»   » ಯಶ್ ಪೊಲಿಟಿಷಿಯನ್ ಆದ್ರೆ ಹೀಗಿರುತ್ತೆ ಕರ್ನಾಟಕ

ಯಶ್ ಪೊಲಿಟಿಷಿಯನ್ ಆದ್ರೆ ಹೀಗಿರುತ್ತೆ ಕರ್ನಾಟಕ

Posted By:
Subscribe to Filmibeat Kannada
ಯಶ್ ಪೊಲಿಟಿಷಿಯನ್ ಆದ್ರೆ ಹೀಗಿರುತ್ತೆ ? | Filmibeat Kannada

ರಾಕಿಂಗ್ ಸ್ಟಾರ್ ನಮ್ಮ ಪರಿಸರ ಚೆನ್ನಾಗಿರಲಿ, ನಮ್ಮನ್ನ ಸ್ಟಾರ್ ಮಾಡಿದ ಜನರು ಸುಖವಾಗಿ ಬದುಕಲಿ ಎನ್ನುವ ಉದ್ದೇಶದಿಂದ ಯಶೋಮಾರ್ಗ ಎನ್ನುವ ಸಂಸ್ಥೆಯನ್ನ ಹುಟ್ಟುಹಾಕಿದರು. ಯಶ್ ಯಶೋಮಾರ್ಗ ಶುರು ಮಾಡಿದ್ದಾಗಲೇ ರಾಜಕೀಯ ಕಣಕ್ಕೆ ಇಳಿಯಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಅದಕ್ಕೆ ಇಷ್ಟೆಲ್ಲಾ ತಯಾರಿ ಎನ್ನುವ ಮಾತುಗಳು ಕೇಳಿ ಬಂದಿತ್ತು.

ಆದರೆ ಯಶ್ ಪೊಲಿಟಿಷಿಯನ್ ಆದರೆ ಹೇಗಿರುತ್ತೆ. ಅನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಆಗಾಗ ಮೂಡುತ್ತಲೇ ಇತ್ತು. ಇಂತದೊಂದು ಪ್ರಶ್ನೆಗೆ ರಾಧಿಕಾ ಅವರಿಂದ ಉತ್ತರ ಸಿಕ್ಕಿದೆ. ಇತ್ತೀಚಿಗಷ್ಟೆ ರಾಧಿಕಾ ಪಂಡಿತ್ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿಯಲ್ಲಿ ಹಿಂಗಾದರೆ ಹೆಂಗೆ ಎನ್ನುವ ಕಾನ್ಸೆಪ್ಟ್ ನಲ್ಲಿ ರಾಧಿಕಾ ಅವರಿಗೆ ಕೆಲ ಪ್ರಶ್ನೆಗಳನ್ನ ಕೇಳಲಾಗಿತ್ತು.

ಚಂದನವನದ ರಾಧೆಯ ಹುಟ್ಟುಹಬ್ಬಕ್ಕೆ ಸಿಕ್ತು ವಿಶೇಷ ಉಡುಗೊರೆ 

ಯಶ್ ಪೊಲಿಟಿಷಿಯನ್ ಆದರೆ ಹೇಗಿರುತ್ತೆ? ಎನ್ನುವ ಪ್ರಶ್ನೆಗೆ ರಾಧಿಕಾ ತುಂಬಾ ಚೆನ್ನಾಗಿ ಉತ್ತರ ನೀಡಿದ್ದಾರೆ. ರಾಜಕೀಯಕ್ಕೆ ರಾಕಿಂಗ್ ಸ್ಟಾರ್ ಪ್ರವೇಶ ಮಾಡಿದರೆ ಕರ್ನಾಟಕ ಇನ್ನು ಚೆನ್ನಾಗಿರುತ್ತದೆ. ಉತ್ತಮ ಕೆಲಸಗಳು ನಡೆಯುತ್ತದೆ ಎಂದಿದ್ದಾರೆ.

Radhika answered the question about Yash political entry.

ಯಶೋಮಾರ್ಗದಿಂದ ಆಗಿರುವ ಕೆಲಸಗಳನ್ನ ನೋಡಿದರೆ ಯಶ್ ರಾಜಕೀಯಕ್ಕೆ ಬಂದರೆ ಇಂತಹ ಸಾಕಷ್ಟು ಒಳ್ಳೆ ಕೆಲಸಗಳು ಆಗುತ್ತೆ ಎನ್ನುವುದನ್ನ ಅಭಿಮಾನಿಗಳು ಮಾತ್ರವಲ್ಲದೆ ಸಾಮಾನ್ಯ ಜನರು ನಂಬಿದ್ದಾರೆ.

ರಾಧಿಕಾ ಪಂಡಿತ್ ಅಭಿನಯದ ಈ ಚಿತ್ರಗಳಲ್ಲಿ ನಿಮಗೆ ಬೆಸ್ಟ್ ಯಾವುದು.?

English summary
Kannada actress Radhika Pandit answered the question about Yash political entry, In a recent interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada