ಗಾಯಕಿ ವಾಣಿ ಹರಿಕೃಷ್ಣ ಆರೋಪಕ್ಕೆ 'ರಾಂಧವ' ನಿರ್ದೇಶಕ ಸುನೀಲ್ ಸ್ಪಷ್ಟನೆ
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಪತ್ನಿ ವಾಣಿ ಹರಿಕೃಷ್ಣ ಕೆಲವು ಚಿತ್ರಗಳಿಂದ ತಮ್ಮ ಹಾಡನ್ನು ಕಿತ್ತು ಹಾಕಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇತ್ತೀಚಿಗೆ ಕುರುಕ್ಷೇತ್ರ ಮತ್ತು ರಾಂಧವ ಚಿತ್ರದ ಹಾಡಿಗೆ ವಾಣಿ ಅವರು ಕಂಠದಾನ ಮಾಡಿದ್ರು. ಆದ್ರೆ ವಾಣಿ ಹಾಡಿದ ಹಾಡನ್ನು ಬದಲಾಯಿಸಿ ಬೇರೆ ಸಂಗೀತಗಾರರ ಬಳಿ ಹಾಡಿಸಿದ್ದಾರಂತೆ.
ಈ ಬಗ್ಗೆ ವಾಣಿ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳಿಗೆ ಹಾಡಿದ ಹಾಡುಗಳನ್ನು ತೆಗೆಸಿಹಾಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದೆ ತಿಂಗಳು 15ಕ್ಕೆ ರಿಲೀಸ್ ಗೆ ರೆಡಿಯಾಗಿರುವ ರಾಂಧವ ಚಿತ್ರದ ಹಾಡನ್ನು ಬದಲಾಯಿಸಿರುವ ಬಗ್ಗೆ ನಿರ್ದೇಶಕ ಸ್ವಷ್ಟಪಡಿಸಿದ್ದಾರೆ.
ಫಿಲ್ಮಿ ಬೀಟ್ ಕನ್ನಡ ಜೊತೆ ಮಾತನಾಡಿದ ಸುನೀಲ್ "ವಾಣಿ ಅವರು ಖ್ಯಾತ ಗಾಯಕಿ. ಅವರು ಚೆನ್ನಾಗಿ ಹಾಡಿಲ್ಲ ಎಂದು ಬದಲಾಯಿಸಿಲ್ಲ. ನಾಯಕಿಯ ಧ್ವನಿಗೂ ಮತ್ತು ವಾಣಿ ಹರಿಕೃಷ್ಣ ಅವರ ಧ್ವನಿಗೂ ಸಿಂಕ್ ಆಗುತ್ತಿರಲಿಲ್ಲ. ಚಿತ್ರ ಎಡಿಟ್ ಮಾಡುವಾಗ ತುಂಬಾ ವ್ಯತ್ಯಾಸ ಕಾಣುತ್ತಿತ್ತು. ಹಾಗಾಗಿ ಬೇರೆ ಗಾಯಕಿಯ ಬಳಿ ಹಾಡಿಸಿದ್ದೇವೆ ಅಷ್ಟೆ. ಇದರಲ್ಲಿ ಬೇರೆ ಯಾವುದೆ ಉದ್ದೇಶವಿಲ್ಲ" ಎಂದು ಹೇಳಿದ್ದಾರೆ.

ಇನ್ನು ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ ಅವರು ಕೂಡ ಹರಿಕೃಷ್ಣ ಅವರ ಜೊತೆಯೆ ಇದ್ದವರು ಅವರ ಜೊತೆಯೆ ಕೆಲಸ ಮಾಡಿದವರು. ವಾಣಿ ಅವರೆ ಹಾಡಬೇಕೆಂದು ಅವರ ಬಳಿಯೆ ಹಾಡಿಸಿ ನಂತರ ಚಿತ್ರದಿಂದ ಹಾಡನ್ನು ತೆಗೆದು ಹಾಕಿರುವುದು ವಾಣಿ ಅವರಿಗೆ ತುಂಬ ಬೇಸರ ತರಿಸಿದೆ. ಅವರ ಜೊತೆಯೆ ಇದ್ದ ಹುಡುಗ ಸಹ ಹೀಗೆ ಮಾಡಿದ್ದರು ಎನ್ನುವುದು ಅವರ ಅಳಲು.
ಪತಿ ವಿ ಹರಿಕೃಷ್ಣ ಅವರೆ ಖ್ಯಾತ ಸಂಗೀತ ನಿರ್ದೇಶಕ ಆಗಿದ್ದರಿಂದ ವಾಣಿ ಅವರ ಬಳಿ ಹಾಡಿಸುವುದು ಏನು ದೊಡ್ಡ ವಿಚಾರವಾಗಿಲ್ಲ. ಇನ್ನು ವಾಣಿ ಅವರ ಧ್ವನಿ ಕೂಡ ಅದ್ಭುತವಾಗಿದೆ. ಹಾಗಾಗಿ ಹರಿಕೃಷ್ಣ ಯಾಕೆ ಹೀಗಿ ಮಾಡುತ್ತಿದ್ದಾರೆ ಎನ್ನುವುದು ಸದ್ಯ ಎದ್ದಿರುವ ಪ್ರಶ್ನೆ.


Click it and Unblock the Notifications











