For Quick Alerts
  ALLOW NOTIFICATIONS  
  For Daily Alerts

  ಚುನಾವಣೆಯ ತಿಂಗಳಿನಲ್ಲಿ ಪ್ರೇಕ್ಷಕರ ಮುಂದೆ ಬರ್ತಾರೆ ರಾಧಿಕಾ

  |

  ರಾಧಿಕಾ ಕುಮಾರಸ್ವಾಮಿ ನಾಲ್ಕು ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. 'ರುದ್ರತಾಂಡವ' ಚಿತ್ರದ ನಂತರ ರಾಧಿಕಾ ಈಗ 'ಕಾಂಟ್ರಾಕ್ಟ್' ಸಿನಿಮಾದ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ. ವಿಶೇಷ ಅಂದರೆ, ಚುನಾವಣೆಯ ತಿಂಗಳಿನಲ್ಲಿ ಪ್ರೇಕ್ಷಕರ ಮುಂದೆ ರಾಧಿಕಾ ಬರ್ತಿದ್ದಾರೆ.

  ಅರ್ಜುನ್ ಸರ್ಜಾ ನಾಯಕನಾಗಿ ಅಭಿನಯಿಸಿರುವ 'ಕಾಂಟ್ರಾಕ್ಟ್' ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿತ್ತು. ಆದ್ರೀಗ ಈ ಸಿನಿಮಾಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಹೌದು,

  ಚಿತ್ರ ಮುಂದಿನ ತಿಂಗಳು ಏಪ್ರಿಲ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಮೊದಲ ಬಾರಿಗೆ ಅರ್ಜುನ್ ಸರ್ಜಾ ಮತ್ತು ರಾಧಿಕಾ ಕುಮಾರ ಸ್ವಾಮಿ ಒಟ್ಟಿಗೆ ಎಂಟ್ರಿ ಕೊಡುತ್ತಿರುವುದ್ದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

  ಔಟ್ ಅಂಡ್ ಔಟ್ ಗ್ಲಾಮರಸ್ ಲುಕ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ.!

  ಚಿತ್ರದಲ್ಲಿ ಅರ್ಜುನ್ ಸರ್ಜಾ ಉದ್ಯಮಿ ಸಂಜಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಧಿಕಾ ಗ್ಲಾಮರ್ ಲುಕ್ ನಲ್ಲಿ ಮಿಂಚಿದ್ದಾರೆ. ಅಂದ್ಹಾಗೆ 'ಕಾಂಟ್ರಾಕ್ಟ್' ಸಮೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ. ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನು ಸಮೀರ್ ಹೊತ್ತಿದ್ದಾರೆ.

  ಸ್ಮಶಾನದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ ಕಡೆಯಿಂದ ಕುರಿಬಲಿ.?

  ಇನ್ನು ವಿಶೇಷ ಅಂದ್ರೆ, ಚಿತ್ರದಲ್ಲಿ ಜೆ.ಡಿ ಚಕ್ರವರ್ತಿ, ಆಮೀರ್ ಖಾನ್ ಸಹೋದರ ಫೈಸಲ್ ಖಾನ್, ಕೆ ವಿಶ್ವನಾಥ್, ಇತಿ ಆಚಾರ್ಯ ಮತ್ತು ದುಬೈ ರಫೀಕ್ ಸೇರಿದಂತೆ ದೊಡ್ಡ ಕಲಾವಿದರ ದಂಡೆ ಇದೆ. ಸದ್ಯ ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿರುವ ಚಿತ್ರತಂಡ ಮೂರು ಭಾಷೆಯಲ್ಲಿ ಚಿತ್ರವನ್ನು ತೆರೆಗೆ ತರುತ್ತಿದೆ. ಕನ್ನಡ, ತಮಿಳು ಮತ್ತು ತೆಲುಗಿನಲ್ಲೂ 'ಕಾಂಟ್ರಾಕ್ಟ್' ಅಬ್ಬರಿಸಲಿದೆ.

  English summary
  Radhika Kumaraswamy and Arjun Sarja 'Kontract' movie set to release on April. After four years Radhika Kumaraswamy movie will release next month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X