For Quick Alerts
  ALLOW NOTIFICATIONS  
  For Daily Alerts

  ಹೆಸರು ಬದಲಿಸಿಕೊಂಡ ನಟಿ ರಾಧಿಕಾ ಚೇತನ್

  |

  ನಟಿ ರಾಧಿಕಾ ಚೇತನ್ ಕನ್ನಡದ ಕ್ಯೂಟ್ ನಟಿ.‌ ನಟಿಸಿದ ಮೊದಲ ಸಿನಿಮಾದಲ್ಲಿಯೇ ದೊಡ್ಡ ಹಿಟ್ ನೀಡಿದ ಈ ನಟಿ ಇದೀಗ ಒಂದರ ನಂತರ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ರಾಧಿಕಾ ಈಗ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ.

  ಇಂಡಸ್ಟ್ರಿಯಲ್ಲಿ ನಟ, ನಟಿಯರು ತಮ್ಮ ಹೆಸರನ್ನು ಬದಲಿಸಿಕೊಳ್ಳುವುದು, ತಮ್ಮ ಹೆಸರ ಅಕ್ಷರಗಳನ್ನು ಚೇಂಚ್ ಮಾಡುವುದು ಸಹಜ. ಇದೀಗ, ರಾಧಿಕಾ ಚೇತನ್ ಕೂಡ ತಮ್ಮ ಹೆಸರನ್ನು ಕೊಂಚ ಬದಲಿಸಿಕೊಂಡಿದ್ದಾರೆ. ರಾಧಿಕಾ ಚೇತನ್ ಈಗ 'ರಾಧಿಕಾ ನಾರಾಯಣ್' ಆಗಿದ್ದಾರೆ.

  ಏನಿದು ಹೆಸರು ಚೇಂಚ್ ಮಾಡಿಕೊಂಡುಬಿಟ್ಟಿದ್ದೀರಿ ಅಂದರೆ, ತಮ್ಮ ನಗುವನ್ನಷ್ಟೆ ರಾಧಿಕಾ ನಾರಾಯಣ್ ಉತ್ತರವಾಗಿ ‌ನೀಡಿದರು. ಇನ್ನು ಮುಂದೆ ಇದೇ ಹೆಸರಿನಲ್ಲಿ ಈ ನಟಿ ತಮ್ಮ ಸಿನಿ ಕೆರಿಯರ್ ಮುಂದುವರೆಸಲಿದ್ದಾರೆ.

  'ರಂಗಿತರಂಗ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ರಾಧಿಕಾ ನಾರಾಯಣ್ ಬಂದರು. ಆ ಬಳಿಕ 'ಯೂ ಟರ್ನ್', 'ಕಾಫಿತೋಟ', 'ಅಸತೋಮಾ ಸದ್ಗಮಯಾ', 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಸಿನಿಮಾಗಳಲ್ಲಿ ನಟಿಸಿದರು.

  ಸದ್ಯ 'ಮುಂದಿನ ನಿಲ್ದಾಣ' ಹಾಗೂ 'ಚೇಸ್' ಸಿನಿಮಾಗಳಲ್ಲಿ ರಾಧಿಕಾ ನಾರಾಯಣ್ ಬ್ಯುಸಿ ಇದ್ದಾರೆ. 'ಮುಂದಿನ ನಿಲ್ದಾಣ' ಹಾಡುಗಳು ತುಂಬ ಚೆನ್ನಾಗಿ ಮೂಡಿಬಂದುದ್ದು, ಸಖತ್ ಸ್ಟೈಲಿಷ್ ಆಗಿ ರಾಧಿಕಾ ಕಾಣಿಸಿಕೊಂಡಿದ್ದಾರೆ.

  English summary
  Kannada actress Radhika Chetan changed her name as Radhika Narayan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X