For Quick Alerts
  ALLOW NOTIFICATIONS  
  For Daily Alerts

  ಬೋಲ್ಡ್ ಪಾತ್ರ ಒಪ್ಪಿಕೊಂಡ ರಿಯಲ್ ಕಾರಣ ತಿಳಿಸಿದ ರಚಿತಾ ರಾಮ್

  |
  Lip Kiss ಬಗ್ಗೆ ರಚಿತಾ ರಾಮ್ ಹೇಳಿದ್ದೇನು ನೋಡಿ | Ek Love Ya | Prem | Rakshita | RachitaRam | Raanna

  ಕಳೆದ ಗುರುವಾರ ರಚಿತಾ ರಾಮ್ ಅವರ ಒಂದು ಫೋಟೋ ಬಿಡುಗಡೆಯಾಯ್ತು. ಅದು ದೊಡ್ಡ ಸುದ್ದಿ ಮಾಡಿತು. ಶುಕ್ರವಾರ ಒಂದು ಟೀಸರ್ ಬಂತು, ಅದೂ ಆ ಸುದ್ದಿ ಮತ್ತಷ್ಟು ಜಾಸ್ತಿಯಾಯ್ತು. ಇದಕ್ಕೆಲ್ಲ ಕಾರಣ 'ಏಕ್ ಲವ್ ಯಾ' ಸಿನಿಮಾ.

  ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಿದೆ. ಟೀಸರ್ ನಲ್ಲಿ ರಚಿತಾ ರಾಮ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಗರೇಟ್ ಸೇದಿರುವ ರಚಿತಾ ರಾಮ್, ನಾಯಕ ರಾಣಾ ಜೊತೆಗೆ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಿದ್ದಾರೆ.

  'ಐ ಲವ್ ಯೂ' ಸಿನಿಮಾದ ಹಾಡು ಬಿಟ್ಟರೆ, ರಚಿತಾ ಈ ಹಿಂದೆ ಇಷ್ಟೊಂದು ಬೋಲ್ಡ್ ಪಾತ್ರಗಳನ್ನು ಆಯ್ಕೆ ಮಾಡಿರಲಿಲ್ಲ. ಹೀಗಾಗಿ, ಅವರು ಏಕೆ ಇಷ್ಟೊಂದು ಗ್ಲಾಮರ್ ಪಾತ್ರದಲ್ಲಿ ನಟಿಸಿದರು ಎನ್ನುವ ಪ್ರಶ್ನೆ ಕೆಲವರಿಗೆ ಮೂಡಿದೆ.

  'ಏಕ್ ಲವ್ ಯಾ'ದಲ್ಲಿ ರಾಣಾ ಜೊತೆ ರಚಿತಾ ಲಿಪ್ ಕಿಸ್'ಏಕ್ ಲವ್ ಯಾ'ದಲ್ಲಿ ರಾಣಾ ಜೊತೆ ರಚಿತಾ ಲಿಪ್ ಕಿಸ್

  ತಮ್ಮ ಪಾತ್ರದ ಆಯ್ಕೆ ಬಗ್ಗೆ, ಟೀಸರ್ ನಲ್ಲಿ ನೋಡುತ್ತಿರುವ ದೃಶ್ಯಗಳ ಬಗ್ಗೆ ರಚಿತಾ ರಾಮ್ ಇದೀಗ ಮಾತನಾಡಿದ್ದಾರೆ. ನಿನ್ನೆ ನಡೆದ ಚಿತ್ರದ ಸುದ್ದಿಗೋಷ್ಟಿ ಕಾರ್ಯಕ್ರಮದಲ್ಲಿ ರಚಿತಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  ಪ್ರೇಮ್ ಜೊತೆ ಕೆಲಸ ಮಾಡುವ ಆಸೆ ಇತ್ತು

  ಪ್ರೇಮ್ ಜೊತೆ ಕೆಲಸ ಮಾಡುವ ಆಸೆ ಇತ್ತು

  ನಿರ್ದೇಶಕ ಪ್ರೇಮ್ ಜೊತೆಗೆ ಒಂದು ಸಿನಿಮಾದಲ್ಲಿಯಾದರೂ, ಕೆಲಸ ಮಾಡಬೇಕು ಎನ್ನುವುದು ರಚಿತಾ ರಾಮ್ ಆಸೆಯಾಗಿತಂತೆ. ಈ ಪಾತ್ರ ಆಯ್ಕೆ ಮಾಡಲು ಇದೇ ಮೊದಲ ಕಾರಣ ಎಂದು ರಚಿತಾ ತಿಳಿಸಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಪ್ರೇಮ್ ನಟಿಯರಿಗೆ ಕೊಡುವ ಪ್ರಾಮುಖ್ಯತೆ ರಚಿತಾಗೆ ತುಂಬ ಇಷ್ಟವಂತೆ. 'ಜೋಗಿ' ಚಿತ್ರವನ್ನು ಅವರು ಏಳು ಬಾರಿ ನೋಡಿದ್ದಾರಂತೆ.

  ಇದು ತುಂಬ ತುಂಬ ವಿಭಿನ್ನ ಪಾತ್ರ

  ಇದು ತುಂಬ ತುಂಬ ವಿಭಿನ್ನ ಪಾತ್ರ

  ರಚಿತಾ ರಾಮ್ ಮೊದಲ ಬಾರಿಗೆ ಇಂತಹ ವಿಭಿನ್ನ ಪಾತ್ರವನ್ನು ಪ್ರಯತ್ನ ಮಾಡುತ್ತಿದ್ದಾರಂತೆ. ನನ್ನ ಪಾತ್ರ ಬಹಳ ಇಷ್ಟ ಆಯ್ತು ಹಾಗಾಗಿ ಸಿನಿಮಾ ಒಪ್ಪಿಕೊಂಡೆ ಎಂದು ರಚಿತಾ ಹೇಳಿದ್ದಾರೆ. ಪಾತ್ರಕ್ಕಾಗಿ ಮೊದಲ ಬಾರಿಗೆ ಸ್ಮೋಕ್ ಮಾಡಿದ್ದೇನೆ. ದೃಶ್ಯಗಳು ತುಂಬ ಚೆನ್ನಾಗಿ ಬಂದಿವೆ. ಟೀಸರ್ ನಲ್ಲಿ ಒಂದು ಜಲಕ್ ಬಿಟ್ಟದ್ದು, ಸಿನಿಮಾದಲ್ಲಿ ಇನ್ನು ತುಂಬ ಇದೆ ಎಂದಿದ್ದಾರೆ ರಚಿತಾ.

  ಸಿಗರೇಟು ಸೇದುತ್ತಿರುವ ರಚಿತಾ ರಾಮ್ ಫೋಟೋ ವೈರಲ್ಸಿಗರೇಟು ಸೇದುತ್ತಿರುವ ರಚಿತಾ ರಾಮ್ ಫೋಟೋ ವೈರಲ್

  ಪಾಸಿಟಿವ್ ಆದ್ರು, ನೆಗೆಟಿವ್ ಆದ್ರು ಸುದ್ದಿ ಸುದ್ದಿನೇ

  ಪಾಸಿಟಿವ್ ಆದ್ರು, ನೆಗೆಟಿವ್ ಆದ್ರು ಸುದ್ದಿ ಸುದ್ದಿನೇ

  ಟೀಸರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಟ್ರೋಲ್ ಗಳ ಬಗ್ಗೆ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ''ಪಾಸಿಟಿವ್ ಆದ್ರು, ನೆಗೆಟಿವ್ ಆದ್ರು ಸುದ್ದಿ ಸುದ್ದಿನೇ. ನ್ಯೂಸ್ ಆಗಬೇಕು.. ಸದ್ದು ಮಾಡಬೇಕು. ನಾನು ಟ್ರೋಲ್ ಗಳನ್ನು ನೋಡಿದ್ದೇನೆ. ಒಬ್ಬ ವ್ಯಕ್ತಿ ಬಗ್ಗೆ ಒಳ್ಳೆಯದನ್ನು ಹೇಳೋಣ''. ಎಂದು ರಚಿತಾ ಪ್ರತಿಕ್ರಿಯಿಸಿದ್ದಾರೆ.

  ಅಭಿಮಾನಿಗಳ ಬಗ್ಗೆ ರಚಿತಾ ಮಾತು

  ಅಭಿಮಾನಿಗಳ ಬಗ್ಗೆ ರಚಿತಾ ಮಾತು

  ''ಜೀವನದಲ್ಲಿ ಯಾರೇ ಆಗಲಿ ಒಂದೇ ಸಲ ಎಡವುತ್ತಾರೆ. ನಾನು ಸಿನಿಮಾದಲ್ಲಿ ಒಂದು ಕಂಟೆಂಟ್ ಇರುವ ಕಾರಣಕ್ಕೆ ಈ ಪಾತ್ರ ಒಪ್ಪಿಕೊಂಡೆ. ಇಂತಹ ಪಾತ್ರ ಮಾಡಬೇಡಿ ಅಂತ ಅಭಿಮಾನಿಗಳು ಪ್ರೀತಿಯಿಂದ ಹೇಳುತ್ತಾರೆ. ಆದರೆ, ಸಿನಿಮಾ ನೋಡಿ, ಆ ನಂತರ ಹೇಳಿ. ಅಭಿಮಾನಿಗಳು ಇಲ್ಲದೆ ರಚಿತಾ ಸೊನ್ನೆ.'' ಎಂದು ರಚಿತಾ ಹೇಳಿದ್ದಾರೆ.

  English summary
  Actress Rachitha Ram reaction about 'Ek Love Ya' kannada movie sences. The movie is directed by Prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X