'ಜೋಗಿ' ಫಿಮೇಲ್ ವರ್ಷನ್ ಲುಕ್ ನಲ್ಲಿ ರಚಿತಾ ರಾಮ್ !

By Pavithra

Recommended Video

ಶಿವಣ್ಣನನ್ನೇ ಕಾಪಿ ಮಾಡಿದ ರಚಿತಾ ಬಗ್ಗೆ ಫ್ಯಾನ್ಸ್ ಹೇಳಿದ್ದು ಹೀಗೆ...!! | Filmibeat Kannada

'ಜೋಗಿ' ಕನ್ನಡ ಸಿನಿಮಾರಂಗದಲ್ಲಿ ಯಶಸ್ವಿಯಾದ ಸಿನಿಮಾ. ಶಿವಣ್ಣ ಹೊಸ ಲುಕ್, ಲಾಂಗ್ ಹಿಡಿಯೋ ಸ್ಟೈಲ್, ಪಕ್ಕ ಹಳ್ಳಿ ಸೊಗಡಿನ ಡೈಲಾಗ್, ಹಿಟ್ ಹಾಡುಗಳು ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಸುದ್ದಿ ಮಾಡಿದ ಚಿತ್ರ.

ಸಿನಿಮಾ ಬಿಡುಗಡೆ ಮುಂಚೆ ನಿರ್ದೇಶಕ ಪ್ರೇಮ್ ಶಿವಣ್ಣ ಡಿಫ್ರೆಂಟ್ ಲುಕ್ ನಲ್ಲಿ ಲಾಂಗ್ ಹಿಡಿದು ಕುಳಿತಿದ್ದ ಪೋಸ್ಟರ್ ಬಿಡುಗಡೆ ಮಾಡಿದ್ದರು. ಒಂದೇ ಒಂದು ಪೋಸ್ಟರ್ ಗಾಂಧಿನಗರದಲ್ಲಿ ಭಾರಿ ಸದ್ದು ಮಾಡಿತ್ತು. ಈಗ 'ಜೋಗಿ' ಫಿಮೇಲ್ ವರ್ಷನ್ ಲುಕ್ ನಲ್ಲಿ ನಟಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.

Rachita Rams Jogi posse photo is viral in social media

ಲಾಂಗ್ ಇಲ್ಲದೆ ರಚಿತಾ ಕೊಟ್ಟಿರುವ ಜೋಗಿ ಪೋಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ರಚಿತಾ ಫೋಟೋ ಅಪ್ಲೋಡ್ ಮಾಡುತ್ತಿದ್ದ ಹಾಗೆ ಅಭಿಮಾನಿಗಳು ಮೆಚ್ಚುಗೆ ಸಲ್ಲಿಸಿದ್ದಾರೆ.

Rachita Rams Jogi posse photo is viral in social media

'ಕಿಕ್' ರಿಯಾಲಿಟಿ ಶೋ ನಲ್ಲಿ ಶಿವಣ್ಣನ ಜೊತೆ ವೇದಿಕೆ ಹಂಚಿಕೊಂಡಿದ್ದ ರಚಿತಾ ಅವರನ್ನು ಸಿನಿಮಾದಲ್ಲಿಯೂ ಹ್ಯಾಟ್ರಿಕ್ ಹೀರೋ ಜೊತೆ ನೋಡುವ ಹಂಬಲವನ್ನು ವ್ಯಕ್ತ ಪಡಿಸಿದ್ದಾರೆ. ಸುಧಾರಾಣಿ, ಶಿವರಾಜ್ ಕುಮಾರ್ ಜೋಡಿ ನಂತರ ರಚಿತಾ ರಾಮ್, ಶಿವಣ್ಣನಿಗೆ ಒಳ್ಳೆ ಆನ್ ಸ್ಕ್ರೀನ್ ಪೇರ್ ಎನ್ನುತ್ತಿದ್ದಾರೆ. ಒಟ್ಟಾರೆ ರಚಿತಾ ರಾಮ್ 'ಜೋಗಿ' ಪೋಸ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

More from Filmibeat

English summary
Kannada actress Rachita Ram's 'Jogi' posse photo is viral in social media. Rachita Ram has posed to the camera as Shivaraj Kumar appeared in the poster of Jogi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X