For Quick Alerts
  ALLOW NOTIFICATIONS  
  For Daily Alerts

  ಪ್ರೀತಿಸುವ ಹುಡಗನ ಜೊತೆಗಿನ ಚಿತ್ರ ಹಂಚಿಕೊಂಡ 'ರಾಧಾ-ರಮಣ' ನಟಿ

  |

  'ರಾಧಾ-ರಮಣ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಕಾವ್ಯ ಗೌಡ ತಾವು ಪ್ರೀತಿಸುತ್ತಿರುವ, ಮದುವೆ ಆಗಲಿಚ್ಛಿಸಿರುವ ಹುಡುಗನ ಪರಿಚಯವನ್ನು ಮಾಡಿಸಿದ್ದಾರೆ ಸಾಮಾಜಿಕ ಜಾಲತಾಣದ ಮೂಲಕ.

  ಪ್ರೀತಿಸುವ ಹುಡುಗನ ಫೋಟೋ ಶೇರ್‌ ಮಾಡಿದ ಕಾವ್ಯ ಗೌಡ | Filmibeat Kannada

  ಇನ್‌ಸ್ಟಾಗ್ರಾಂನಲ್ಲಿ ಸರಣಿ ಚಿತ್ರಗಳನ್ನು ಹಂಚಿಕೊಂಡಿರುವ ನಟಿ ಕಾವ್ಯ ಗೌಡ, ತನ್ನ ಪ್ರೀತಿಯ ಹುಡುಗನ ಜೊತೆಗೆ ದುಬೈನಲ್ಲಿ ಓಡಾಡುತ್ತಿರುವ, ಫೊಟೊಶೂಟ್ ಮಾಡಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  ಫೊಟೊಗಳ ಜೊತೆಗೆ ಉದ್ದನೆಯ ಪೋಸ್ಟ್ ಸಹ ಹಂಚಿಕೊಂಡಿರುವ ಕಾವ್ಯಾ ಗೌಡ, 'ನಿನ್ನನ್ನು ಜೊತೆಗಾರನನ್ನಾಗಿ ಪಡೆಯಲು ಅದೃಷ್ಟ ಮಾಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

  'ನಿನ್ನಂಥಹಾ ಒಳ್ಳೆಯ ವ್ಯಕ್ತಿಯನ್ನು ನನ್ನ ಜೀವನದಲ್ಲಿ ಹಿಂದೆಂದೂ ಭೇಟಿಯಾಗಿಲ್ಲ. ನೀನು ತೋರುವ ಪ್ರೀತಿ, ಕರುಣೆ, ಭದ್ರತೆಯ ಭಾವ ನನ್ನನ್ನು ಮತ್ರಮುಗ್ಧಗೊಳಿಸಿವೆ. ನಾನು ಕಣ್ಣು ಮುಚ್ಚಿ ಬೇಕಾದರೂ ನಿನ್ನನ್ನು ನಂಬಬಲ್ಲೆ. ನನ್ನ ಜೀವನವನ್ನು ಸುಂದರಗೊಳಿಸಿದ ನಿನಗೆ ಧನ್ಯವಾದಗಳು' ಎಂದು ಬರೆದಿದ್ದಾರೆ ಕಾವ್ಯ ಗೌಡ.

  'ನಿನ್ನೊಂದಿಗೆ ಜೀವನ ಸಾಗಿಸುವ ಕ್ಷಣಕ್ಕಾಗಿ ನಾನು ಕಾತರದಿಂದ ಕಾಯುತ್ತಿದ್ದೇನೆ. ನಿನ್ನ ಜೊತೆ ಕಳೆವ ದಿನಗಳ ನನ್ನ ಜೀವನದ ಅತ್ಯುತ್ತಮ ದಿನಗಳು. ನನ್ನ ಪ್ರೀತಿಯ ಮುದ್ದು ಮಾ..' ಎಂದಿದ್ದಾರೆ ನಟಿ ಕಾವ್ಯಾ.

  2015 ರಲ್ಲಿ 'ಶುಭ ವಿವಾಹ' ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಕಾವ್ಯ ಗೌಡ ಆ ನಂತರ 'ರಾಧಾ ರಮಣ', 'ಗಾಂಧಾರಿ' ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಬಕಾಸುರ' ಹೆಸರಿನ ಸಿನಿಮಾದಲ್ಲಿಯೂ ನಟಿಸಿದ್ದಾರೆ.

  English summary
  Serial actress Kavya Gowda revels her boyfriend photo. She posted her photo with her boy friend and said she is waiting for start journey with him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X