'ರಾಧಾ ರಮಣ' ಧಾರಾವಾಹಿಯ ನಟನಿಗೆ ಕೂಡಿ ಬಂತು ಕಂಕಣಭಾಗ್ಯ
Recommended Video

ರಮಣ್ ಈ ಹೆಸರು ಸದ್ಯ ಕಿರುತೆರೆಯಲ್ಲಿ ಭಾರಿ ಪ್ರಖ್ಯಾತಿ ಪಡೆದುಕೊಂಡಿದೆ. ಸಾಕಷ್ಟು ಅಭಿಮಾನಿಗಳನ್ನು ಧಾರಾವಾಹಿಯ ಅಭಿನಯದ ಮೂಲಕವೇ ಗಿಟ್ಟಿಸಿಕೊಂಡಿರುವ ನಟ ಸ್ಕಂದ ಅಶೋಕ್.
ರೇಟಿಂಗ್ ನಲ್ಲಿ ಟಾಪ್ ಲೀಸ್ಟ್ ನಲ್ಲಿ ಸೇರಿಕೊಂಡಿರುವ ರಾಧ-ರಮಣ ಧಾರಾವಾಹಿಯ ನಾಯಕ ನಟ ಸ್ಕಂದ ಅಶೋಕ್ ಆನ್ ಸ್ಕ್ರೀನ್ ಸ್ಟೈಲ್ ಹಾಗೂ ಮಾತನಾಡುವ ಶೈಲಿಯಿಂದಲೇ ಮೆಚ್ಚಿಕೊಂಡಿದ್ದ ಅವರ ಮಹಿಳಾ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಇದೆ. ಅದೆನಪ್ಪಾ ಅಂದರೆ ರಮಣ್ ಮದುವೆ ಆಗುತ್ತಿದ್ದಾರೆ.
ಅಂದರೆ ನಿಜ ಜೀವನದಲ್ಲಿ ಒಂಟಿ ಆಗಿದ್ದ ಸ್ಕಂದ ಅಶೋಕ್ ಜಂಟಿ ಆಗುವ ಸಮಯ ಬಂದಿದೆ. ತಮ್ಮ ಬಹುದಿನದ ಗೆಳತಿ ಹಾಗೂ ಪ್ರೇಯಸಿಯ ಜೊತೆ ರಮಣ್ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ. ಹಾಗಾದರೆ ಮದುವೆ ಯಾವಾಗ? ಸ್ಕಂದ ಅಶೋಕ್ ಪ್ರೀತಿ ಮಾಡಿದ ಹುಡುಗಿ ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ

ರಾಧ ರಮಣ ನಾಯಕನಿಗೆ ಮದುವೆ
ರಾಧ ರಮಣ ಧಾರಾವಾಹಿಯ ನಾಯಕ ನಟ ಸ್ಕಂದ ಅಶೋಕ್ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಾಲ್ಕು ವರ್ಷದಿಂದ ಪ್ರೀತಿ ಮಾಡುತ್ತಿದ್ದ ಪ್ರೇಯಸಿಯನ್ನೇ ಮದುವೆ ಆಗುತ್ತಿದ್ದಾರೆ.

ಶಿಕಾ ಪ್ರಸಾದ್ ಜೊತೆ ರಮಣ
ರಾಧ ರಮಣ ಧಾರಾವಾಹಿ ಖ್ಯಾತಿಯ ಸ್ಕಂದ ಮದುವೆ ಆಗುತ್ತಿರುವ ಹುಡುಗಿ ಹೆಸರು ಶಿಕಾ ಪ್ರಸಾದ್. ಸದ್ಯ ಫ್ಯಾಷನ್ ಡಿಸೈನರ್ ಆಗಿರುವ ಶಿಕಾ ಅವರನ್ನ ಸ್ಕಂದ ನಾಲ್ಕು ವರೆ ವರ್ಷದಿಂದ ಪ್ರೀತಿ ಮಾಡುತ್ತಿದ್ದಾರಂತೆ.

ಮೇ 30 ರಂದು ಮದುವೆ ಸಂಭ್ರಮ
ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿರುವ ಶಿಕಾ ಹಾಗೂ ಸ್ಕಂದ ಇದೇ ತಿಂಗಳ ಅಂದರೆ ಮೇ 30 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಲಿದೆ.

ಹಲವು ಭಾಷೆಗಳಲ್ಲಿ ಅಭಿನಯಿಸಿರುವ ನಟ
ಸ್ಕಂದ ಅಶೋಕ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಹಿಂದಿ, ಮಲೆಯಾಳಂ ಕನ್ನಡ ಸೇರಿದಂತೆ ತೆಲುಗು , ತಮಿಳು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಅದರ ಜೊತೆಯಲ್ಲಿ ವಿಡಿಯೋ ಆಲ್ಬಂ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











