ನಿಂತು ಹೋದ 'ರಾಧಿಕಾ' ಚಿತ್ರದ ಬಗ್ಗೆ ನಿರ್ದೇಶಕ ಬಿಚ್ಚಿಟ್ಟ ಸತ್ಯ

By Pavithra

'ನಿನಗಾಗಿ' ಕನ್ನಡ ಸಿನಿಮಾರಂಗದಲ್ಲಿ ಅದೆಷ್ಟೋ ಅಭಿಮಾನಿಗಳಿಗೆ ಆಲ್ ಟೈಂ ಫೆವರೆಟ್ ಸಿನಿಮಾ. ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕ್ಯೂಟ್ ಜೋಡಿಯೊಂದು ಪರಿಚಯವಾಗಿತ್ತು. ರಾಧಿಕಾ ಕುಮಾರಸ್ವಾಮಿ ಹಾಗೂ ವಿಜಯ ರಾಘವೇಂದ್ರ ಜೋಡಿ 'ನಿನಗಾಗಿ' ಸಿನಿಮಾದ ನಂತರ ಚಂದನವನದಲ್ಲಿ ಕ್ಯೂಟ್ ಆನ್ ಸ್ಕ್ರೀನ್ ಪೇರ್ ಆಗಿ ಫೇಮಸ್ ಆಗಿತ್ತು.

'ನಿನಗಾಗಿ' ಸಿನಿಮಾದ ನಂತರ ಇದೇ ಜೋಡಿ ಮತ್ತೆ ಬೆಳ್ಳಿತೆರೆ ಮೇಲೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿತು. ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಸಣ್ಣದೊಂದು ಬ್ರೇಕ್ ತೆಗೆದುಕೊಂಡ ಮೇಲೆ ಇವರಿಬ್ಬರನ್ನ ಮತ್ತೆ ನೋಡಲು ಸಾಧ್ಯವಿಲ್ಲ ಅಂದುಕೊಂಡಿದ್ದ ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ಸಿಕ್ಕಿತ್ತು.

'ಸ್ವೀಟಿ' ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಲ್ಲಿ ಮತ್ತೆ ನಾಯಕಿಯಾಗಿ ಮಿಂಚುವ ಸೂಚನೆ ನೀಡಿದ್ದರು. ಇದೇ ಸರಿಯಾದ ಸಂದರ್ಭ ಎಂದು ತಿಳಿದ ನಿರ್ದೇಶಕ ರಘುರಾಮ್ ವಿಜಯ ರಾಘವೇಂದ್ರ ಹಾಗೂ ರಾಧಿಕಾ ಕುಮಾರಸ್ವಾಮಿ ಜೋಡಿಯನ್ನ ಮತ್ತೆ ತೆರೆ ಮೇಲೆ ತರುವ ಪ್ರಯತ್ನ ಮಾಡಿ 'ನಮಗಾಗಿ' ಅನ್ನುವ ಚಿತ್ರವನ್ನ ನಿರ್ದೇಶನ ಮಾಡಲು ಮುಂದಾಗಿದ್ದರು. ಎರಡು ವರ್ಷದ ಹಿಂದೆ ಸೆಟ್ಟೇರಿದ್ದ 'ನಮಗಾಗಿ' ಸಿನಿಮಾ ಈಗ ಸೌಂಡ್ ಮಾಡುತ್ತಿದೆ. ಸಾಕಷ್ಟು ದಿನಗಳ ನಂತರ ನಿರ್ದೇಶಕ ಚಿತ್ರದ ಬಗ್ಗೆ ಸತ್ಯವನ್ನ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ

ರಾಧಿಕಾ ಚಿತ್ರಕ್ಕೆ ಎಳ್ಳು-ನೀರು ಬಿಟ್ಟ ನಿರ್ದೇಶಕ

ರಾಧಿಕಾ ಚಿತ್ರಕ್ಕೆ ಎಳ್ಳು-ನೀರು ಬಿಟ್ಟ ನಿರ್ದೇಶಕ

ನಿರ್ದೇಶಕ ರಘುರಾಮ್ ಚಂದನವನದಲ್ಲಿ ವಿಭಿನ್ನ ರೀತಿಯ ಸಿನಿಮಾ ಮಾಡಬೇಕು ಅನ್ನೋ ಉದ್ದೇಶದಿಂದ 'ನಮಗಾಗಿ' ಚಿತ್ರವನ್ನ ಡೈರೆಕ್ಟ್ ಮಾಡಲು ಮುಂದಾಗಿದ್ದರು. ಪ್ರಾರಂಭದಲ್ಲಿ ಚಿತ್ರೀಕರಣ ಭರದಿಂದ ಸಾಗಿತ್ತು. ಕೆಲ ದಿನಗಳ ನಂತರ ನಿರ್ಮಾಪಕರ ಸಮಸ್ಯೆಯಿಂದ ಚಿತ್ರ ನಿಂತು ಹೋಯಿತು.

ಅರ್ಧಕ್ಕೆ ನಿಂತ ಸಿನಿಮಾ

ಅರ್ಧಕ್ಕೆ ನಿಂತ ಸಿನಿಮಾ

'ನಮಗಾಗಿ' ಸಿನಿಮಾವನ್ನ ವೇಣುಗೋಪಾಲ್ ಎನ್ನುವವರು ನಿರ್ಮಾಣ ಮಾಡಿದ್ದರು. ಶೂಟಿಂಗ್ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಸಮಸ್ಯೆಗಳು ಎದುರಾಗಿ ಚಿತ್ರ ನಿರ್ಮಾಣ ಮಾಡದೆ ಸುಮ್ಮನಾಗಿದ್ದರು. ನಂತರ ನಟಿ ರಾಧಿಕಾ ಕುಮಾರಸ್ವಾಮಿ ಅವರೇ ಚಿತ್ರವನ್ನ ನಿರ್ಮಾಣ ಮಾಡಲು ಮುಂದೆ ಬಂದಿದ್ದರು ಆದರೆ ಚಿತ್ರ ಮಾತ್ರ ಮುಂದುವರೆಯಲಿಲ್ಲ.

'ನಮಗಾಗಿ' ಚಿತ್ರದ ಕಥೆ ಅಂತ್ಯ

'ನಮಗಾಗಿ' ಚಿತ್ರದ ಕಥೆ ಅಂತ್ಯ

'ನಮಗಾಗಿ' ಸಿನಿಮಾದಿಂದ ಏನೆಲ್ಲಾ ಆಯ್ತು, ಚಿತ್ರದಿಂದ ಏನೆಲ್ಲಾ ಕಳೆದುಕೊಂಡೆ ಎನ್ನುವುದರ ಬಗ್ಗೆ ನಿರ್ದೇಶಕ ರಘುರಾಮ್ ಟ್ವಿಟ್ ಮಾಡಿದ್ದಾರೆ. ಸಾಕಷ್ಟು ಪ್ರಯತ್ನ ಪಟ್ಟರು ಚಿತ್ರೀಕರಣ ಮತ್ತೆ ಪ್ರಾರಂಭ ಮಾಡಲು ಸಾಧ್ಯವಾಗಲಿಲ್ಲ ಎನ್ನುವುದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

'ನಮಗಾಗಿ' ಚಿತ್ರ ಮುಗಿದ ಅಧ್ಯಾಯ

'ನಮಗಾಗಿ' ಚಿತ್ರ ಮುಗಿದ ಅಧ್ಯಾಯ

'ನಮಗಾಗಿ' ಸಿನಿಮಾ ಚಿತ್ರೀಕರಣ ಮತ್ತೆ ಶುರುವಾಗುವುದಿಲ್ಲ, ನಿರ್ಮಾಪಕರೇ ಪ್ರಯತ್ನ ಪಟ್ಟರು ನಾನು ನಿರ್ದೇಶನ ಮಾಡುವುದಿಲ್ಲ ಎಂದಿದ್ದಾರೆ ನಿರ್ದೇಶಕ ರಘುರಾಮ್. ಸತತ ಮೂರು ವರ್ಷ 'ನಮಗಾಗಿ' ಸಿನಿಮಾಗಾಗಿ ಎಲ್ಲಾ ಕೆಲಸ ಹಾಗೂ ಅಭಿನಯದ ಕಡೆಗೂ ಗಮನ ಕೊಡದೆ ಸಮಯ ವ್ಯರ್ಥ ಮಾಡಿದ್ದಾರೆ. ಹಾಗಾಗಿ ಇನ್ನು ಮುಂದೆ ನಮಗಾಗಿ ಚಿತ್ರ ಮುಗಿದ ಅಧ್ಯಾಯ.

More from Filmibeat

English summary
Kannada actress Radhika Kumaraswamy and Vijay Raghavendra's performance 'Namgagi' movie shelved. Director Raghuram wrote on Twitter Namagagi film is not going to start again.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X