»   » ರಾಧಾ ರಮಣ ನಾಯಕನಿಗೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಬೇಡಿಕೆ

ರಾಧಾ ರಮಣ ನಾಯಕನಿಗೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಬೇಡಿಕೆ

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ರಾಧಾ ರಮಣ ಧಾರಾವಾಹಿಗೆ ಸಾಕಷ್ಟು ಜನರು ಫಿದಾ ಆಗಿದ್ದಾರೆ. ಸೀರಿಯಲ್ ನ ನಾಯಕ ಹಾಗೂ ನಾಯಕಿಯ ಜೋಡಿ ಕಂಡು ನಮಗೂ ಇಂಥವರೇ ಸಿಕ್ಕರೆ ಚಂದ ಅನ್ನುವ ಮಾತುಗಳನ್ನೂ ಹೇಳಿದ್ದಾರೆ.

ಕಿರುತೆರೆಯಲ್ಲಿ ಭಾರಿ ಬೇಡಿಕೆಯನ್ನ ಪಡೆದುಕೊಂಡಿರುವ ರಮಣ್ ಈಗ ಸ್ಯಾಂಡಲ್ ವುಡ್ ಅಂಗಳದಲ್ಲೂ ಬೇಡಿಕೆಯನ್ನ ಉಳಿಸಿಕೊಂಡಿದ್ದಾರೆ. ಈ ಹಿಂದೆಯೇ ಪ್ರಿಯಾಮಣಿ ಜೊತೆ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದ ಸ್ಕಂದ ಅಶೋಕ್ ಅವರಿಗೆ ಸದ್ಯ ನಾಯಕನಾಗಿ ಕಾಣಿಸಿಕೊಳ್ಳಲು ಆಫರ್ ಗಳು ಹೆಚ್ಚಾಗಿವೆ.

ರಾಧಿಕಾ ಕುಮಾರಸ್ವಾಮಿ ಈಗ 'ಭೈರಾ ದೇವಿ': ಸದ್ದಿಲ್ಲದೆ ಮುಗಿದಿದೆ ಮುಹೂರ್ತ

ಈಗಾಗಲೇ ಎರಡು ಚಿತ್ರಗಳಲ್ಲಿ ಅಭಿನಯಿಸಿರುವ ಸ್ಕಂದ ಅಶೋಕ್ ಸದ್ದಿಲ್ಲದೆ ಮತ್ತೊಂದು ಸಿನಿಮಾಗೆ ನಾಯಕನಾಗಿದ್ದಾರೆ. ಕಿರುತೆರೆಯಲ್ಲಿ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲಿಯೂ ಸ್ಟಾರ್ ನಾಯಕಿಯರ ಜೊತೆ ಆಕ್ಟ್ ಮಾಡುತ್ತಿದ್ದಾರೆ. ಹಾಗಾದರೆ ಸ್ಕಂದ ಅಶೋಕ್ ಅಭಿನಯಿಸಿರುವ ಮತ್ತು ಅಭಿನಯಿಸುತ್ತಿರುವ ಚಿತ್ರಗಳು ಯಾವುವು ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ರಾಧಾ ರಮಣ ನಾಯಕನಿಗೆ ಬೇಡಿಕೆ

ರಾಧ ರಮಣ ಧಾರಾವಾಹಿ ಮೂಲಕ ಪ್ರಖ್ಯಾತಿ ಪಡೆದಿರುವ ನಾಯಕನ ಹೆಸರು ಸ್ಕಂದ ಅಶೋಕ್. ಈಗಾಗಲೇ ಪ್ರಿಯಾಮಣಿ ಜೊತೆಯಲ್ಲಿ ಚಾರುಲತಾ ಚಿತ್ರದಲ್ಲಿ ಸ್ಕಂದ ಹೀರೋ ಆಗಿ ಮತ್ತು ಯು ಟರ್ನ್ ಚಿತ್ರದಲ್ಲಿಯೂ ಅಭಿನಯಿಸಿದ್ದರು.

ಸಿನಿಮಾಗಳಲ್ಲಿ ಅಭಿನಯ

ಸ್ಕಂದ ಅಶೋಕ್ ಸದ್ಯ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಟಿ ಎಸ್ ನಾಗಾಭರಣ' ನಿರ್ದೇಶನದ ಕಾನೂರಾಯಣ ಚಿತ್ರದಲ್ಲಿ ರೈತನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುಂಚೆಯೇ ಸಚಿನಾ ಹೆಗ್ಗಾರ್ ಜೊತೆಯಲ್ಲಿ 'ದಿಬ್ಬರ ದಿಂಡಿ' ಆಲ್ಬಂ ಸಾಂಗ್ ನಲ್ಲಿ ಸ್ಕಂದ ಹೆಜ್ಜೆ ಹಾಕಿದ್ದರು.

ರಾಧಿಕಾ ಕುಮಾರಸ್ವಾಮಿ ಜೊತೆ ಹೊಸ ಚಿತ್ರ

ರಾಧಿಕಾ ಕುಮಾರಸ್ವಾಮಿ ಅಭಿನಯಿಸಲಿರುವ 'ಭೈರಾ ದೇವಿ' ಚಿತ್ರದಲ್ಲಿ ಸ್ಕಂದ ಅಶೋಕ್ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಮಹೂರ್ತ ಮುಗಿದಿದ್ದು ಯಾವ ಪಾತ್ರದಲ್ಲಿ ಸ್ಕಂದ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ತಿಳಿಸಿಲ್ಲ. 'ಆರ್ ಎಕ್ಸ್ ಸೂರಿ' ಚಿತ್ರದ ನಿರ್ದೇಶಕ ಶ್ರೀಜೈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕಿರುತೆರೆ-ಬೆಳ್ಳಿತೆರೆ ಎರಡರಲ್ಲೂ ಅಭಿನಯ

ರಾಧಾ-ರಮಣ್ ಧಾರಾವಾಹಿಯಲ್ಲಿ ಸ್ಕಂದ ಅಭಿನಯ ನೋಡಿರುವ ನಿರ್ದೇಶಕರು ಚಿತ್ರಕ್ಕೆ ನಾಯಕನಾಗಿ ಅಭಿನಯಿಸಲು ಆಫರ್ ಗಳನ್ನ ನೀಡುತ್ತಿದ್ದಾರೆ. ಸದ್ಯ ಎರಡು ಚಿತ್ರಗಳಲ್ಲಿ ಬ್ಯುಸಿ ಆಗಿರುವ ನಾಯಕ ಮುಂದೆ ಇನ್ನು ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದಂತು ನಿಜ.

English summary
Radha Ramana serial fame actor Skanda Ashok is busy in films, Skanda is acting in two Kannada films, Skanda Ashok acting along with Radhika Kumaraswamy in Bhairadevi movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada