»   » ಮತ್ತೆ ಬೆಳ್ಳಿಪರದೆ ಮೇಲೆ ಕಮಾಲ್ ಮಾಡಲಿದೆಯಾ ದಚ್ಚು-ರಚ್ಚು ಜೋಡಿ?

ಮತ್ತೆ ಬೆಳ್ಳಿಪರದೆ ಮೇಲೆ ಕಮಾಲ್ ಮಾಡಲಿದೆಯಾ ದಚ್ಚು-ರಚ್ಚು ಜೋಡಿ?

Posted By:
Subscribe to Filmibeat Kannada
ಮತ್ತೆ ಬೆಳ್ಳಿಪರದೆ ಮೇಲೆ ಕಮಾಲ್ ಮಾಡಲಿದೆಯಾ ದಚ್ಚು-ರಚ್ಚು ಜೋಡಿ? | Filmibeat Kannada

'ಬುಲ್ ಬುಲ್' ಸಿನಿಮಾದ ಮೂಲಕ ಕನ್ನಡ ಸಿನಿರಸಿಕರ ಮನಸ್ಸು ಕದ್ದಿರುವ ನಟಿ ರಚಿತಾ ರಾಮ್. ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ಚಿತ್ರದಿಂದಲೇ ಸ್ಯಾಂಡಲ್ ವುಡ್ ಸ್ಟಾರ್ ನಟರ ಜೊತೆ ಅಭಿನಯಿಸುವುದಕ್ಕೆ ಅವಕಾಶ ಗಿಟ್ಟಿಸಿಕೊಂಡ ಅವರು. 'ಬುಲ್ ಬುಲ್', 'ಅಂಬರೀಶ', 'ಜಗ್ಗುದಾದ' ಚಿತ್ರಗಳಲ್ಲಿ ಚಾಲೆಂಜಿಂಗ್ ಸ್ಟಾರ್ ಜೊತೆ ಕಾಣಿಸಿಕೊಂಡಿದ್ದ ರಚಿತಾ ಮತ್ತೆ ಇದೀಗ ದರ್ಶನ್ ಜೊತೆ ಅಭಿನಯಿಸುವುದಕ್ಕೆ ಆಯ್ಕೆಯಾಗಿದ್ದಾರೆ.

ದರ್ಶನ್ ಹಾಗೂ ರಚಿತಾ ಅಭಿನಯದ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ಅಭಿಮಾನಿಗಳು ಕೂಡ ಇವರಿಬ್ಬರ ಜೋಡಿಯನ್ನು ಮೆಚ್ಚಿಕೊಂಡಿದ್ದರು. ಬೆಳ್ಳಿ ಪರದೆ ಮೇಲೆ ದರ್ಶನ್ ರಿಗೆ ರಚಿತಾ ರಾಮ್ ಪರ್ಫೆಕ್ಟ್ ಜೋಡಿ ಎನ್ನುವ ಮಾತು ಕೂಡ ಇದೆ. ಹೀಗಿರುವಾಗ ಈಗ ಅದೇ ಜೋಡಿ ಮತ್ತೆ ಪ್ರೇಕ್ಷಕರನ್ನು ಮೋಡಿ ಮಾಡಲು ಸಜ್ಜಾಗಿದೆ. ಮುಂದೆ ಓದಿ...

ಮತ್ತೆ ತೆರೆ ಮೇಲೆ ದಚ್ಚು-ರಚ್ಚು ಜೋಡಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇಬ್ಬರು ಒಂದೇ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ರಚಿತಾ ರಾಮ್ ಅವರನ್ನೇ ನಾಯಕಿಯಾಗಿ ಚಿತ್ರತಂಡ ಆಯ್ಕೆ ಮಾಡಿದೆ ಎನ್ನುವ ಸುದ್ದಿ ಗಾಂಧಿನಗರದ ತುಂಬೆಲ್ಲಾ ಹಬ್ಬಿದೆ.

ಕೊನೆಯ ಹಂತದ ಚಿತ್ರೀಕರಣದಲ್ಲಿ 'ಕುರುಕ್ಷೇತ್ರ'

ದರ್ಶನ್ ಅಭಿನಯದ 50ನೇ ಚಿತ್ರ 'ಕುರುಕ್ಷೇತ್ರ'ದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಕುಂಬಳಕಾಯಿ ಹೊಡೆದು ಶೂಟಿಂಗ್ ಮುಗಿಸಲಿದ್ದಾರೆ ಮುನಿರತ್ನ ಮತ್ತು ತಂಡ. ಸೋ, 'ಕುರುಕ್ಷೇತ್ರ'ದ ನಂತರ ಡಿಸೆಂಬರ್ ಪ್ರಾರಂಭದಲ್ಲಿಯೇ ಡಿ ಬಾಸ್ ಅಭಿನಯದ 51 ನೇ ಚಿತ್ರ ಸೆಟ್ಟೇರಲಿದೆ.

ಪಕ್ಕಾ ಕಮರ್ಶಿಯಲ್ ಸಿನಿಮಾ

ದರ್ಶನ್ ಅಭಿನಯದ 51ನೇ ಚಿತ್ರವನ್ನು ಪಿ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ 'ಜೈಲಲಿತಾ', 'ವಿಷ್ಣುವರ್ಧನ' ಸಿನಿಮಾಗೆ ಆಕ್ಷನ್ ಕಟ್ ಹೇಳಿರುವ ಪಿ.ಕುಮಾರ್ ದರ್ಶನ್ ಗಾಗಿ ಕಮರ್ಶಿಯಲ್ ಸಬ್ಜೆಕ್ಟ್ ಮಾಡಿಕೊಂಡಿದ್ದಾರಂತೆ .

ಇನ್ನೂ ಹುಡುಕಾಟದಲ್ಲಿ ಚಿತ್ರತಂಡ

ಗಾಸಿಪ್ ಗಳಿರುವಂತೆ ಶೈಲಜನಾಗ್ ನಿರ್ಮಾಣದ ಸಿನಿಮಾಗೆ ರಚಿತಾ ನಾಯಕಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ನಿರ್ಮಾಪಕರು ಮಾತ್ರ ಸಿನಿಮಾದ ''ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ನಾಯಕಿ ಆಯ್ಕೆ ಕೆಲಸ ನಡೆಯುತ್ತಿದೆ, ಇನ್ನೂ ಫೈನಲ್ ಮಾಡಿಲ್ಲ'' ಅಂತಾರೆ. ಆದರೆ ನಿಜಕ್ಕೂ ರಚಿತಾ ಮತ್ತೆ ದರ್ಶನ್ ಗೆ ಜೊತೆಯಾದರೆ ಅಭಿಮಾನಿಗಳಿಗಂತು ಅದು ಸಂತಸದ ಸುದ್ದಿ.

English summary
Actress Rachitha Ram pair with Challenging Star Darshan which is producing by Shylaja Nag.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada