'ನಿಮ್ಮ ಪ್ರೀತಿ ಸಾಬೀತು ಪಡಿಸಲು ಬಟ್ಟೆ ಬಿಚ್ಚಬೇಡಿ'- ನಟಿ ಕಾವ್ಯಗೌಡ
''ಡೇಟಿಂಗ್‌ಗೆ ಹೋಗುವುದು ಸರಿ, ಆದರೆ ಮದುವೆಗೂ ಮುಂಚೆ ಮಂಚಕ್ಕೆ ಹೋಗಬೇಡಿ....ನಿಮ್ಮ ಸುರಕ್ಷತಾಗಾಗಿ ಪ್ಯಾಡ್‌ಗಳನ್ನು ಖರೀದಿಸುವ ಹುಡುಗನನ್ನು ಪಡೆಯಿರಿ, ಕಾಂಡೋಮ್ ಖರೀದಿಸುವ ಹುಡುಗನನ್ನಲ್ಲ..' ಹೀಗೆಂದು ಕಿರುತೆರೆಯ ಖ್ಯಾತ ನಟಿ ಕಾವ್ಯಗೌಡ ತಮ್ಮ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಮಹಿಳೆಯರಿಗೆ ತೋರುತ್ತಿರುವ ಅಗೌರವಗಳ ಕುರಿತು ಧ್ವನಿ ಎತ್ತಿರುವ ಕಾವ್ಯಗೌಡ 'ಮಹಿಳೆ ಎಂದರೆ ಯಾರು? ಯುವತಿಯರು ಎಚ್ಚರ ವಹಿಸಬೇಕಾಗಿರುವುದು ಹೇಗೆ ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರೀತಿ ಸಾಬೀತು ಪಡಿಸಲು ಬಟ್ಟೆ ಬಿಚ್ಚಬೇಡಿ
''ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ನಿಮ್ಮ ಬಟ್ಟೆಗಳನ್ನು ಬಿಚ್ಚಬೇಡಿ. ಡೇಟಿಂಗ್ ಹೋಗುವುದು ಸರಿ, ಆದರೆ ಮದುವೆಗೂ ಮುಂಚೆ ಮಂಚಕ್ಕೆ ಹೋಗಬೇಡಿ. ನಿಮ್ಮ ಸುರಕ್ಷತಾಗಾಗಿ ಪ್ಯಾಡ್‌ಗಳನ್ನು ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂಡೋಮ್ ಖರೀದಿಸುವ ಹುಡುಗನನ್ನಲ್ಲ'' ಎಂದು ಯುವತಿಯರಿಗೆ ಸಂದೇಶ ರವಾನಿಸಿದ್ದಾರೆ.

ನಿಮ್ಮ ಹೃದಯ ಆರಿಸಿಕೊಳ್ಳುವ ಹುಡುಗನನ್ನು ಪಡೆಯಿರಿ
''ಮನೆಗೆ ಕರೆದುಕೊಂಡು ಹೋಗುವ ಹುಡುಗನನ್ನು ಪಡೆಯಿರಿ, ಹೋಟೆಲ್‌ಗೆ ಕರೆದುಕೊಂಡು ಹೋಗುವವನಲ್ಲ. ನಿಮ್ಮ ಮುಟ್ಟಿನ ನೋವಿನ ಬಗ್ಗೆ ಕೇಳುವ ಹುಡುಗನನ್ನು ಪಡೆಯಿರಿ, ನಿಮ್ಮ ನಗ್ನತೆಯನ್ನಲ್ಲ. ನಿಮ್ಮ ಆತ್ಮವನ್ನು ಮತ್ತು ನಿಮ್ಮ ಹೃದಯವನ್ನು ಆರಿಸಿಕೊಳ್ಳುವ ಹುಡುಗನನ್ನು ಪಡೆಯಿರಿ, ನಿಮ್ಮ ದೇಹ ಬಯಸುವವನ್ನಲ್ಲ'' ಎಂದು ಕಾವ್ಯಗೌಡ ಹೇಳಿದ್ದಾರೆ.

ನಿಜವಾದ ಪುರುಷ ಮಹಿಳೆಯನ್ನು ನೋಯಿಸುವುದಿಲ್ಲ
''ಗೌರವವು ಪ್ರೀತಿಯ ಅತ್ಯುತ್ತಮ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ನಿಜವಾದ ಪುರುಷ ಎಂದಿಗೂ ಮಹಿಳೆಯನ್ನು ನೋಯಿಸುವುದಿಲ್ಲ. ಅವಳು ನಿಮಗೆ ಅಡುಗೆ ಮಾಡಲು ಅಥವಾ ನಿಮ್ಮ ಬಟ್ಟೆ ಒಗೆಯುವ ಗೃಹಿಣಿ ಮಾತ್ರವಲ್ಲ. ನಿಮ್ಮ ಕುಟುಂಬದ ಸಕಲವನ್ನು ಸೂಕ್ತವಾಗಿ ನಿಭಾಯಿಸಿ, ನಿಮ್ಮ ಕುಟುಂಬವನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಮಹಿಳೆ. ಮಹಿಳೆಯರಿಗೆ ಗೌರವ ತೋರಿಸಬೇಕಾದದು ಪುರುಷನ ಬಹುದೊಡ್ಡ ಕೊಡುಗೆಯಾಗಿದೆ'' ಎಂದು ನಟಿ ಕಾವ್ಯ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Recommended Video

ಕಾವ್ಯ ಮಾತಿಗೆ ಬೆಂಬಲ
ನಟಿ ಕಾವ್ಯಗೌಡ ಅವರ ಈ ಮಾತಿಗೆ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಕಾವ್ಯ ಅವರ ಮಾತು ಅಕ್ಷರಃ ಸತ್ಯವಾಗಿದೆ, ಬಹಳ ಚೆನ್ನಾಗಿ, ಅರ್ಥಗರ್ಭಿತವಾಗಿ ಹೇಳಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











