ನಿಖಿಲ್ ಹುಟ್ಟುಹಬ್ಬಕ್ಕೆ ರಚಿತಾ ಶುಭಾಶಯ ಹೇಳಿದ್ದು ಹೀಗೆ
Recommended Video
Rachitha dedicates a post on instagram for Nikhil on his birthday | Rachitha Ram | Nihkil Kumarswamy
ನಟ ನಿಖಿಲ್ ಕುಮಾರ್ ಇಂದು (ಜನವರಿ 22) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ವಿಶೇಷವಾಗಿ ನಟಿ ರಚಿತಾ ರಾಮ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಚಿತಾ ರಾಮ್ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಸಿಂಪಲ್ ಆಗಿ ವಿಶ್ ಮಾಡಿರುವ ರಚಿತಾ ಒಂದೇ ಸಾಲಿನಲ್ಲಿ ಸಂದೇಶ ಹೇಳಿದ್ದಾರೆ.
''ಹುಟ್ಟುಹಬ್ಬದ ಶುಭಾಶಯಗಳು ನಿಖಿಲ್. ಗಾಡ್ ಬ್ಲೆಸ್ ಯೂ'' ಎಂದು ರಚಿತಾ ಬರೆದಿದ್ದಾರೆ. ತಮ್ಮ ಹಾಗೂ ನಿಖಿಲ್ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ರಚಿತಾ ರಾಮ್ ಹಾಗೂ ನಿಖಿಲ್ ಕುಮಾರ್ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ನಂತರ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗಾಸಿಪ್ ಹರಿದಾಡುತ್ತಲೇ ಇದೆ.
ನಿನ್ನೆ ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ನಿಖಿಲ್ ಕುಮಾರ್ ಕುಟುಂಬ ಸಹಸ್ರ ಚಂಡಿಕಾ ಯಾಗ ಮಾಡಿಸುತ್ತಿದ್ದರು. ಈ ವೇಳೆಯೇ ರಚಿತಾ ಸಹ ಶೃಂಗೇರಿಗೆ ಭೇಟಿ ನೀಡಿದ್ದರು. ಯಾಗದ ಸಲುವಾಗಿಯೇ ರಚಿತಾ ಕೂಡ ಅಲ್ಲಿಗೆ ಹೋಗಿದ್ದರು ಎನ್ನುವ ಅನುಮಾನ ಮೂಡಿತ್ತು.
English summary
Actress Rachita Ram wishes for Nikhil Kumar birthday.


Click it and Unblock the Notifications