For Quick Alerts
  ALLOW NOTIFICATIONS  
  For Daily Alerts

  'ರಂಗನಾಯಕ'ನಿಗೆ ಸಿಕ್ಕ ನಾಯಕಿ: ಯಾರು ಈ ರಚಿತಾ ಮಹಾಲಕ್ಷ್ಮಿ?

  |

  ನವರಸ ನಾಯಕ ಜಗ್ಗೇಶ್ ಮತ್ತು 'ಮಠ' ಖ್ಯಾತಿಯ ಗುರುಪ್ರಸಾದ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ರಂಗನಾಯಕ' ಸಿನಿಮಾ ಚಿತ್ರೀಕರಣ ಮಾಡ್ತಿದೆ. ಇತ್ತೀಚಿಗಷ್ಟೆ ರಂಗನಾಯಕ ಸೆಟ್‌ನಲ್ಲಿ ಜಗ್ಗೇಶ್ ಭಾಗಿಯಾಗಿರುವ ಫೋಟೋಗಳು ವೈರಲ್ ಆಗಿದ್ದವು.

  ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದ ರಂಗನಾಯಕ ಸಿನಿಮಾದಲ್ಲಿ ನಾಯಕಿ ಯಾರು ಎನ್ನುವುದು ಕುತೂಹಲ ಮೂಡಿಸಿತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ರಂಗನಾಯಕನ ಜೊತೆ ರಂಗನಾಯಕಿಯೂ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಫೋಟೋಗಳು ಬಹಿರಂಗವಾಗಿದೆ.

  ಬಲಗಾಲಿಟ್ಟು ರಂಗ ಪ್ರವೇಶಿಸಿದ 'ರಂಗನಾಯಕ' ಜಗ್ಗೇಶ್ಬಲಗಾಲಿಟ್ಟು ರಂಗ ಪ್ರವೇಶಿಸಿದ 'ರಂಗನಾಯಕ' ಜಗ್ಗೇಶ್

  ಹೌದು, ರಂಗನಾಯಕ ಚಿತ್ರದಲ್ಲಿ ಜಗ್ಗೇಶ್‌ಗೆ ಜೋಡಿಯಾಗಿ ರಚಿತಾ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ. ಮೂಲತಃ ಕರ್ನಾಟಕದವರೇ ಆಗಿದ್ದರೂ ತಮಿಳು ಕಿರುತೆರೆ ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿರುವ ರಚಿತಾ ಮಹಾಲಕ್ಷ್ಮಿ ಸ್ಯಾಂಡಲ್‌ವುಡ್ ಕಡೆ ಮುಖ ಮಾಡಿದ್ದಾರೆ. ಮುಂದೆ ಓದಿ...

  'ಪಾರಿಜಾತ' ಚಿತ್ರದಲ್ಲಿ ನಟನೆ

  'ಪಾರಿಜಾತ' ಚಿತ್ರದಲ್ಲಿ ನಟನೆ

  ಅಂದ್ಹಾಗೆ, ರಚಿತಾ ಅವರಿಗೆ 'ರಂಗನಾಯಕ' ಮೊದಲ ಸಿನಿಮಾವಲ್ಲ. ಇದು ಎರಡನೇ ಚಿತ್ರ. ಇದಕ್ಕು ಮುಂಚೆ ಪಾರಿಜಾತ ಚಿತ್ರದಲ್ಲಿ ರಚಿತಾ ನಟಿಸಿದ್ದರು. 2012ರಲ್ಲಿ ತೆರೆಕಂಡಿದ್ದ 'ಪಾರಿಜಾತ' ಸಿನಿಮಾದಲ್ಲಿ ದಿಗಂತ್ ಮತ್ತು ಐಂದ್ರಿತಾ ರೈ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಸುಮಾರು 9 ವರ್ಷದ ಬಳಿಕ ಮತ್ತೆ ಕನ್ನಡ ಸಿನಿಮಾ ಮಾಡ್ತಿದ್ದು, ಈ ಸಲ ನವರಸ ನಾಯಕ ಜಗ್ಗೇಶ್‌ಗೆ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಅದಾಗಲೇ ರಚಿತಾ ಮಹಾಲಕ್ಷ್ಮಿ ರಂಗನಾಯಕ ಶೂಟಿಂಗ್ ಮಾಡ್ತಿದ್ದಾರೆ.

  'ಈ ದೃಶ್ಯ ಮಾಡಬೇಕಿದ್ರೆ ಹೃದಯ ಬಾಯಿಗೆ ಬಂದಿತ್ತು': ಜಗ್ಗೇಶ್ ಹಳೆಯ ನೆನಪು'ಈ ದೃಶ್ಯ ಮಾಡಬೇಕಿದ್ರೆ ಹೃದಯ ಬಾಯಿಗೆ ಬಂದಿತ್ತು': ಜಗ್ಗೇಶ್ ಹಳೆಯ ನೆನಪು

  ತಮಿಳು ಕಿರುತೆರೆಯ ಬೇಡಿಕೆ ನಟಿ

  ತಮಿಳು ಕಿರುತೆರೆಯ ಬೇಡಿಕೆ ನಟಿ

  ರಚಿತಾ ಮಹಾಲಕ್ಷ್ಮಿ ತಮಿಳು ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಪ್ರಮುಖರು. ಬೆಂಗಳೂರಿನಲ್ಲಿ ಜನಿಸಿದ ರಚಿತಾ ಈಗ ಚೆನ್ನೈನಲ್ಲಿ ನೆಲೆಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆ ಚೆನ್ನಾಗಿ ಮಾತನಾಡಬಲ್ಲರು. ಚೊಚ್ಚಲ ತಮಿಳು ಧಾರಾವಾಹಿಯಲ್ಲಿ ತನ್ನ ಜೋಡಿಯಾಗಿದ್ದ ದಿನೇಶ್ ಗೋಪಾಲಸ್ವಾಮಿ ಅವರನ್ನು ರಚಿತಾ ವಿವಾಹವಾಗಿದ್ದಾರೆ. ತಮಿಳಿನ 'ಸರವಣನ್ ಮೀನಾಕ್ಷಿ' ಧಾರಾವಾಹಿ ದೊಡ್ಡ ಹಿಟ್ ಆಗಿತ್ತು. ಈ ಸೀರಿಯಲ್ ಬಳಿಕ ರಚಿತಾ ಹೆಚ್ಚು ಫೇಮಸ್ ಆದರು.

  ಎರಡು ಸಿನಿಮಾದಲ್ಲಿ ನಟನೆ

  ಎರಡು ಸಿನಿಮಾದಲ್ಲಿ ನಟನೆ

  2016-17ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ 'ಗೀತಾಂಜಲಿ' ಧಾರಾವಾಹಿಯಲ್ಲಿ ರಚಿತಾ ನಟಿಸಿದ್ದರು. ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ಪಾರಿಜಾತ ಜೊತೆ 2015ರಲ್ಲಿ ತಮಿಳಿನ 'ಉಪ್ಪು ಕರುವಾಡು' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  ಬಲಗಾಲಿಟ್ಟು ಬಂದ 'ರಂಗನಾಯಕ'

  ಬಲಗಾಲಿಟ್ಟು ಬಂದ 'ರಂಗನಾಯಕ'

  ರಂಗನಾಯಕ ಚಿತ್ರೀಕರಣದಲ್ಲಿ ತೊಡಗಿಕೊಂಡ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದ ಜಗ್ಗೇಶ್, ''ರಂಗನಾಯಕ ಇಂದು ಬಲಗಾಲಿಟ್ಟೆ..'' ಎಂದು ಕ್ಯಾಪ್ಷನ್ ಹಾಕಿದ್ದರು. ಕರ್ನಾಟಕದ ಭಾವುಟವನ್ನು ಪ್ರತಿನಿಧಿಸುವಂತೆ ಕೆಂಪು ಮತ್ತು ಹಳದಿ ಬಣ್ಣದ ವಸ್ತ್ರ ತೊಟ್ಟು ನಗುನಗುತಾ ಬಲಗಾಲಿಟ್ಟು ಸೆಟ್‌ಗೆ ಬಂದರು ಜಗ್ಗೇಶ್. ಈ ವೇಳೆ ಜಗ್ಗೇಶ್ ಅವರನ್ನು ನಿರ್ದೇಶಕ ಗುರು ಪ್ರಸಾದ್ ಹಾಗೂ ನೃತ್ಯ ಸಂಯೋಜಕ ಇರ್ಮಾನ್ ಸರ್ದಾರಿಯಾ ಅಕ್ಕ ಪಕ್ಕ ನಿಂತು ಸ್ವಾಗತಿಸಿದ್ದಾರೆ. 'ಮಠ', 'ಎದ್ದೇಳು ಮಂಜುನಾಥ' ಅಂತಹ ಹಿಟ್ ಚಿತ್ರಗಳ ನಂತರ ಈ ಸೂಪರ್ ಹಿಟ್ ಕಾಂಬಿನೇಷನ್ ಒಂದಾಗಿರುವುದು ಸಹಜವಾಗಿ ಕುತೂಹಲ ಹೆಚ್ಚಿಸಿದೆ. ಸುಮಾರು 12 ವರ್ಷದ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ 'ರಂಗನಾಯಕ' ಚಿತ್ರದ ಮೂಲಕ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ವಿಖ್ಯಾತ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ.

  English summary
  Rachitha Mahalakshmi plays female lead in Ranganayaka opposite Jaggesh. This will be the actor's second film in Kannada after Parijatha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X