For Quick Alerts
  ALLOW NOTIFICATIONS  
  For Daily Alerts

  ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾದ ರಾಧಿಕಾ ಕುಮಾರಸ್ವಾಮಿ

  |

  ನಟಿ ರಾಧಿಕಾ ಕುಮಾರಸ್ವಾಮಿ ಅವರು ಸಿಸಿಬಿ ಮುಂದೆ ಇಂದು ಹಾಜರಾಗಿದ್ದು, ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ.

  CCB ವಿಚಾರಣೆಗೆ ಹಾಜರಾದ Radhika Kumarswamy | Filmibeat Kannada

  ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನಿನ್ನೆ ನೊಟೀಸ್ ಜಾರಿ ಮಾಡಿದ್ದರು. ಅದರಂತೆ ಇಂದು ರಾಧಿಕಾ ಕುಮಾರಸ್ವಾಮಿ ಅವರು ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.

  ಆರ್‌ಆರ್‌ಆರ್ ಮುಖಂಡನ ಹೆಸರಿನಲ್ಲಿ ನಿಗಮ ಮಂಡಳಿಗಳಲ್ಲಿ ಅಧಿಕಾರ ಕೊಡಿಸುವುದಾಗಿ, ರಾಜ್ಯಪಾಲರನ್ನಾಗಿ ಮಾಡುವುದಾಗಿ ಸುಳ್ಳು ಹೇಳಿ ಹಲವರಿಂದ ಕೋಟ್ಯಂತರ ಹಣವನ್ನು ವಸೂಲಿ ಮಾಡಿದ್ದ ಯುವರಾಜ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೆ ಹಣ ವರ್ಗಾವಣೆ ಆಗಿದ್ದ ಕಾರಣ ರಾಧಿಕಾ ಅವರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದೆ.

  ರಾಧಿಕಾ ಅವರು 11 ಗಂಟೆ ಸುಮಾರಿಗೆ ಸಿಸಿಬಿ ಕಚೇರಿ ಪ್ರವೇಶಿಸಿದ್ದು, ಸಿಸಿಬಿಯ ಎಸಿಪಿ ನಾಗರಾಜ್ ಹಾಗೂ ತಂಡದಿಂದ ರಾಧಿಕಾ ಕುಮಾರಸ್ವಾಮಿ ಅವರ ವಿಚಾರಣೆ ನಡೆಯುತ್ತಿದೆ. ತಂಡದಲ್ಲಿ ಮಹಿಳಾ ಅಧಿಕಾರಿಗಳು ಸಹ ಇರಲಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರ ಮೊಬೈಲ್ ಅನ್ನು ವಶಕ್ಕೆ ಪಡೆವ ಸಾಧ್ಯತೆ ಇದೆ.

  ಯುವರಾಜ್ ಜೊತೆಗಿನ ಹಣಕಾಸು ಸಂಬಂಧ. ಆತನ ಪರಿಚಯ, ಹಣ ಪಡೆದುಕೊಂಡಿದ್ದಕ್ಕೆ ಕಾರಣ. ಬೇರೆ ಇತರೆ ಹಣಕಾಸು ವ್ಯವಹಾರಗಳು ಇನ್ನಿತರೆ ವಿಷಯಗಳ ಬಗ್ಗೆ ಸಿಸಿಬಿ ಪೊಲೀಸರು ರಾಧಿಕಾ ಕುಮಾರಸ್ವಾಮಿ ಅನ್ನು ವಿಚಾರಣೆ ನಡೆಸಲಿದ್ದಾರೆ.

  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಅನ್ನು ಕೆಲವು ದಿನಗಳ ಹಿಂದೆ ಇದೇ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು.

  English summary
  Radhika Kumaraswamy inquired by CCB police today in Chamarajnagar office. She summoned in a cheating case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X