧಾರಿತ ಚಿತ್ರಗಳಾಗಿವೆ. 'ಅಮರ್' ಸಿನಿಮಾ ಕೂಡ ಸತ್ಯ ಘಟನೆ ಆಧಾರಿತ ಚಿತ್ರವೆಂದು ಹೇಳಿದ್ದರು ನಾಗಶೇಖರ್. ಚಿತ್ರದ ಟೈಟಲ್, ರಕ್ತಸಿಕ್ತವಾದ ಪೋಸ್ಟರ್ ನ ಬ್ಯಾಗ್ರೌಂಡ್ ಮತ್ತು ಬೇಡಿ ಹಾಕಿದ ಕೈ ನೋಡುತ್ತಿದ್ರೆ ಇದೊಂದು ಪಕ್ಕ ಕ್ರೈಮ್ ಆಧಾರಿತ ಚಿತ್ರ ಎನ್ನುವುದು ಗೊತ್ತಾಗುತ್ತಿದೆ.