'ಕುಸ್ತಿ' ವಿವಾದಕ್ಕೆ ಬ್ರೇಕ್, ಕಿಚ್ಚನ ಮಾತಿಗೆ ಬೆಲೆ ಕೊಟ್ಟ ಮಣಿಕಂಠ

By Bharath Kumar

ದುನಿಯಾ ವಿಜಯ್ ಅಭಿನಯದ 'ಕುಸ್ತಿ' ಮತ್ತು ಸುದೀಪ್ ಅಭಿನಯಿಸುತ್ತಿರುವ 'ಪೈಲ್ವಾನ್' ಚಿತ್ರದ ನಡುವಿನ ವಿವಾದಕ್ಕೆ ವಿಜಿ ಬ್ರೇಕ್ ಹಾಕಿದ್ದಾರೆ. ಮನೆಬಿಟ್ಟು ಹೋಗಿದ್ದ ಹುಡುಗ ಮತ್ತೆ ಮನೆ ಸೇರಿರುವ ವಿಷ್ಯವನ್ನ ಸುದೀಪ್ ಹಂಚಿಕೊಂಡಿದ್ದಾರೆ.

ಕಾಜಲ್ ಅಗರ್ ವಾಲ್ ಹುಟ್ಟುಹಬ್ಬಕ್ಕೆ ನಿರ್ದೇಶಕ ರಮೇಶ್ ಅರವಿಂದ್ ವಿಶೇಷವಾದ ಉಡುಗೊರೆ ನೀಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಟ ಸತೀಶ್ ನೀನಾಸಂ ಅವರ ಬರ್ತಡೇ ನಾಳೆಯಿದ್ದು, ಅವರು ಕೂಡ ಭರ್ಜರಿ ಗಿಫ್ಟ್ ನೀಡುವ ಬಗ್ಗೆ ತಿಳಿಸಿದ್ದಾರೆ.

ನವರಸ ನಾಯಕ ಜಗ್ಗೇಶ್ ಅವರು ತಮ್ಮ ಹಳೆಯ ರಹಸ್ಯವೊಂದನ್ನ ಬಹಿರಂಗಪಡಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಸಂದೇಶವೊಂದನ್ನ ನೀಡಿ ಗಮನ ಸೆಳೆದಿದ್ದಾರೆ. ಇದೆಲ್ಲ ಇಂದಿನ ಟ್ವಿಟ್ಟರ್ ಲೋಕದಲ್ಲಿ ನಮ್ಮ ಸಿನಿತಾರೆಯರು ಮಾಡಿರುವ ಟ್ವೀಟ್ ಗಳು. ಹಾಗಿದ್ರೆ, ಯಾರು ಏನು ಟ್ವೀಟ್ ಮಾಡಿದ್ದಾರೆ ಎಂದು ಮುಂದೆ ನೋಡಿ.....

ಕಾಣೆಯಾಗಿದ್ದ ಹುಡುಗ ಪತ್ತೆ

ಮನೆಯಿಂದ ಕಾಣೆಯಾಗಿದ್ದ ಮಣಿಕಂಠ ಎಂಬ ಹುಡುಗ ಮತ್ತೆ ಮನೆ ಸೇರಿದ್ದಾನೆ ಎಂಬ ಸುದ್ದಿಯನ್ನ ಸುದೀಪ್ ಹಂಚಿಕೊಂಡಿದ್ದಾರೆ. ಈ ಹುಡುಗ ಮನೆಯವರ ಮೇಲೆ ಕೋಪ ಮಾಡಿಕೊಂಡು ಮನೆಬಿಟ್ಟು ಹೋಗಿದ್ದ ನಂತರ ಸುದೀಪ್ ಅವರ ಈ ಹುಡುಗನಿಗೆ ಮರಳಿ ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಕೊನೆಗೂ ಮಣಿಕಂಠ ಮನೆ ಸೇರಿದ್ದಾನೆ.

ಜಗ್ಗೇಶ್ ರಹಸ್ಯ ಬಯಲು

ಅದೊಂದು ಕಾಲವಿತ್ತು, ಜಗ್ಗೇಶ್ ಅವರ ತುಂಬಾ ಸಿಗರೇಟ್ ಸೇದುತ್ತಿದ್ದರಂತೆ. ಈಗ ಆ ಅಭ್ಯಾಸವಿಲ್ಲ ಬಿಡಿ. 2002 ರಲ್ಲಿ ಕ್ಲಿಕ್ಕಿಸಿದ ಫೋಟೋವೊಂದನ್ನ ಶೇರ್ ಮಾಡಿರುವ ಜಗ್ಗೇಶ್ ತಮ್ಮ ಹಳೆಯ ನೆನಪೊಂದನ್ನ ಹಂಚಿಕೊಂಡಿದ್ದಾರೆ.

ಸುದೀಪ್ ಬಗ್ಗೆ ಗೌರವವಿದೆ

ದುನಿಯಾ ವಿಜಯ್ ಅಭಿನಯದ 'ಕುಸ್ತಿ' ಟೀಸರ್ ರಿಲೀಸ್ ಆದಾಗನಿಂದಲೂ ಕಿಚ್ಚನ ಫ್ಯಾನ್ಸ್ ಗರಂ ಆಗಿದ್ದರು. 'ಕುಸ್ತಿ' ಟೀಸರ್ ನಲ್ಲಿ ಸುದೀಪ್ ಗೆ ಟಾಂಗ್ ಕೊಡಲಾಗಿದೆ. ಕಿಚ್ಚನ 'ಪೈಲ್ವಾನ್' ಚಿತ್ರವನ್ನ ಅಣುಕಿಸಲಾಗಿದೆ ಸುದೀಪ್ ಅಭಿಮಾನಿಗಳು ಎಂದೆಲ್ಲ ಬೇಸರ, ಆಕ್ರೋಶ ಹೊರಹಾಕಿದ್ದರು. ಈ ವಿವಾದಕ್ಕೆ ಸ್ವತಃ ದುನಿಯಾ ವಿಜಯ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ವಿವಾದಕ್ಕೆ ಅಂತ್ಯವಾಡಿದ್ದಾರೆ.

ಉಪ್ಪಿಯ ಸಂದೇಶ

''ಮಾರ್ಗವು ನೇರವಾಗಿರುವುದಿಲ್ಲ. ಅದು ಸುರಳಿಯಾಗಿರುತ್ತದೆ. ನಿಮ್ಮ ನಿರಂತರವಾಗಿ ಮಾರ್ಗದಲ್ಲಿ ನೀವು ಅರ್ಥಮಾಡಿಕೊಂಡ ಮತ್ತು ಆಳವಾದ ಸತ್ಯಗಳನ್ನ ನೋಡುತ್ತೀರಿ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ಕಾಜಲ್ ಬರ್ತಡೇಗೆ ವಿಶ್ ಮಾಡಿದ ರಮೇಶ್

ರಮೇಶ್ ಅರವಿಂದ್ ಹಿಂದಿಯ 'ಕ್ವೀನ್' ಸಿನಿಮಾವನ್ನು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ರಿಮೇಕ್ ಮಾಡುತ್ತಿರುವ ವಿಷಯ ಎಲ್ಲರಿಗೂ ಇಳಿದಿದೆ. ತಮಿಳಿನಲ್ಲಿ 'ಪ್ಯಾರಿಸ್ ಪ್ಯಾರಿಸ್' ಹೆಸರಿನಲ್ಲಿ ಬರುತ್ತಿರುವ ಈ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಇಂದು ಕಾಜಲ್ ಬರ್ತಡೇ ವಿಶೇಷವಾಗಿ ಆ ಚಿತ್ರದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

ಸತೀಶ್ ನೀನಾಸಂ ಕಡೆಯಿಂದ ಗಿಫ್ಟ್

ಜೂನ್ 20 ರಂದು ಸತೀಶ್ ನೀನಾಸಂ ಅವರ ಹುಟ್ಟುಹಬ್ಬ. ಈ ವಿಶೇಷವಾಗಿ ಸತೀಶ್ ಅಭಿನಯದ ಅಯೋಗ್ಯ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ವಿಷ್ಯವನ್ನ ಸತೀಶ್ ನೀನಾಸಂ ಅವರೇ ತಿಳಿಸಿದ್ದಾರೆ.

More from Filmibeat

English summary
Tweet of the day - sathish Ninasam, sudeep, jaggesh, ramesh aravind, duniya vijay, upendra, What did they tweet today (june 19th)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X